ಚೋನಮನೆ ಸೇತುವೆ ಲೋಕಾರ್ಪಣೆಗೆ ಸಿದ್ಧ
Team Udayavani, Jul 16, 2017, 2:40 AM IST
ಕುಂದಾಪುರ: ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೋನಮನೆ ಬಳಿ ಕುಬಾj ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಅಲ್ಲದೇ ಈ ಭಾಗದ ಜನರ ದಶಕಗಳ ಬೇಡಿಕೆಯ ಈಡೇರಿಕೆಯ ದಿನಗಳು ಬಹು ಹತ್ತಿರವಾಗಿದೆ.
ಮರದ ಸೇತುವೆಗೆ ಮುಕ್ತಿ
ಚೋನಮನೆಯ ಶ್ರೀ ಶನೈಶ್ಚರ ದೇವಸ್ಥಾನಕ್ಕೆ ರಾಜ್ಯದ ಹಾಗೂ ಪರಿಸರದ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ದೂರದ ಊರುಗಳಿಗೆ ತೆರಳಲು ಇಲ್ಲಿನ ಕುಬಾj ನದಿಯನ್ನು ದಾಟಿ ಹೋಗಬೇಕಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಕುಬಾj ನದಿಗೆ ಚೋನಮನೆಯಲ್ಲಿ ಶ್ರೀ ಶನೈಶ್ಚರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಶೋಕ ಶೆಟ್ಟಿ ಹಾಗೂ ಪರಿಸರದವರು ಸೇರಿಕೊಂಡು ತಾತ್ಕಾಲಿಕ ಮರದ ಸೇತುವೆ ಯನ್ನು ನಿರ್ಮಿಸುತ್ತಾ ಬಂದಿದ್ದರು. ಇಲ್ಲಿನ ಜನರು, ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಅಡಿಕೆ ಮರದಿಂದ ನಿರ್ಮಾಣ ಮಾಡಲಾದ ಮರದ ಸೇತುವೆಯನ್ನೆ ಅವಲಂಬಿಸಿದ್ದರು.
ಪ್ರಸ್ತುತ ಶಾಸಕ ಕೆ.ಗೋಪಾಲ ಪೂಜಾರಿ ಅವರ ವಿಶೇಷ ಮುತುವರ್ಜಿಯಿಂದ ರೂ. 159.50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ವಾಗಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಸುಮಾರು 150 ಮೀಟರ್ ಉದ್ದದ ಸಂಪರ್ಕ ರಸ್ತೆ ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲಿ ಈ ರಸ್ತೆ ನಿರ್ಮಾಣವಾಗಿ ಸೇತುವೆ ಅಧಿಕೃತ ವಾಗಿ ಉದ್ಘಾಟನೆಗೊಳ್ಳಲಿದೆ.
ಬಹು ಬೇಡಿಕೆಯ ಸೇತುವೆ
ಚೋನಮನೆ ಪರಿಸರ ದಟ್ಟಾರಣ್ಯದಿಂದ ಕೂಡಿದೆ. ಇಲ್ಲಿ ಮಳೆಗಾಲದಲ್ಲಿ ಕುಬಾj ನದಿ ತುಂಬಿ ಹರಿಯುತ್ತದೆ. ಕೃಷಿ ಹಾಗೂ ಕೂಲಿ ಕೆಲಸವೇ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಪರಿಸರದ ಚೋನಮನೆ ಶ್ರೀ ಶನೈಶ್ಚರ ದೇವಸ್ಥಾನ ಈ ಭಾಗದಲ್ಲಿ ತನ್ನದೇ ಆದ ಶಕ್ತಿ ಕೇಂದ್ರವಾಗಿ ಮೂಡಿಬಂದಿದೆ. ಮಳೆಗಾಲದಲ್ಲಿ ಆಜ್ರಿ ಹಾಗೂ ಕಮಲಶಿಲೆ ಗ್ರಾಮಗಳ ನಡುವೆ ದಟ್ಟ ಅರಣ್ಯದೊಳಗೆ ಮೈದುಂಬಿ ಹರಿಯುವ ಕುಬಾj ನದಿಯನ್ನು ದಾಟಿ ದಿನ ನಿತ್ಯದ ಬದುಕನ್ನು ಕಂಡುಕೊಂಡ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ದೊರಕಿದೆ.
ಇಲ್ಲಿ ಶಾಶ್ವತ ಸೇತುವೆ ನಿರ್ಮಾಣದಿಂದ ಚೋನಮನೆ ಶನೈಶ್ಚರ ದೇಗುಲ. ಆಜ್ರಿ, ಕಮಲಶಿಲೆ, ಯಳಬೇರು, ತಗ್ಗುಂಜೆ, ಬ್ಯಾಗಿಬೇರು ಭಾಗದ ಹಲವಾರು ಕುಟುಂಬಗಳ ಜನರಿಗೆ ಕಮಲಶಿಲೆ ಶ್ರೀ ಬ್ರಾಹ್ಮಿà ದುರ್ಗಾಪರಮೆಶ್ವರೀ ದೇವಸ್ಥಾನ ಅತಿ ಹತ್ತಿರವಾಗಲಿದೆ. ಅಲ್ಲದೇ ಆಜ್ರಿ ಮೂಲಕ ಕಮಲಶಿಲೆಗೆ ತೆರಳುವವರಿಗೆ ಈ ಹಿಂದೆ ಸುತ್ತಿ ಬಳಿಸಿ ಸಂಚರಿಸಬೇಕಾಗಿದ್ದು ಈಗ ಸೇತುವೆ ನಿರ್ಮಾಣದಿಂದ ಸುಮಾರು 12 ಕಿ.ಮೀ. ಉಳಿತಾಯವಾಗಲಿದೆ. ಈ ಮಾರ್ಗದಲ್ಲಿ ಈಗ ಬಸ್ಸಿನ ಸಂಪರ್ಕವಾಗಿದ್ದು, ಯಾತ್ರಾರ್ಥಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ.
ಆಜ್ರಿ, ಚೋನಮನೆ ಹಾಗೂ ಪರಿಸರದ ಜನರ ಬಹು ದಿನಗಳ ಬೇಡಿಕೆ ಹಾಗೂ ಅವರು ಸಂಪರ್ಕಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ರೂ.159.50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆಗೆ ಹೊಂದಿಕೊಂಡಂತೆ ಇರುವ ಸಂಪರ್ಕ ರಸ್ತೆ ಪೂರ್ಣಗೊಳಸಿ ಮುಂದಿನ ವಾರದಲ್ಲಿ ಉದ್ಘಾಟಿಸಲಾಗುವುದು.
– ಕೆ. ಗೊಪಾಲ ಪೂಜಾರಿ, ಬೈಂದೂರು ಕ್ಷೇತ್ರದ ಶಾಸಕ
ಈ ಹಿಂದೆ ಚೋನಮನೆಯಲ್ಲಿ ತುಂಬಿ ಹರಿಯುವ ಕುಬಾj ನದಿಗೆ ಅಡ್ಡಲಾಗಿ ಸ್ಥಳೀಯರ ಸಹಕಾರದೊಂದಿಗೆ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಹಲವಾರು ವರ್ಷಗಳಿಂದ ಸ್ಥಳೀಯರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಈಗ ಸೇತುವೆಯ ಕನಸು ನನಸಾಗಿದೆ. ಇದರಿಂದಾಗಿ ಆಜ್ರಿ ಮೂಲಕ ಕಮಲಶಿಲೆಗೆ ತೆರಳುವವರಿಗೆ ಹಾಗೂ ಶ್ರೀ ಕ್ಷೇತ್ರ ಚೋನಮನೆಗೆ ಬರುವ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾಗಿದೆ.
– ಅಶೋಕ ಶೆಟ್ಟಿ, ಶ್ರೀ ಶನೈಶ್ಚರ ದೇವಸ್ಥಾನ ಚೋನಮನೆಯ ಧರ್ಮದರ್ಶಿ
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.