ಕೇರಳ ಪ್ರಿಂಟರ್ ಅಸೋಸಿಯೇಶನ್ ವಲಯ ಸಮಿತಿ ಸಮ್ಮೇಳನ
Team Udayavani, Jul 16, 2017, 2:25 AM IST
ಮುಳ್ಳೇರಿಯ: ಕೇರಳ ಪ್ರಿಂಟರ್ ಅಸೋಸಿಯೇಶನ್(ಕೆ.ಪಿ.ಎ.) ಕಾಸರಗೋಡು ವಲಯ ಸಮಿತಿಯ ಸಮ್ಮೇಳನವು ಕಾಸರಗೋಡು ಮುನ್ಸಿಪಲ್ ವನಿತಾ ಸಭಾಂಗಣದಲ್ಲಿ ಜರಗಿತು.
ಕೆ.ಪಿ.ಎ. ಜಿಲ್ಲಾಧ್ಯಕ್ಷ ಎನ್.ಕೇಳು ನಂಬ್ಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯರಾದ ವೇಣು ಗೋಪಾಲ ಕೆ. ಧ್ವಜಾ ರೋಹಣಗೈದರು. ಕೇರಳ ಪ್ರಿಂಟರ್ ಅಸೋಸಿಯೇಶನ್ ವಲಯ ಅಧ್ಯಕ್ಷ ರೆಜಿ ಮ್ಯಾಥುÂ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿಬಿ ಕೊಡಿಯಂ ಕುನ್ನಿಲ್, ಜಯರಾಮ್ ಎಂ. ಮಾತ ನಾಡಿದರು. ಅನೂಪ್ ಕಳ್ನಾಡು, ಸಿರಾಜುದ್ದೀನ್, ಪುಂಡಲೀಕ ಶೆಣೈ, ರಾಜಾರಾಮ್ ಪೆರ್ಲ, ಮಹ್ಮದ್ ಸಾಲಿ, ಮುಜೀಬ್ ಕೆ.ಎ. ಮೊದಲಾ ದವರು ಮಾತನಾಡಿದರು. 2016-17 ವರ್ಷದ ಆಯವ್ಯಯ ಲೆಕ್ಕಪತ್ರವನ್ನು ಕೋಶಾಧಿಕಾರಿ ರವಿಶಂಕರ ಎ. ಮಂಡಿಸಿದರು. ವಲಯ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಬಲ್ಲಾಳ್ ನಾಟೆಕಲ್ಲು ಸ್ವಾಗತಿಸಿದರು. ಅಜಯಕುಮಾರ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಇಂಟೆಲಿಜೆನ್ಸ್ ಇನ್‌ಸ್ಪೆಕ್ಟರ್ ಮಧು ಕರಿಂಬಿಲ್, ರಮೇಶ್, ರತ್ನಾಕರ ಜಿ.ಎಸ್.ಟಿ.ಯ ಬಗ್ಗೆ ವಿಶೇಷ ತರಗತಿಯನ್ನು ನಡೆಸಿದರು.
2017-19ನೇ ವಲಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಶೋಕ ಕುಮಾರ್ ಟಿ.ಪಿ. ಚುನಾವಣಾಧಿಕಾರಿಯಾಗಿದ್ದರು.
ಕೆ.ಪಿ.ಎ ವಲಯ ಸಮಿತಿಯ ಅಧ್ಯಕ್ಷರನ್ನಾಗಿ ರೆಜಿ ಮ್ಯಾಥುÂ (ರೈನ್‌ಬೋ ಬದಿಯಡ್ಕ), ಉಪಾಧ್ಯಕ್ಷ ರನ್ನಾಗಿ ಅಬ್ದುಲ್ಲ (ಲತೀಪಿಯ ಪ್ರಸ್ ಕುಂಬಳೆ), ಕಾರ್ಯ ದರ್ಶಿಯಾಗಿ ರಾಮಚಂದ್ರ ಬಲ್ಲಾಳ್ ನಾಟೆಕಲ್ಲು (ಬಲ್ಲಾಳ್ ಪ್ರಸ್ ಮುಳ್ಳೇರಿಯ), ಕೋಶಾಧಿಕಾರಿಗಳಾಗಿ ರವಿಶಂಕರ ಎ., (ಗೌರಿಶಂಕರ ಆಫ್‌ಸೆಟ್ ಕುಂಬಳೆ) ಜತೆಕಾರ್ಯದರ್ಶಿಯಾಗಿ ರಾಜಾರಾಮ್ ಪೆರ್ಲ (ಗುರು ಕುಲ ಪ್ರಸ್ ಪೆರ್ಲ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಿವಾನಂದ ಸೂರಂಬೆ„ಲು, ವಸಂತ ಕುಮಾರ್ ಉಪ್ಪಳ, ರಹೀಂ ಕಾಸರಗೋಡು, ಮಣಿ ಕಾಸರಗೋಡು, ವರ ಪ್ರಸಾದ್ ಕಾಸರಗೋಡು, ಗಣೇಶ್ ಪ್ರಸಾದ್ ಕಾಸರಗೋಡು, ಅಜಯನ್ ಕಾಸರಗೋಡು, ಹನೀಫ್ ಕಾಸರಗೋಡು, ಸಿರಾಜುದ್ದೀನ್, ಮಹ್ಮದ್ ಸಾಲಿ ಇವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.