ರಾಜ್ಯದ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜ ವಿತರಣೆ: ಕೃಷಿ ಸಚಿವ
Team Udayavani, Jul 16, 2017, 2:30 AM IST
ಕುಂಬಳೆ: ರಾಜ್ಯದ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜವನ್ನು ಸರಕಾರದ ವತಿಯಿಂದ ನೀಡಲಾಗುವುದು. ಈ ಬಾರಿಯ ಓಣಂ ಹಬ್ಬವನ್ನು ಅನ್ಯರಾಜ್ಯದ ತರಕಾರಿ ರಹಿತವಾಗಿ ಊರ ನಾಟಿ ತರಕಾರಿ ಯೊಂದಿಗೆ ಆಚರಿಸಬೇಕೆಂಬುದಾಗಿ ರಾಜ್ಯ ಕೃಷಿಸಚಿವ ವಿ.ಎಸ್. ಸುನಿಲ್ ಕುಮಾರ್ ಹೇಳಿದರು.
ಕಾಸರಗೋಡು ಜಿಲ್ಲೆಯ ಮುಕ್ಕುಟಿ ಚಾಲ್ನಲ್ಲಿ ಮಣ್ಣು ಮತ್ತು ಜಲಸಂರಕ್ಷಣೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಸ್ಥಳೀಯಾಡಳಿತ ಮತ್ತು ಕೃಷಿ ಭವನ, ಕುಟುಂಬಶ್ರೀ ಮತ್ತು ಸಾರ್ವಜನಿಕರ ಪಾಲುದಾರಿಕೆಯಲ್ಲಿ ರಾಜ್ಯದಲ್ಲಿ ಮನೆ ಅಂಗಳದಲ್ಲಿ ತರಕಾರಿ ಬೆಳೆಯುವ ಯೋಜನೆಯನ್ನು ನಿರ್ವಹಿ ಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇದರಂತೆ ಉತ್ತಮ ತರಕಾರಿ ಕೃಷಿ ಮಾಡಿದ ಮಹಿಳೆಯರಿಗೆ ಪ್ರಥಮ ಬಹುಮಾನವಾಗಿ ಒಂದು ಲಕ್ಷÒ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಪ್ರಕೃತಿ ಮತ್ತು ಜಲಾಶಯ ಸಂರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಮುಂದಾಗಬೇಕೆಂದರು.
ಪನತ್ತಡಿಯಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ವಹಿಸಿ ಮಾತ ನಾಡಿ ಕೃಷಿಯನ್ನು ಮತ್ತು ನೀರನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ಹಸ್ತಾಂತರಿಸಬೇಕೆಂದರು. ಎಲ್ಲರೂ ತಮ್ಮ ಹಿತ್ತಿಲಲ್ಲಿ, ಅಂಗಳದಲ್ಲಿ ತರಕಾರಿ ಬೆಳೆಯಲು ಮುಂದಾಗಬೇಕೆಂದರು.
ಸಮಾರಂಭದಲ್ಲಿ ಸಚಿಯದ್ವಯರು ಸೋಯಿಲ್ ಹೆಲ್ತ್ ಕಾರ್ಡ್ಗಳನ್ನು ವಿತರಿಸಿದರು.
ಮಣ್ಣು ಸಂರಕ್ಷಣೆ ಇಲಾಖೆಯ ನಿರ್ದೇಶಕ ಟಿ. ಜಸ್ಟಿನ್ ಮ್ಯಾಥುÂ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಸದಸ್ಯೆ ಇ. ಪದ್ಮಾವತಿ, ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾಂಬಿಕಾ, ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಸಿ. ಮಾಧವನ್, ರಜನಿ ದೇವಿ, ಪಿ. ತಂಬಾನ್ ಪರಪ್ಪ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.