ಆಗಸ್ಟ್‌ನೊಳಗೆ ಪುತ್ತೂರು ವಿಭಾಗಕ್ಕೆ ನಗರ ಸಾರಿಗೆ ಬಸ್
Team Udayavani, Jul 16, 2017, 3:20 AM IST
ಸುಳ್ಯ: ಕಡಬ ತಾಲೂಕಿಗೆ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ನೆಲ್ಯಾಡಿ ಬಸ್ ನಿಲ್ದಾಣದ ಸದ್ಬಳಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಶಾಸಕ ಎಸ್. ಅಂಗಾರ ಅವರ ಬೇಡಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯದಲ್ಲಿ 3.5 ಕೋ.ರೂ.ವೆಚ್ಚದ ನೂತನ ಘಟಕ ಉದ್ಘಾಟನೆ ಸಮಾ ರಂಭದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕಡಬ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಅಲ್ಲಿಗೆ ಹೊಸ ಬಸ್ ನಿಲ್ದಾಣ, ನೆಲ್ಯಾಡಿಯಲ್ಲಿ ಬಸ್ ನಿಲ್ದಾಣ ಇದ್ದು, ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಉತ್ತರಿಸಿದ ಸಾರಿಗೆ ಸಚಿವರು, ಈ ಸರಕಾರ ಅವಧಿ ಮುಗಿಯುವ ಮೊದಲು ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವು ದಾಗಿ ಭರವಸೆ ನೀಡಿದರು. ಸುಳ್ಯ ಶಾಸಕರ ಬೇಡಿಕೆಯಂತೆ ಸುಳ್ಯ ಘಟಕದ ಕಾಂಕ್ರೀಟ್‌ಗೆ ಅನುದಾನ ಒದಗಿಸಲಾಗುವುದು. ಸುಳ್ಯ ಬಸ್ ನಿಲ್ದಾಣ ವಿಸ್ತರಣೆಗೆ ಕ್ರಮ ಕೈಗೊಳ್ಳ ಲಾಗುವುದು. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆಗಲಿ. ಅನಂತರ ಅನುದಾನ ಒದಗಿಸುವುದಾಗಿ ಅವರು ನುಡಿದರು.
ಆಗಸ್ಟ್‌ನಲ್ಲಿ ಪುತ್ತೂರಿಗೆ
ನಗರ ಸಾರಿಗೆ ಬಸ್
ಪುತ್ತೂರು ವಿಭಾಗ ಕೇಂದ್ರಕ್ಕೆ ನಗರ ಸಾರಿಗೆ ಬಸ್ ಬಾರದಿರುವ ಬಗ್ಗೆ ಉಲ್ಲೇಖೀಸಿದ ಸಚಿವರು, ಬಿಎಸ್3, ಬಿಎಸ್4 ನಿಯಮದಿಂದ ಬಸ್ ಬರಲು ವಿಳಂಬವಾಗಿದೆ. ಆಗಸ್ಟ್ ಕೊನೆ ಯೊಳಗೆ ಇಲ್ಲಿಗೆ ನಗರ ಸಾರಿಗೆ ಬಸ್ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಮೈಸೂರು-ಧರ್ಮಸ್ಥಳ ಸಂಪರ್ಕಕ್ಕೆ ಶಾಂತಿಮೊಗರಿನಲ್ಲಿ ಸೇತುವೆ ನಿರ್ಮಾಣ ವಾಗಿದ್ದು, ಇದರಿಂದ ಸಂಚಾರದಲ್ಲಿ 50 ಕಿ.ಮೀ. ದೂರ ಉಳಿತಾಯವಾಗಲಿದೆ. ಈ ಮಾರ್ಗದಲ್ಲಿ ಓಡಾಟಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಶಾಸಕ ಅಂಗಾರ ಅವರ ಪ್ರಸ್ತಾವನೆಗೆ, ಸಚಿವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಬಗ್ಗೆ ಉದಯವಾಣಿ ಸುದಿನ ಶನಿವಾರ ವರದಿ ಪ್ರಕಟಿಸಿತ್ತು.
ಸುಬ್ರಹ್ಮಣ್ಯಕ್ಕೆ ಹೊಸ ಘಟಕ
ಕ.ರಾ.ರ.ಸಾ. ನಿಗಮ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ, ಸುಬ್ರಹ್ಮಣ್ಯಕ್ಕೆ ನೂತನ ಬಸ್ ಘಟಕ ನಿರ್ಮಿಸುವ ಪ್ರಸ್ತಾಪವಿದ್ದು, ಅಲ್ಲಿ ಜಾಗದ ಕೊರತೆ ಎದುರಾಗಿದೆ. ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರು ಜಾಗದ ವ್ಯವಸ್ಥೆ ಮಾಡಿಕೊಟ್ಟ ತತ್‌ಕ್ಷಣವೇ ಅಲ್ಲಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.ಈ ವರ್ಷದ ಡಿಸೆಂಬರ್‌ಗೆ ಮೊದಲು ಕಡಬ, ಕಾರ್ಕಳ, ಬೈಂದೂರಿನಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣದ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಕಾಮಗಾರಿ ಉದ್ಘಾಟನೆ
ಇದೇ ಸಂದರ್ಭ 1 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 11 ವಸತಿ ಗೃಹಕ್ಕೆ ಸಚಿವ ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಐದು ಹೊಸ ರೂಟ್‌ಗಳಲ್ಲಿ ಸಂಚರಿಸುವ ಬಸ್‌ಗಳನ್ನು ಶಾಸಕ ಅಂಗಾರ, ಶಕುಂತಳಾ ಟಿ. ಶೆಟ್ಟಿ ಹಾಗೂ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಕೇರಳ ಚೆಂಡೆ ವಾದನದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಶಾಸಕಿ ಶಕುಂತಳಾ ಟಿ ಶೆಟ್ಟಿ, ಸುಳ್ಯ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ವಾರ್ಡ್ ಸದಸ್ಯ ಎನ್.ಎ. ರಾಮಚಂದ್ರ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಲತಾ ಬಾಳಿಲ, ಹರೀಶ್ ಕಂಜಿಪಿಲಿ, ಪಿ.ಪಿ. ವರ್ಗಿಸ್, ಪ್ರಮೀಳಾ ಜನಾರ್ದನ, ಮಂಡಳಿ ನಿರ್ದೇಶಕರಾದ ರಮೇಶ್ ಶೆಟ್ಟಿ, ಟಿ.ಕೆ. ಸುಧೀರ್. ಶೌಕತ್ ಆಲಿ, ಸಾರಿಗೆ ಇಲಾಖೆಯ ಜಗದೀಶ್ಚಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ
ಮೊದಲಾದವರು ಉಪಸ್ಥಿತರಿದ್ದರು.
ಉಮೇಶ್ ವಾಗ್ಲೆಗೆ ಶ್ಲಾಘನೆ
ನೂತನ ಬಸ್ ಘಟಕ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳದ ಕಾನೂನು ಹೋರಾಟಕ್ಕೆ ಸಂಬಂಧಿಸಿ ಹತ್ತಾರು ವರ್ಷಗಳಿಂದ ಯಾರಿಂದಲೂ ಫಲಾಪೇಕ್ಷೆ ಬಯಸದೆ ಹೋರಾಟ ನಡೆಸಿ ಯಶಸ್ವಿಯಾದ ಉಮೇಶ್ ವಾಗ್ಲೆ ಅವರ ಶ್ರಮವನ್ನು ಶಾಸಕ ಎಸ್. ಅಂಗಾರ ಉಲ್ಲೇಖೀಸಿದರು. ಸಚಿವ ರಾಮಲಿಂಗಾ ರೆಡ್ಡಿ ತನ್ನ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ಉಮೇಶ್ ವಾಗ್ಲೆ ಅವರ ಕಾರ್ಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಉಮೇಶ್ ವಾಗ್ಲೆ ಅವರನ್ನು ಸಚಿವರು ಸಮ್ಮಾನಿಸಿದರು. ಉತ್ತಮ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.