ಕರ್ಣಾಟಕ ಬ್ಯಾಂಕ್: 133.85 ಕೋ.ರೂ. ಲಾಭ
Team Udayavani, Jul 16, 2017, 3:00 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅಂತ್ಯಕ್ಕೆ ಶೇ. 10.13ರ ವೃದ್ಧಿಯೊಂ ದಿಗೆ 133.85 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭ 121.54 ಕೋ.ರೂ. ಆಗಿತ್ತು.
ಬ್ಯಾಂಕಿನ ನಿರ್ವಹಣಾ ಲಾಭವು 309.70 ಕೋ.ರೂ. ಆಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 18.25ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 261.92 ಕೋ.ರೂ. ನಿರ್ವಹಣಾ ಲಾಭ ಗಳಿಸಿತ್ತು. ಬ್ಯಾಂಕಿನ ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ. 16.38ರ ದರದಲ್ಲಿ ಹೆಚ್ಚಳಗೊಂಡು 424.42 ಕೋ.ರೂ. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಲಾಭವು 364.69 ಕೋ.ರೂ.ಗಳಾಗಿತ್ತು. ಜು. 15ರಂದು ಮಂಗಳೂರಿನಲ್ಲಿ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಭೆಯಲ್ಲಿ 2017ರ ಜೂನ್ ಮಾಸಾಂತ್ಯದ ಹಣಕಾಸು ವರದಿಯನ್ನು ಅನುಮೋದಿಸಲಾಯಿತು.
ಶೇ. 9.56 ಬೆಳವಣಿಗೆ
ಬ್ಯಾಂಕಿನ ಒಟ್ಟು ವ್ಯವಹಾರವು 2017ರ ಜೂ. 30ಕ್ಕೆ 94,711 ಕೋ.ರೂ. ತಲುಪಿದ್ದು ಇದು ವರ್ಷದಿಂದ ವರ್ಷಕ್ಕೆ ಶೇ. 9.56 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿ ಮೊತ್ತವು 51,501 ಕೋ.ರೂ.ನಿಂದ 56,227 ಕೋ.ರೂ. ತಲುಪಿ ಶೇ. 9.18ರ ಪ್ರಗತಿ ದಾಖಲಿಸಿದೆ. ಬ್ಯಾಂಕಿನ ಮುಂಗಡವು 34,946 ಕೋ.ರೂ.ನಿಂದ 38,484 ಕೋ.ರೂ. ತಲುಪಿ ಶೇ. 10.12ರ ದರದಲ್ಲಿ ವೃದ್ಧಿ ಸಾಧಿಸಿದೆ. ಬ್ಯಾಂಕಿನ ಸಿ.ಡಿ. ಅನುಪಾತವು ಉತ್ತಮಗೊಂಡಿದ್ದು ಶೇ. 68.44ರಷ್ಟಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಸಿ.ಡಿ. ಅನುಪಾತವು ಶೇ 67.86 ಆಗಿತು.¤ ಕಾಸಾ (ಚಾಲ್ತಿಖಾತೆ ಹಾಗೂ ಉಳಿತಾಯ ಖಾತೆ ) ಠೇವಣಿಗಳು ಶೇ. 28.94ರಷ್ಟಕ್ಕೆ ಏರಿವೆ. ಪ್ರಸಕ್ತ ಸಾಲಿನ ಮೊದಲ ತ್ತೈಮಾಸಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು 1,691 ಕೋ.ರೂ.ಗಳಷ್ಟಿದ್ದು, ಇದು ಬ್ಯಾಂಕಿನ ಒಟ್ಟು ಮುಂಗಡದ ಶೇ.4.34ರಷ್ಟಿದೆ. ನಿವ್ವಳ ಅನುತ್ಪಾದಕ ಆಸ್ತಿಯು 1,230 ಕೋ.ರೂ.ಗಳಾಗಿದ್ದು ನಿವ್ವಳ ಮುಂಗಡದ ಶೇ. 3.20ರಷ್ಟಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಬಂಡವಾಳ ಪರ್ಯಾಪ್ತದ ಅನುಪಾತವು ಕನಿಷ್ಠ ಶೇ. 10.25 ಇರಬೇಕಾಗಿದು,ª 2017-18ರ ಮೊದಲ ತ್ತೈಮಾ ಸಾಂತ್ಯಕ್ಕೆ (30-06-2017) ಬ್ಯಾಂಕಿನ ಬಂಡವಾಳ ಪರ್ಯಾಪ್ತದ ಅನುಪಾತವು (ಕ್ಯಾಪಿಟಲ್ ಅಡಿಕ್ವಸಿ ರೇಶೊÂà) ಬೇಸೆಲ್ ಐಐಐ ಮಾನದಂಡಕ್ಕನುಗುಣವಾಗಿ ಶೇ. 13.02ರಷ್ಟಿದೆ.
ಅಭಿವೃದ್ಧಿಗೆ ಮುನ್ನುಡಿ
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ಪ್ರಸಕ್ತ ಅರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಬ್ಯಾಂಕಿನ ಮುಂಗಡಗಳಲ್ಲಿನ ಹೆಚ್ಚಳವು ನಮ್ಮ ನಿರ್ವಹಣಾ ಲಾಭದ ಪ್ರಗತಿಗೆ ಕಾರಣವಾಗಿದೆ. ಇದು ಬ್ಯಾಂಕಿನ ಮುಂದಿನ ಅಭಿವೃದ್ಧಿಗೆೆ ಮುನ್ನುಡಿ ಬರೆಯಲಿದೆ. ನಿವ್ವಳ ಬಡ್ಡಿ ಲಾಭ ಮತ್ತು ನಿವ್ವಳ ಬಡ್ಡಿ ಲಾಭಾಂಶದಲ್ಲಿಯ ಚೇತರಿಕೆಯು ಕೂಡ ಅಭಿವೃದ್ಧಿಯ ದ್ಯೋತಕವಾಗಿವೆ. 2017ರ ಜೂ. 30ಕ್ಕೆ ಬ್ಯಾಂಕ್ 769 ಶಾಖೆಗಳನ್ನು, 1,398 ಎಟಿಎಂಗಳನ್ನು ಮತ್ತು 110 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಹೊಂದಿದೆ ಎಂದರು. 2018ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕು ಇನ್ನೂ 31 ಹೊಸ ಶಾಖೆಗಳನ್ನು ಮತ್ತು 52 ಹೊಸ ಎಟಿಎಂಗಳನ್ನು ಹಾಗೂ 40 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಪ್ರಾರಂಭಿಸುವ ಮೂಲಕ ಒಟ್ಟು 2,250 ಸೇವಾ ಕೇಂದ್ರಗಳನ್ನು ಹೊಂದಲಿದೆ. ಇದರೊಂದಿಗೆ ಶಾಖೆಗಳ ಸಂಖ್ಯೆ 800ಕ್ಕೆ, ಎಟಿಎಂಗಳು 1450ಕ್ಕೆ ಹಾಗೂ ಇ-ಲಾಬಿ / ಮಿನಿ ಇ-ಲಾಬಿಗಳ ಸಂಖ್ಯೆ 150ಕ್ಕೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!
Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.