ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಭಾರತ ಸೆಮಿಫೈನಲಿಗೆ


Team Udayavani, Jul 16, 2017, 3:55 AM IST

semifinal.jpg

ಡರ್ಬಿ: ನಿರ್ಣಾಯಕ ಲೀಗ್‌ ಪಂದ್ಯದಲ್ಲಿ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತವು ನ್ಯೂಜಿಲ್ಯಾಂಡ್‌ ತಂಡವನ್ನು 186 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದೆ. 
ಮಿಥಾಲಿ ರಾಜ್‌ ಅವರ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಅವರ ಅರ್ಧಶತಕದಿಂದಾಗಿ ಭಾರತ 7 ವಿಕೆಟಿಗೆ 265 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ರಾಜೇಶ್ವರಿ ಗಾಯಕ್‌ವಾಡ್‌ ದಾಳಿಗೆ ನೆಲಕಚ್ಚಿದ ನ್ಯೂಜಿಲ್ಯಾಂಡ್‌ 25.3 ಓವರ್‌ಗಳಲ್ಲಿ ಕೇವಲ 79 ರನ್ನಿಗೆ ಆಲೌಟಾಗಿ ಶರಣಾಯಿತು. ಈ ಗೆಲುವಿನಿಂದ ಭಾರತ ಒಟ್ಟು 10 ಅಂಕ ಗಳಿಸಿ ಸೆಮಿಫೈನಲಿಗೇರಿತು. ತನ್ನ 7.3 ಓವರ್‌ಗಳ ದಾಳಿಯಲ್ಲಿ ಗಾಯಕ್‌ವಾಡ್‌ 15 ರನ್ನಿಗೆ 5 ವಿಕೆಟ್‌ ಕಿತ್ತು ಭಾರತದ ಬೃಹತ್‌ ಅಂತರದ ಗೆಲುವಿಗೆ ಕಾರಣರಾದರು.

ಮಿಥಾಲಿ ರಾಜ್‌ ಶತಕ
ಭಾರತದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ನಾಯಕಿ ಮಿಥಾಲಿ ರಾಜ್‌ ಅವರ ಆಕರ್ಷಕ ಶತಕ, ವೇದಾ ಕೃಷ್ಣಮೂರ್ತಿ ಅವರ ಬಿರುಸಿನ ಬ್ಯಾಟಿಂಗ್‌ ಹಾಗೂ ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಜವಾಬ್ದಾರಿಯುತ ಆಟ. 

184ನೇ ಏಕದಿನ ಪಂದ್ಯ ಆಡಲಿಳಿದ ಮಿಥಾಲಿ ರಾಜ್‌ 109 ರನ್‌ ಬಾರಿಸಿ (123 ಎಸೆತ, 11 ಬೌಂಡರಿ) “ನಾಯಕಿಯ ಆಟ’ಕ್ಕೆ ಅಮೋಘ ದೃಷ್ಟಾಂತ ಒದಗಿಸಿದರು. ಇದು ಮಿಥಾಲಿ ದಾಖಲಿಸಿದ 6ನೇ ಶತಕ. 2014ರ ಬಳಿಕ ಮೊದಲನೆಯದು. ಹರ್ಮನ್‌ಪ್ರೀತ್‌ ಕೌರ್‌ 90 ಎಸೆತಗಳಿಂದ 70 ರನ್‌ ಹೊಡೆದರು (7 ಬೌಂಡರಿ). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 132 ರನ್‌ ಒಟ್ಟುಗೂಡಿತು. 

ಕೌರ್‌ ಹಾಗೂ ದೀಪ್ತಿ ಶರ್ಮ (0) ಒಟ್ಟೊಟ್ಟಿಗೇ ನಿರ್ಗಮಿಸಿದ ಬಳಿಕ ಕ್ರೀಸ್‌ ಇಳಿದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಸಿಡಿಲಬ್ಬರದ ಆಟಕ್ಕೆ ಮುಂದಾದರು. ಕೇವಲ 45 ಎಸೆತಗಳಿಂದ 70 ರನ್‌ ಸಿಡಿಸಿ ಭಾರತದ ಮೊತ್ತವನ್ನು 265ಕ್ಕೆ ಏರಿಸಿದರು. ವೇದಾ ಬ್ಯಾಟಿಂಗ್‌ ವೇಳೆ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಮಿಥಾಲಿ-ವೇದಾ 5ನೇ ವಿಕೆಟ್‌ ಜತೆಯಾಟದಲ್ಲಿ ಕೇವಲ 13 ಓವರ್‌ಗಳಿಂದ 108 ರನ್‌ ಸೂರೆಗೈದದ್ದು ಭಾರತದ ಸರದಿಯ ಆಕರ್ಷಣೀಯ ಹಂತವಾಗಿತ್ತು.

ಎಂದಿನಂತೆ ಈ ಮಹತ್ವದ ಪಂದ್ಯದಲ್ಲೂ ಭಾರತದ ಆರಂಭ ಕೈಕೊಟ್ಟಿತ್ತು. ಸ್ಮತಿ ಮಂಧನಾ (4) ಅವರ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪೂನಂ ರಾವತ್‌ 13 ರನ್ನಿಗೆ ಆಟ ಮುಗಿಸಿದ್ದರು. ಹೀಗೆ ಆರಂಭಿಕರಿಬ್ಬರೂ 21 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಭಾರತದ ಮೇಲೆ ಆತಂಕದ ಕಾರ್ಮೋಡ ಆವರಿಸಿತು. ಆದರೆ ಪಂದ್ಯದ ನಡುವೆ ಸುರಿದ ಮಳೆ ಕೂಡಲೇ ನಿಂತಂತೆ ಈ ಆತಂಕ ಕೂಡ ಬಿಟ್ಟುಹೋಯಿತು. ಅಂತಿಮ ಓವರಿನಲ್ಲಿ 3 ವಿಕೆಟ್‌ ಬಿದ್ದರೂ ಇದರಿಂದ ಭಾರೀ ಹಾನಿ ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌ 
ಭಾರತ-7 ವಿಕೆಟಿಗೆ 265 (ಮಿಥಾಲಿ 109, ವೇದಾ 70, ಹರ್ಮನ್‌ಪ್ರೀತ್‌ 60, ಕಾಸ್ಪೆರೆಕ್‌ 45ಕ್ಕೆ 3, ರೋವ್‌ 30ಕ್ಕೆ 2). ನ್ಯೂಜಿಲ್ಯಾಂಡ್‌-25.3 ಓವರ್‌ಗಳಲ್ಲಿ 79 ಆಲೌಟ್‌ (ಆ್ಯಮಿ ಸ್ಯಾಟರ್‌ವೆàಟ್‌ 26, ರಾಜೇಶ್ವರಿ ಗಾಯಕ್‌ವಾಡ್‌ 15ಕ್ಕೆ 5, ದೀಪ್ತಿ ಶರ್ಮ 26ಕ್ಕೆ 2).

ಟಾಪ್ ನ್ಯೂಸ್

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.