ಶರಣ್ ಹೊಸ ಚಿತ್ರ “ರ್‍ಯಾಂಬೋ-2′?
Team Udayavani, Jul 16, 2017, 10:30 AM IST
ನಟ ಶರಣ್ ತಮ್ಮ ಲಡ್ಡು ಸಿನಿಮಾ ಬ್ಯಾನರ್‌ನಡಿ ಹೊಸ ಚಿತ್ರ ಮಾಡುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸುತ್ತಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಈ ಹಿಂದೆ “ದಿಲ್‌ವಾಲ’ ಚಿತ್ರ ಮಾಡಿದ್ದ ಅನಿಲ್ ಶರಣ್ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಆದರೆ, ಈ ಚಿತ್ರಕ್ಕೆ ಟೈಟಲ್ ಆಗಿರಲಿಲ್ಲ. ಈಗ ಚಿತ್ರಕ್ಕೆ “ರ್‍ಯಾಂಬೋ-2′ ಎಂದು ಟೈಟಲ್ ಇಡಲಾಗಿದೆ ಎಂಬ ಸುದ್ದಿ ಓಡಾಡುತ್ತಿದೆ. ಈ ಮೂಲಕ ಯಶಸ್ವಿ ಚಿತ್ರದ ಟೈಟಲ್ ರಿಪೀಟ್ ಆಗುತ್ತಿದೆ. ಇದು “ರ್‍ಯಾಂಬೋ’ ಚಿತ್ರದ ಮುಂದುವರಿದ ಭಾಗವೇ ಎಂದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಮೂಲಗಳ ಪ್ರಕಾರ, “ರ್‍ಯಾಂಬೋ’ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಟೈಟಲ್ ಇಡಲು ಕಾರಣ “ರ್‍ಯಾಂಬೋ’ ಟೀಂ ಒಟ್ಟಾಗಿರೋದು.
ನೀವೇ ಗಮನಿಸಿದಂತೆ ಶರಣ್ ತಮ್ಮ ಲಡ್ಡು ಬ್ಯಾನರ್‌ನಡಿ “ರ್‍ಯಾಂಬೋ’ ನಂತರ ಯಾವುದೇ ಸಿನಿಮಾ ನಿರ್ಮಿಸಿಲ್ಲ. ಆ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದ ಅಟ್ಲಾಂಟ ನಾಗೇಂದ್ರ ಕೂಡಾ ಶರಣ್ ಜೊತೆ “ರ್‍ಯಾಂಬೋ’ ನಂತರ ಸಿನಿಮಾ ಮಾಡಿಲ್ಲ.
ಈಗ ಮತ್ತೆ ಒಟ್ಟಾಗಿ ಸಿನಿಮಾ ಮಾಡುತ್ತಿರುವುದರಿಂದ “ರ್‍ಯಾಂಬೋ-2′ ಎಂದಿಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಅಟ್ಲಾಂಟ ನಾಗೇಂದ್ರ ಈ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಹಲವು ತಂತ್ರಜ್ಞರು ಸಹನಿರ್ಮಾಪಕರಾಗಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಇವರೆಲ್ಲಾ ವರ್ಕಿಂಗ್ ಪಾಟ್ನರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆಯಂತೆ. ಅಂದಹಾಗೆ, ಟೈಟಲ್ ಬಗ್ಗೆ ಶರಣ್ ಅವರಲ್ಲಿ ಕೇಳಿದರೆ, ಚಿತ್ರಕ್ಕೆ ಟೈಟಲ್ ಹಾಗೂ ನಾಯಕಿಯ ಹುಡುಕಾಟ ನಡೆಯುತ್ತಿದೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.