ವೈವಿಧ್ಯತೆಯಲ್ಲಿನ ಲೋಪ ನೀಗದಿದ್ದರೆ ಪ್ರಗತಿ ಅಸಾಧ್ಯ
Team Udayavani, Jul 16, 2017, 11:23 AM IST
ಯಲಹಂಕ: ವೈವಿಧ್ಯತೆಯಲ್ಲಿರುವ ಲೋಪ, ಕೊರತೆಗಳನ್ನು ಹೋಗಲಾಡಿಸದಿದ್ದರೆ ಪ್ರಗತಿ ಅಸಾಧ್ಯ. ಯುವ ಜನರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು- ಎಂದು ಭಾರತೀಯ ವಿಜಾnನ ಸಂಸ್ಥೆಯ ಇಂಜಿನಿಯರಿಂಗ್ ಡೀನ್ ಪ್ರೊ. ಎಂ.ಕೆ. ಸೂರಪ್ಪ ಹೇಳಿದರು. ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದ ಘಟಿಕೋತ್ಸವದಲ್ಲಿ ಮಾತನಾಡಿದರು.
“ನಮ್ಮಲ್ಲಿ ಅನೇಕ ವೈರುಧ್ಯಗಳಿವೆ. ಆ ವೈರುಧ್ಯಗಳ ಬಗ್ಗೆ ನಾವು ಮೌನ ತಳೆದಿದ್ದೇವೆ. ತಾರತಮ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದ್ದರೂ ಅದು ಅತ್ಯಲ್ಪ. ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸಾಕಷ್ಟು ಭಾರತೀಯರಿದ್ದಾರೆ. ಆದರೆ ಯುನೈಟೆಡ್ ನೇಷನ್ಸ್ ಡೆವಲೆಪ್‌ಮೆಂಟ್‌ನ ಮಾನವ ಅಭಿವೃದ್ಧಿ ಖಾತೆಯಲ್ಲಿ ನಾವು 136ನೇ ಸ್ಥಾನದಲ್ಲಿದೆ,’ ಎಂದು ಬೇಸರಪಟ್ಟರು.
“ನಮ್ಮ ಐ.ಐ.ಟಿ ಗಳು, ಐ.ಐ.ಎಂ ಗಳು ಬಹು ದೊಡ್ಡ ಸಂಖ್ಯೆಯಲ್ಲಿ ಜಗತ್ತಿನಾದ್ಯಂತ ಸೇವೆ ಸಲ್ಲಿಸಲು ಪ್ರತಿಭಾವಂತರನ್ನು ಸೃಷ್ಟಿಸಿವೆ. ಆದರೆ ಲಕ್ಷಾಂತರ ಸಂಖ್ಯೆಯಲ್ಲಿರುವ ನಿರುದ್ಯೋಗಿ ಪದವೀಧರರ ಬಗ್ಗೆ ನಮ್ಮ ಗಮನ ಹರಿದಿಲ್ಲ. ನಮ್ಮ ಮಂಗಳಯಾನ, ಅಗ್ನಿಕ್ಷಿಪಣಿ ಇತ್ಯಾದಿ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಬಹುದು. ಆದರೆ ಹಳ್ಳಿಯ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಶೌಚದ ವ್ಯವಸ್ಥೆ ಇಲ್ಲ ಎಂಬುದು ನಮ್ಮನ್ನು ಅವಮಾನಕ್ಕೀಡು ಮಾಡುತ್ತದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಪ್ರೊ ಎನ್.ಆರ್. ಶೆಟ್ಟಿ. ಪುಣೆಯ ಸೇನಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ. ಎಲ್.ಎಂ. ಪಟ್ನಾಯಕ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್. ಸಿ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಚಿನ್ನದ ವಿದ್ಯಾರ್ಥಿಗಳು: ಯೋಗೀಶ್- ಸಿವಿಲ್ ಇಂಜಿನಿಯರಿಂಗ್, ಕರೋಲ್ ರೋಸಿಲಿನ್ ಸೆಕ್ವೇರಿಯಾ- ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂ.ಲಕ್ಷಿ- ಎಲೆಕ್ಟ್ರಿಕಲ್ ಅಂಡ್ ಎಲಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಆಶೀಶ್ ತಿವಾರಿ-ಎಲೆಕ್ಟಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಸಮೀರ್ ದೇಸಾಯಿ-ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಆಕೃತಿ ತ್ಯಾಗಿ-ಇನ್‌ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್,
ಅಪೂರ್ವ ಆನಂದ್-ಏರೋನಾಟಿಕಲ್ ಇಂಜಿನಿಯರಿಂಗ್. ಅಶಿಶ್ ತಿವಾರಿಗೆ ನಿಟ್ಟೆ ಗುಲಾಬಿ ಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕ, ವಿ. ದಿವ್ಯಾ ಅವರಿಗೆ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ, ಎನ್. ಮೋನಿಷ್‌ಗೆ ಶ್ರೀ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.