ಗೋರೆಗಾಂವ್‌: ಶ್ರೀ  ಕ್ಷೇತ್ರ ಗೆಜ್ಜೆಗಿರಿ ಸಮಿತಿಯಿಂದ ವಿಶೇಷ ಸಭೆ


Team Udayavani, Jul 16, 2017, 3:46 PM IST

15-Mum06a.jpg

ಮುಂಬಯಿ: ಗೆಜ್ಜೆಗಿರಿ ಕ್ಷೇತ್ರವನ್ನು  ಜೀರ್ಣೋ ದ್ಧಾರಗೊಳಿಸುವ ಯೋಗ ನಮ್ಮ ಪಾಲಿಗೆ ಒದಗಿದೆ. ಕಾರಣಿಕ ಶಕ್ತಿ ಕೇಂದ್ರವಾಗಿ ಧೈರ್ಯ ನೀಡಿ ನಮ್ಮನ್ನು ಅದಕ್ಕೆ ಪ್ರೇರೇಪಿಸಿದೆ. ಕ್ಷೇತ್ರದ ಶೀಘ್ರಗತಿ ಅಭಿವೃದ್ಧಿಗೆ ಮುಂಬಯಿಗರ ಸಹಕಾರ ಅನುಪಮವಾಗಿದೆ. ಮನುಕುಲವು ಸೇವಾಧರ್ಮ ಹುಟ್ಟುವಾಗ ಪಡೆದು ಬಂದ ಯೋಗವಾಗಿದ್ದು, ಅದನ್ನು ಸಮಯೋಚಿತವಾಗಿ ನಿಸ್ವಾರ್ಥವಾಗಿ ಬಳಸಿದಾಗ ಯೋಜನೆಗಳು ಫಲಪ್ರದಗೊಳ್ಳುವುದು ಎಂದು ಶ್ರೀ  ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್‌ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ  ಚಿತ್ತರಂಜನ್‌ ಕಂಕನಾಡಿ ತಿಳಿಸಿದರು.

ಅವರು  ಜು. 14ರಂದು ಮುಂಬಯಿ ಗೋರೆಗಾಂವ್‌ ಪೂರ್ವದ ಜಯಲೀಲಾ ಬಾಂಕ್ವೆಟ್‌ ಸಭಾಗೃಹದಲ್ಲಿ ಪುತ್ತೂರು ಪಡುಮಲೆಯ ಲ್ಲಿ ನಿರ್ಮಾಣಗೊಳ್ಳುತ್ತಿರುವ “ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್‌’ ಯೋಜನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ  ಮಟ್ಟಿನ ಒಂದು ಇಟ್ಟಿಗೆಯನ್ನಾದರೂ ನೀಡಿ ಯೋಜನೆಗೆ ಸ್ಪಂದಿಸಿ. ಅಂತೆಯೇ ಸರ್ವರ ಸಹಯೋಗದಿಂದ ಗೆಜ್ಜೆಗಿರಿ ಯೋಜನೆ ಸಾಕಾರಗೊಳಿಸೋಣ. ಆ ಮೂಲಕ ನಂದನ ಬಿತ್ತ್ಲ್‌ನ್ನು  ಬಿಲ್ಲವರ ಜೀವನಾಡಿಯಾಗಿ ಒಂದು ಕಾರಣಿಕ ಕ್ಷೇತ್ರವಾಗಿಸೋಣ ಎಂದರು.

ಜನಹಿತ ಸೇವೆಯಿಂದ ಜನ್ಮ ಸಾರ್ಥಕ – ಜಯ ಸಿ. ಸುವರ್ಣ

ವಿಶೇಷ ಸಭೆಗೆ  ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿ ಮಾತನಾಡಿ, ಕುದ್ರೋಳಿಯ ಶ್ರೀ  ಕ್ಷೇತ್ರ ಗೋಕರ್ಣನಾಥೇಶ್ವರ ದೇವಸ್ಥಾನ ರಚನೆಯ ವೇಳೆಗೂ ಇದೇ ಸಭಾಗೃಹದಲ್ಲಿ ಸುಮಾರು 17 ಸಭೆಗಳು ನಡೆಸಲ್ಪಟ್ಟು ಬಹುಪಾಲು ಮೊತ್ತವನ್ನು ಮುಂಬಯಿ ಬಿಲ್ಲವರೂ, ಭಕ್ತರೂ ಒದಗಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ. ಬಹುಶಃ ತುಳುನಾಡಿನ ಪ್ರತಿಯೊಂದು ದೈವಸ್ಥಾನ, ದೇವಸ್ಥಾನ, ಮಂದಿರ ಮಠಗಳಿಗೆ ಮುಂಬಯಿ ಭಕ್ತರದ್ದೇ ಬಹುಪಾಲು ಕೊಡುಗೆ ಇದ್ದೇ ಇದೆ. ಅಂತೆಯೇ ಗೆಜ್ಜೆಗಿರಿ ಬೃಹತ್‌ ಯೋಜನೆಗೂ ಮುಂಬಯಿ ಜನತೆಯೇ ಶ್ರಮಿಸುವ ಭರವಸೆ ನನಗಿದೆ. ಬುದ್ಧಿ ಜೀವಿಯಾದ  ಮಾನವನು ಬದುಕಿನಲ್ಲಿ ಏನಾದರೂ ಒಳ್ಳೆಯ ಕೆಲಸ ಸಾಧನೆ ಮಾಡಿ ಇಂತಹ ಸಮಾಜಪರ, ಜನಹಿತ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆವಾಗಲೇ ಜನ್ಮ ಸಾರ್ಥಕವಾಗುವುದು ಎಂದರು.

ಸರ್ವರ ಸಹಯೋಗ ಅಗತ್ಯ:ಪೀತಾಂಬರ ಹೇರಾಜೆ
ಶ್ರೀ  ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ ಅವರು ಮಾತನಾಡಿ,   ದೇಯಿ ಬೈದ್ಯೆತಿಗೆ ಆರಾಧನೆ ನಡೆಯದ ಕೊರಗು ಬಿಲ್ಲವರಿಗಿದ್ದು, ಆ ಮೂಲಕ ಬಿಲ್ಲವರಾದ ನಾವು ಇಂದು ತಾಯಿಯ ಋಣದಲ್ಲಿದ್ದೇವೆ. ತುಳುನಾಡಿನಾದ್ಯಂತ ಸುಮಾರು 250 ಗರಡಿಗಳಿದ್ದು, ಗರಡಿ ಪ್ರಧಾನ ಬಿಲ್ಲವರ ಆಡಳಿತದಲ್ಲಿ ಸದ್ಯ ಶೇ. 20ರಷ್ಟು  ಗರಡಿಗಳು ಮಾತ್ರ ಇವೆ. ಆದರೆ ಇಂದಿಗೂ ಬಿಲ್ಲವರೇ  ಗರಡಿಗಳಿಗೆ ಬಹು ಸಂಖ್ಯೆಯ ಭಕ್ತರು. ಗೆಜ್ಜೆಗಿರಿ ವಿಶ್ವದ ಬಿಲ್ಲವರ ಆಸ್ತಿಯಾಗಿದ್ದು ಸರ್ವರ ಶಕ್ತಿ ಮತ್ತು ಭಕ್ತಿ ಕೇಂದ್ರವಾಗಲಿದೆ. ಲೋಕಾಭಿಮಾನಿಗಳ ಸೇವೆಯಿಂದ ಈ ಕ್ಷೇತ್ರ ಬೆಳಗಬೇಕಾಗಿದ್ದು, ಸರ್ವರ ಸಹಯೋಗ ಅವಶ್ಯವಾಗಿದೆ. ಇದಕ್ಕಾಗಿ ತಮ್ಮೆಲ್ಲರಿಗೂ ಸಮಾಜ ಸೇವೆ ಮಾಡುವ ಅವಕಾಶ ಗೆಜ್ಜೆಗಿರಿ ಕ್ಷೇತ್ರ ಒದಗಿಸಿದೆ. ಶ್ರದ್ಧಾಳು ಸೇವಕರಿಗೆ ಪುಣ್ಯ ಕಟ್ಟಿಟ್ಟ ಬುತ್ತಿಯಾಗಲಿದೆ. ಸರ್ವರೂ ಏಕಾಗೃತರಾಗಿ ಶ್ರಮಿಸಿ ಗೆಜ್ಜೆಗಿರಿಯನ್ನು ಜಾಗತಿಕ ಶಕ್ತಿ ಕೇಂದ್ರವಾಗಿಸೋಣ. ಬಿಲ್ಲವರಿಗೂ ಭವಿಷ್ಯ ರೂಪಿಸುವ ಯುವ ಧುರೀಣರ ದಂಡು ಸಜ್ಜಾಗುತ್ತಿದ್ದು  ರಾಜಶೇಖರ್‌ ಕೋಟ್ಯಾನ್‌, ನಿತ್ಯಾನಂದ ಕೋಟ್ಯಾನ್‌, ಎನ್‌. ಟಿ. ಪೂಜಾರಿ ಅವರಂತಹ ಉತ್ಸಾಹಿ ಮುಂದಾಳುಗಳಿಗೆ ನಾಯಕತ್ವ ಕೊಡುವ ಕಾಲ ಸನ್ನಿಹಿತವಾಗಿದೆ ಎಂದರು.

ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರಾಜಶೇಖರ್‌ ಆರ್‌. ಕೋಟ್ಯಾನ್‌ ಸ್ವಾಗತಿಸಿ ಗೆಜ್ಜೆಗಿರಿ ಬಗ್ಗೆ ಮುಂಬಯಿ ಜನತೆಗೆ ಸ್ವಷ್ಟ ತಿಳಿವಳಿಕೆ ನೀಡಲು ಈ ಸಭೆ ಕರೆಯಲಾಗಿದೆ. ಇದು ಹಣ ಒಗ್ಗೂಡಿಸುವ ಸಭೆಯಲ್ಲ, ಬಿಲ್ಲವ ಸಮುದಾಯವನ್ನು ಒಗ್ಗೂಡಿಸುವ ವಿಶ್ವ ಬಿಲ್ಲವರ ವೇದಿಕೆಯಾಗಿದೆ ಎಂದರು.

ಕೋಶಾಧಿ ಕಾರಿ ದೀಪಕ್‌ ಕೋಟ್ಯಾನ್‌ ಗುರುಪುರ, ಗೆಜ್ಜೆಗಿರಿ ಸ್ಥಾಪಕ ಪ್ರವರ್ತಕ ಮಂಡಳಿ ಸದಸ್ಯ ಹರೀಶ್‌ ಜಿ. ಅಮೀನ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕ್ಷೇತ್ರದ ತಾಂತ್ರಿಕ ಸಲಹೆಗಾರ, ವಾಸ್ತುಶಿಲ್ಪಿ ಸಂತೋಷ್‌ ಕುಮಾರ್‌ ಪೂಜಾರಿ ಕ್ಷೇತ್ರದ ವಿವಿಧ ಶ್ರದ್ಧಾ ಕೇಂದ್ರಗಳ ಪುನರುತ್ಥಾನ, ಕಟ್ಟಡ ಯೋಜನೆ, ಕಾಮಗಾರಿಗಳ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.

ಕ್ಷೇತ್ರಾಡಳಿತದ ಸಲಹೆಗಾರ ಜಯಾನಂದ ಮುಗ್ಗಗುತ್ತು ಪ್ರಸ್ತಾವಿಕ ನುಡಿಗಳನ್ನಾಡಿ, ದೇಯಿ ಬೈದ್ಯೆತಿಯ ಮಹಾ ಸಮಾಧಿ, ಕೋಟಿ ಚೆನ್ನಯ ಮೂಲಸ್ಥಾನ, ಆದಿ ದೈವ ಧೂಮಾವತಿ ಕ್ಷೇತ್ರ, ಗುರು ಸಾಯನ ಬೈದ್ಯರ ಶಕ್ತಿ ಪೀಠ, ಬೆರ್ಮೆರ್‌ ಗುಂಡ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಇತ್ಯಾದಿ ವೈಶಿಷ್ಟ Âತೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಇದು ಭಾರತ ದೇಶದ ಏಕೈಕ ಇತಿಹಾಸವುಳ್ಳ ಕ್ಷೇತ್ರವಾಗಿ ಬಿಲ್ಲವರ ಸ್ವಾಭಿಮಾನದ ಕ್ಷೇತ್ರವಾಗಲಿದೆ ಎಂದರು.

ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ಸದಸ್ಯರಾದ ಸುರೇಂದ್ರ ಎ. ಪೂಜಾರಿ ಸಭಿಕರ ಪರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರವರ್ತಕ ಸದಸ್ಯರಾದ ಭಾಸ್ಕರ್‌ ಎಂ. ಸಾಲ್ಯಾನ್‌, ದಯಾನಂದ ಆರ್‌. ಪೂಜಾರಿ ಥಾಣೆ, ಸುರೇಶ್‌ ಪೂಜಾರಿ ವಾಶಿ, ನಿಲೇಶ್‌ ಪೂಜಾರಿ ಪಲಿಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಯುವ ಪತ್ರಕರ್ತ, ಫ್ಯಾಶನ್‌ ಕೊರಿಯೋಗ್ರಾಫರ್‌ ಸನಿಧ್‌ ಪೂಜಾರಿ ಪ್ರಸಕ್ತ ಕಾಮಗಾರಿಗಳ ಚಿತ್ರಣದ ಸ್ಲೆ$çಡ್‌ಶೋ ಪ್ರದರ್ಶಿಸಿದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಪ್ರಾರ್ಥನೆಗೈದು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.   

ಎಲ್ಲರೂ ಏಕತೆಯಿಂದ ಮುನ್ನಡೆದರೆ ಅಭಿವೃದ್ಧಿಯ ಕೆಲಸ ಆಗಲು ಏನೂ ಕಷ್ಟವಾಗದು. ಹಾಗೆೆಯೇ ಗೆಜ್ಜೆಗಿರಿ ಕ್ಷೇತ್ರೋದ್ಧಾರಕ್ಕೂ  ಕಷ್ಟ ಆಗದು. ನಿಷ್ಠರಾಗಿ ಸಮಾಜ ಸೇವೆಗೆ ತಮ್ಮನ್ನು  ತೊಡಗಿಸುವುದು ಪುಣ್ಯದ ಕೆಲಸ 
– ಎನ್‌. ಟಿ. ಪೂಜಾರಿ (ಅಧ್ಯಕ್ಷರು: ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌).

ಬಿಲ್ಲವರು ಸ್ವಸಮುದಾಯದ ಇತಿಹಾಸ ಮರೆತಿರುವುದು ಕಾಣುತ್ತಿದೆ. ಆದರೂ ಕಾಲ ಕಳೆದಿಲ್ಲ. ಪ್ರಸಕ್ತ ಬಿಲ್ಲವರಿಗೆ ಜೀವನದಲ್ಲಿನ ಗೆಜ್ಜೆಗಿರಿ ಸೇವೆ ಮಾಡಲು ಕಾಲ ಒದಗಿದೆ. ಇಂತಹ ಒಂದೇ ಐತಿಹಾಸಿಕ, ಮಹತ್ವದ ಅವಕಾಶವನ್ನು ನಿಷ್ಠೆಯೊಂದಿಗೆ ಸದ್ಬಳಕೆ ಮಾಡಬೇಕಾಗಿದೆ. ಮಾತೆ ದೇಯಿ ಬೈದ್ಯೆತಿಯ ಮಕ್ಕಳು ಒಂದಾಗಿ ಸೇವಾ ನಿರತರಾಗಿ  ಭವ್ಯ ಯೋಜನೆಯನ್ನು ರೂಪುಗೊಳಿಸೋಣ 
– ಎಲ್‌. ವಿ. ಅಮೀನ್‌ (ಮಾಜಿ ಅಧ್ಯಕ್ಷರು: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

ಜಯ ಸುವರ್ಣರಂತಹ ಮುತ್ಸದ್ದಿಗಳ ಮುಂದಾಳುತ್ವದಲ್ಲಿ ಗೆಜ್ಜೆಗಿರಿ ಭವ್ಯ ಯೋಜನೆ ಸುಲಭವಾಗಿ ರೂಪುಗೊಳ್ಳುವ ಆಶಯ ನಮ್ಮದಾಗಿದೆ. ವಿಶ್ವದಾದ್ಯಂತ ನೆಲೆಯಾದ ಪ್ರತಿಯೋರ್ವ ಬಿಲ್ಲವರು ಸೇವೆಗೈದು ತಮ್ಮ ಮೂಲ ಸ್ಥಾನದ ಏಳಿಗೆಗಾಗಿ ಒಮ್ಮತದಿಂದ ಶ್ರಮಿಸುವ ಅಗತ್ಯವಿದೆ 
–  ನಿತ್ಯಾನಂದ ಡಿ. ಕೋಟ್ಯಾನ್‌ (ಅಧ್ಯಕ್ಷರು: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).       

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.