ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ: ಈಜುಕೊಳ ಉದ್ಘಾಟನೆ
Team Udayavani, Jul 17, 2017, 2:50 AM IST
ವಿಟ್ಲ: ಹಳ್ಳಿ ಪ್ರದೇಶದಲ್ಲಿರುವಂತಹ ಶಾಲೆಯಲ್ಲಿ ಈಜುಕೊಳದ ನಿರ್ಮಾಣ ನಿಜಕ್ಕೂ ಶ್ಲಾಘನೀಯ. ದೈಹಿಕವಾಗಿ ಸದೃಢವಾಗಿರದೆ ಕೇವಲ ಬೌದ್ಧಿಕವಾಗಿ ಜ್ಞಾನವಂತರಾದರೆ ಪರಿಪೂರ್ಣತೆಯನ್ನು ಹೊಂದುವುದಿಲ್ಲ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಅಧ್ಯಕ್ಷ ಯು. ಗಂಗಾಧರ ಭಟ್ ಹೇಳಿದರು. ಅವರು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಈಜುಕೊಳವನ್ನು ಉದ್ಘಾಟಿಸಿ, ಮಾತನಾಡಿದರು.
ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಈಜು ಕಲೆಯು ತುಂಬಾ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ವಿದ್ಯಾಕೇಂದ್ರವು ಕೇವಲ ಪಠ್ಯ ವಿಷಯಗಳು ಮಾತ್ರವಲ್ಲದೆ ಪಠ್ಯೇತರ ವಿಷಯಗಳಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅವರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ಅವರು ಹೇಳಿದರು. ಈಜುಕೊಳ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದ ಬೆಂಗಳೂರಿನ ನರೇಶ್ ಸ್ವಿಮ್ಮಿಂಗ್ ಆಕಾಡೆಮಿಯ ಪ್ರಧಾನ ತರಬೇತುದಾರ ಹಾಗೂ ತರುಣ್ ಅಸೋಸಿಯೇಟ್ಸ್ ನಿರ್ದೇಶಕ ಎಚ್.ಸಿ.ನರೇಶ್ ಅವರನ್ನು ಗೌರವಿಸಲಾಯಿತು.
ವೇ| ಮೂ| ಹಿರಣ್ಯ ವೆಂಕಟೇಶ್ವರ ಭಟ್ ಗಂಗಾಪೂಜೆ ನೆರವೇರಿಸಿದರು. ದ.ಕ. ದೈಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ ಬಾಗೇವಾಡಿ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿಪಟು ಉದಯ ಚೌಟ ಮಾಣಿ ಶುಭಹಾರೈಸಿದರು. ಕೃಷ್ಣ ಭಟ್ ಅಳಿಕೆ, ನಾರಾಯಣ ರಾವ್ ಅಳಿಕೆ, ಪೆರ್ವಡಿ ಸದಾನಂದ ಆಳ್ವ, ಹಮೀದ್ ಕುಂಞಾಲಿ, ಗಣಪತಿ ಭಟ್ ಪದ್ಯಾಣ, ಟ್ರಸ್ಟಿಗಳಾದ ಪೆಲತ್ತಡ್ಕ ರಾಮಕೃಷ್ಣ ಭಟ್, ಕೃಷ್ಣ ಭಟ್ ಉಳುವಾನ, ಸದಾಶಿವ ಭಟ್ ಪಯ್ಯರಕೋಡಿ, ಅಡ್ವ ರಾಮಚಂದ್ರ ಭಟ್ ಮತ್ತು ಪ್ರಾಂಶುಪಾಲ ಅನೂಪ್ ಕೆ. ಮತ್ತಿತರರು ಉಪಸ್ಥಿತರಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿ, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು. ಅಧ್ಯಾಪಕ ಶ್ರೀಕಾಂತ್ ಆಚಾರ್ಯ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.