ಫೆಡರರ್‌ಗೆ ದಾಖಲೆ ವಿಂಬಲ್ಡನ್ ಪ್ರಶಸ್ತಿ
Team Udayavani, Jul 17, 2017, 3:50 AM IST
ಲಂಡನ್: ಸ್ವಿಸ್‌ನ ಸೂಪರ್ ತಾರೆ ರೋಜರ್ ಫೆಡರರ್ ದಾಖಲೆ ಎಂಟನೇ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರಲ್ಲದೇ ಈ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರ ಎಂದೆನಿಸಿಕೊಂಡಿದ್ದಾರೆ.
ರವಿವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಹೋರಾಟದಲ್ಲಿ ಫೆಡರರ್ ಅವರು ಗಾಯಗೊಂಡಿದ್ದ ಮರಿನ್ ಸಿಲಿಕ್ ಅವರನ್ನು 6-3, 6-1, 6-4 ಸೆಟ್‌ಗಳಿಂದ ಉರುಳಿಸಿದರು. ಇದು ಫೆಡರರ್ ಅವರ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. 35ರ ಹರೆಯದ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಗೆದ್ದ ಅತೀ ಹಿರಿಯ ಪುರುಷ ಆಟಗಾರರಾಗಿದ್ದಾರೆ. 32ರ ಹರೆಯದ ಆರ್ಥರ್ ಆ್ಯಶೆ ಈ ಹಿಂದೆ 1976ರಲ್ಲಿ ಪ್ರಶಸ್ತಿ ಜಯಿಸಿದ್ದರು.
11ನೇ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ ಫೆಡರರ್ ಅವರು 29ನೇ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಫೈನಲ್‌ನಲ್ಲಿ ಆಡಿದರು. ದ್ವಿತೀಯ ಸೆಟ್‌ನಲ್ಲಿ ಫೆಡರರ್ 3-0 ಮುನ್ನಡೆ ಸಾಧಿಸುತ್ತಲೇ ಸಿಲಿಕ್ ಅವರ ಕಣ್ಣಲ್ಲಿ ನೀರು ಬಂದಿತ್ತು. 2014ರ ಯುಎಸ್ ಓಪನ್ ಚಾಂಪಿಯನ್ ಆಗಿದ್ದ ಏಳನೇ ಶ್ರೇಯಾಂಕದ ಸಿಲಿಕ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗುವ ಕಾರಣ ಟವಲ್‌ನಲ್ಲಿ ಮುಖವನ್ನು ಮುಚ್ಚಿ ತನ್ನ ಬೇಸರವನ್ನು ತೋರ್ಪಡಿಸಿದರು. ದ್ವಿತೀಯ ಸೆಟ್‌ನ ಅಂತ್ಯದಲ್ಲಿ ಗಾಯದಿಂದಾಗಿ ಎಡ ಪಾದಕ್ಕೆ ಬ್ಯಾಂಡೇಜ್ ಹಾಕಿದ್ದರು.
ಈ ಬಾರಿಯ ವಿಂಬಲ್ಡನ್ ಕೂಟದಲ್ಲಿ ಒಂದೇ ಒಂದು ಸೆಟ್ ಕಳೆದುಕೊಳ್ಳದೇ ಪ್ರಶಸ್ತಿ ಗೆದ್ದ ಸಾಧನೆಯನ್ನು ಫೆಡರರ್ ಮಾಡಿದರು. 1976ರಲ್ಲಿ ಬೋರ್ನ್ ಬೋರ್ಗ್ ಈ ಸಾಧನೆ ಮಾಡಿದ್ದರು.
ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ
8ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಫೆಡರರ್ 2012ರಲ್ಲಿ ಚಾಂಪಿಯನ್ ಆಗುವ ಮೂಲಕ 7ನೇ ಬಾರಿಗೆ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಪಡೆದಿದ್ದರು. ಈ ಮೂಲಕ ಇಂಗ್ಲೆಂಡ್‌ನ ವಿಲಿಯಮ್ ರ್ಯಾನ್ ಶೋ, ಅಮೆರಿಕದ ಪೀಟ್ ಸಾಂಪ್ರಾಸ್ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ರವಿವಾರ 8ನೇ ಬಾರಿಗೆ ವಿಂಬಲ್ಡನ್ ಗೆಲ್ಲುವ ಮೂಲಕ ವಿಂಬಲ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿ ದಾಖಲೆ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.