ತ್ರಿವಳಿ ತಲಾಖ್‌ಗೆ ಶರಿಯಾ ವಿರೋಧ: ಜಿಲಾನಿ
Team Udayavani, Jul 17, 2017, 3:25 PM IST
ಕಲಬುರಗಿ: ತ್ರಿವಳಿ ತಲಾಖ್ ಹೇಳುವುದನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಶರಿಯಾ) ವಿರೋಧಿಸುತ್ತದೆ. ಮಂಡಳಿಯಲ್ಲಿ
ಇದಕ್ಕೆ ಅವಕಾಶವಿಲ್ಲ ಎಂದು ಮಂಡಳಿ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಜಫರ್ ಯಾಬ್ ಜಿಲಾನಿ ಹೇಳಿದರು.
ನಗರದ ಫರಹಾನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಮಿಯತ್ ಉಲ್ ಉಲ್ಮಾ ಹಮ್ಮಿಕೊಂಡಿದ್ದ ಶರಿಯಾ ವಿವರಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ನ್ನು ಮಂಡಳಿ ಒಪ್ಪದು. ಈ ಬಗ್ಗೆ ಸುಪೀಕೋರ್ಟ್‌ನಲ್ಲಿ ಮಂಡಳಿ ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸುತ್ತಿದೆ ಎಂದರು.
ಏಕಕಾಲದಲ್ಲಿ ತ್ರಿವಳಿ ತಲಾಖ್ ಪದ್ಧತಿ ಅನುಸರಿಸುವವರಿಗೆ ತಕ್ಕ ಪಾಠ ಕಲಿಸಲು ಅವಕಾಶವಿದೆ. ಈ ಅನಿಷ್ಠ ಪದ್ಧತಿ ಬಳಸುವವರಿಗೆ
ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಮುಸ್ಲಿಂ ಸಮುದಾಯವು ತಕ್ಕ ಪಾಠ ಕಲಿಸಬಹುದು ಎಂದರು. ನಿಶ್ಚಿತಾರ್ಥ ಸಂದರ್ಭದಲ್ಲಿ ವಧು ಮತ್ತು ವರರಿಗೆ ತ್ರಿವಳಿ ತಲಾಖ್ ಹೇಳುವುದು ಶರಿಯಾ ವಿರುದ್ಧವಾಗಿದೆ ಎಂಬುದನ್ನು ವಿವಾಹ ಪತ್ರದಲ್ಲಿ ನಮೂದಿಸುವ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದರು. ಧಾರ್ಮಿಕ ನಂಬಿಕೆ ಹಾಗೂ ವೈಯಕ್ತಿಕ ಸಂಪ್ರದಾಯಗಳ ಆಚರಣೆಗೆ ಸಂವಿಧಾನವು ಅಧಿಕಾರ ನೀಡಿದೆ. ಆದರೂ ತ್ರಿವಳಿ ತಲಾಖ್ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಿ ಈಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿದೆ. ಈ ಬಗ್ಗೆ ಶರಿಯಾ ತನ್ನ ವಾದವನ್ನು ಸಮರ್ಥವಾಗಿ ಮಂಡಿಸುತ್ತಿದೆ. ತ್ರಿವಳಿ ತಲಾಖ್ ಪದ್ಧತಿಯಿಂದ ಶರಿಯಾದಲ್ಲಿ
ಮಹಿಳೆಗೆ ಶೋಷಣೆಯಾಗುತ್ತಿದೆ ಎಂಬ ತಪ್ಪು ತಿಳಿವಳಿಕೆ ಅನ್ಯ ಸಮುದಾಯಕ್ಕೆ ಹೋಗುತ್ತಿದೆ. ಇದನ್ನು ತಪ್ಪಿಸಲು ಇಸ್ಲಾಂ ಧರ್ಮದ ಶಾಂತಿ ಹಾಗೂ ಸಹೋದರತ್ವದ ಸಂದೇಶವನ್ನು ಸಾರಬೇಕು. ತ್ರಿವಳಿ ತಲಾಖ್ ವಿರೋಧಿಸಬೇಕೆಂದರು.
ಪವಿತ್ರ ಕುರಾನ್ ಹಾಗೂ ಶರಿಯಾ ಕಾನೂನನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಅವಕಾಶವಿಲ್ಲ. ನಮ್ಮ ನಂಬಿಕೆ ಹಾಗೂ ಆಚರಣೆಗಳಿಗೆ ಯಾವುದೇ ಅಡೆ, ತಡೆ ಆಗದು. ಈ ಬಗ್ಗೆ ಸಮುದಾಯದವರು ಭಯಪಡಬಾರದು ಎಂದರು.
ಮೌಲಾನಾ ಜಾವೇದ್ ಆಲಂ ಖಾಶ್ಮಿ ಮಾತನಾಡಿ, ಮುಸ್ಲಿಂ ಸಮುದಾಯದವರು ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಐಕ್ಯತೆ ಹಾಗೂ
ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಯುವಕರು ಮೊಬೈಲ್ ಹಾಗೂ ಇಂಟರ್‌ನೆಟ್‌ನಲ್ಲಿಯೇ ಪ್ರತಿದಿನ ಆರು ಗಂಟೆಗಳ ಕಾಲ ಕಳೆಯುತ್ತಿದ್ದು, ಅದನ್ನು ತಡೆಯದಿದ್ದರೇ ಸಮಾಜಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು. ಹಿರಿಯ ನ್ಯಾಯವಾದಿ ಉಸ್ತಾದ್ ಸಾದತ್
ಹುಸೇನ್, ಇಸ್ಲಾಮಿಕ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲೀದ್ ಸೈಫ್ ಉಲ್ ರೆಹಮಾನಿ, ನ್ಯಾಯವಾದಿ ಅನ್ವರ್ ಪಟೇಲ್ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್ ಭಕ್ಷ್ಯಗಳಿವು…
Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.