ರೀಟೇಲ್‌ ಜಾದೂಗಾರ; ಗ್ರಾಹಕರನ್ನು ಸೆಳೆಯುವ “ರೀಟೇಲ್‌ ಮ್ಯಾನೇಜರ್‌’


Team Udayavani, Jul 18, 2017, 3:45 AM IST

lead-udyoga–j18-(1).gif

ಮೆಟ್ರೋ, ಬಿಗ್‌ ಬಜಾರ್‌, ಮೋರ್‌ ಮುಂತಾದ ಮಾಲ್‌ಗಳಿಗೆ ಪ್ರವೇಶಿಸಿದ ಕೂಡಲೇ ಅಲ್ಲಿರುವ ವಸ್ತುಗಳು ನಮ್ಮನ್ನು ಅಕರ್ಷಿಸುತ್ತವೆ. ಬೈ ಒನ್‌ ಗೆಟ್‌ ಟು ಫ್ರೀ, ಅಪ್‌ ಟು 70% ಆಫ್, ಒಂದು ವಸ್ತು ಖರೀದಿಸಿದರೆ ಮತ್ತೂಂದು ಫ್ರೀ, ಸ್ಟಾಕ್‌ ಕ್ಲಿಯರೆನ್ಸ್‌ ಆಫ‌ರ್‌ ಇವೆಲ್ಲಾ ನಮ್ಮ ಕಣ್ಣು ಕುಕ್ಕುತ್ತವೆ. ವಸ್ತುಗಳನ್ನು ಕೊಳ್ಳುವಂತೆ ಪ್ರಚೋದಿಸುತ್ತವೆ. ಈ ರೀತಿಯ ಆಕರ್ಷಕ ತಂತ್ರಗಾರಿಕೆಯನ್ನು ನಿರಂತರವಾಗಿ ಹುಟ್ಟುಹಾಕುವವರು, ಉತ್ಪನ್ನಗಳ ಹಿಂದಿನ ರೀಟೇಲ್‌ ಮ್ಯಾನೇಜರ್‌ಗಳು. ಆ ಪೋಸ್ಟ್‌ ಹೇಗಿರುತ್ತೆ? ಇಲ್ಲೊಂದಿಷ್ಟು ಮಾಹಿತಿ…

ಆನ್‌ಲೈನಾಗಲಿ, ಆಫ್ಲೈನಾಗಲಿ, ಅವಶ್ಯಕತೆ ಪೂರೈಸಲು ವಸ್ತುಗಳಿರಬೇಕು. ಯುವಕರು ವಾಚಿನಿಂದ ಹಿಡಿದು, ಮಾವಿನಹಣ್ಣಿನವರೆಗೆ, ತಲೆಗೆ ತಿಕ್ಕುವ ಹೇರ್‌ ಆಯಿಲ್‌ನಿಂದ, ಉಗುರಿಗೆ ಹಚ್ಚುವ ನೈಲ್‌ ಪಾಲಿಶ್‌ವರೆಗೆ ಎಲ್ಲದಕ್ಕೂ ಆನ್‌ಲೈನ್‌ ಮೊರೆ ಹೋಗುತ್ತಾರೆ. ಇನ್ನು “ನನಗೆ ಕಂಪ್ಯೂಟರ್‌, ಇಂಟರ್ನೆಟ್‌ ಗೊತ್ತಿಲ್ಲಮ್ಮಾ ಅಂಗಡಿಗೇ ಹೋಗೋಣ’ ಎಂದು ಹೇಳುವ ಪೋಷಕರು ಬಿಗ್‌ ಬಜಾರ್‌ನಂಥ ಮಾರ್ಟ್‌ಗಳಿಗೆ ಲಗ್ಗೆಯಿಟ್ಟು ಆಫ‌ರ್‌, ಡಿಸ್ಕೌಂಟ್‌ ಇತ್ಯಾದಿಯನ್ನು ಬಹಳ ಆಸಕ್ತಿಯಿಂದ ಗಮನಿಸಿ, ಯಾವ ವಸ್ತು ಖರೀದಿಸಿದರೆ ಇನ್ನಾéವುದು ಫ್ರೀ ಎಂಬುದನ್ನು ಹತ್ತು ಬಾರಿ ಲೆಕ್ಕಹಾಕಿ, ಅಳೆದು ತೂಗಿ ಖರೀದಿಸುತ್ತಾರೆ. ಇವೆರಡೂ ಪೀಳಿಗೆಗೂ ಗಣಕದಲ್ಲಾಗಲಿ, ಪ್ರತ್ಯಕ್ಷವಾಗಿಯಾಗಲಿ ಕಣ್ಣಿಗೆ ಓರಣವಾಗಿ ವಸ್ತುಗಳು ಕಾಣುವಂತೆ ಮತ್ತು ಬಗೆ ಬಗೆಯ ರಿಯಾಯಿತಿ ನೀಡಿ ಉತ್ಪನ್ನಗಳನ್ನು ಕೊಳ್ಳುವಂತೆ ಮಾಡುವವರೇ ರೀಟೆಲ್‌ ಮ್ಯಾನೇಜರ್‌ಗಳು. ಚಿಕ್ಕ ಸೂಜಿಯಿಂದ ಹಿಡಿದು ಗರಿಷ್ಠ ಮೌಲ್ಯದ ವಸ್ತುಗಳನ್ನು ತರಿಸಿಕೊಳ್ಳವಂತೆ ಮಾಡುವ, ಕಡಿಮೆ ಲಾಭಾಂಶವನ್ನಿಟ್ಟುಕೊಂಡು ಹೆಚ್ಚು ವಸ್ತುಗಳನ್ನು ಮಾರಾಟವಾಗುವಂತೆ ಯೋಜನೆ ರೂಪಿಸುವುದೇ ಅವರ ಕೆಲಸ. ಅವರು, ಯಾವುದೇ ಕಂಪನಿಯ ಯಾವುದೇ ಉತ್ಪನ್ನವನ್ನು ದೇಶದ ಸಾಮಾನ್ಯ ಸ್ಥಳದಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಕಾದರೂ ಮಾರಾಟ ಮಾಡಿಸಬಲ್ಲ ಚಾಣಾಕ್ಷರು. ಅಂತಹ ಚಾಣಾಕ್ಷರಾಗಲು ಆಸಕ್ತಿಯಿದೆಯಾ? ಹಾಗಿದ್ದರೆ, ನಿಮ್ಮ ಓದು ಹೀಗಿರಲಿ…

ಮ್ಯಾನೇಜ್‌ ಮೆಂಟ್‌ ಕೋರ್ಸ್‌
ಎಸ್ಸೆಸ್ಸೆಲ್ಸಿ ಮುಗಿದ ಬಳಿಕ, ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಆರಿಸಿಕೊಳ್ಳಿ. ಪಿಯು ಮುಗಿದ ನಂತರ ಆರು ತಿಂಗಳ ರೀಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌, ಒಂದು ವರ್ಷದ ಡಿಪ್ಲೊಮಾ, ರೀಟೇಲ್‌ ಮ್ಯಾನೇಜ್‌ಮೆಂಟಿನಲ್ಲಿ 3 ವರ್ಷದ ಬಿಎಸ್ಸಿ, ಎಂಎಸ್ಸಿ ಮತ್ತು ಐದು ವರ್ಷದ ಎಂ.ಬಿ.ಎ ಕೋರ್ಸನ್ನು ನಿಮ್ಮ ಅಗತ್ಯ ಮತ್ತು ಪ್ರಾವೀಣ್ಯತೆಯ ಬಯಕೆಗನುಗುಣವಾಗಿ ಮಾಡಬಹುದು. ಸಿಎಟಿ (ಕಾಮನ್‌ ಅಡ್ಮಿಷನ್‌ ಟೆಸ್ಟ್‌), ಎಂಎಟಿ (ಮ್ಯಾನೇಜ್‌ಮೆಂಟ… ಅಪ್ಟಿಟ್ಯೂಡ್‌ ಟೆಸ್ಟ್‌), ಎಕ…ಎಟಿ ಪರೀಕ್ಷೆಗಳನ್ನು ಮಾಡಿಕೊಂಡರೆ ಒಳಿತು.

ಕೌಶಲ್ಯಗಳಿರಲಿ…
– ಆಂಗ್ಲ ಭಾಷೆ ಜೊತೆಗೆ ದೇಶ ಭಾಷೆಗಳ ಸಾಮಾನ್ಯ ತಿಳಿವಳಿಕೆ, ಸಂವಹನ ಕೌಶಲ್ಯ
– ಯಾವುದೇ ಕ್ಷಣದಲ್ಲೂ ಧೃತಿಗೆಡದೆ ಸಮಸ್ಯೆಯನ್ನು, ಸಂದರ್ಭವನ್ನು ನಿರ್ವಹಿಸುವ ಸಾಮರ್ಥ್ಯ
– ಸಮಾಲೋಚನೆ, ಮಧ್ಯವರ್ತಿತನ, ಚೌಕಾಸಿ ಮಾಡುವ ಗುಣ
– ಸಂಪರ್ಕ ಸಂಪಾದನೆ ಮತ್ತು ಸಂಭಾಷಣಾ ಕೌಶಲ್ಯ
– ವಸ್ತು, ವಿಷಯಗಳ ಮೌಲ್ಯ, ಮಾರುಕಟ್ಟೆ ಬಗ್ಗೆ ಸಮಗ್ರ ಅರಿವು
– ಗ್ರಾಹಕ ಮತ್ತು ಗ್ರಾಹಕರ ಅವಶ್ಯಕತೆಯನ್ನು ತಿಳಿದು ಮಾರುಕಟ್ಟೆಯಲ್ಲಿ ಉತ್ಪನ್ನ ತರಿಸಿಕೊಳ್ಳುವ ಸೇವಾಗುಣ
– ಪ್ರಚೋದನಾ ತಂತ್ರಗಾರಿಕೆ, ಪ್ರೇರೇಪಣಾ ಜಾಹೀರಾತು, ಮಾರಾಟ ಕೌಶಲ್ಯ

ಅವಕಾಶ ಎಲ್ಲೆಲ್ಲಿ?
– ಮಾಲ್‌ಗಳು, ಮೆಟ್ರೋ, ಶೋರೂಂ, ಸೂಪರ್‌ಮಾರ್ಕೆಟ್‌ಗಳು, ಬಿಗ್‌ ಬಜಾರ್‌ಗಳು, ಐಮ್ಯಾಕ್‌ ಥಿಯೇಟರ್‌, ಡಿಪಾರ್ಟ್‌ಮೆಂಟಲ್‌ ಸ್ಟೋರ್‌ ಮತ್ತು ರೀಟೇಲ್‌ ಔಟ್‌ಲೆಟ್‌ಗಳಲ್ಲಿ ಅವಕಾಶ
– ಹೆಲ್ತ… ಕೇರ್‌ ಮತ್ತು ಮ್ಯಾನುಫ್ಯಾಕ್ಚರ್‌ ಕಂಪನಿಗಳಲ್ಲಿ ನೌಕರಿ
– ಐಟಿ ಮತ್ತು ಬಿಪಿಒ, ಶೇರು ಮಾರ್ಕೆಟ್‌ಗಳಲ್ಲಿ ಅವಕಾಶ
– ಶೈಕ್ಷಣಿಕ ಕ್ಷೇತ್ರ, ಫೈನಾನ್ಷಿಯಲ್‌ ಇನಿrಟ್ಯೂಷನ್‌ ಅಂಡ್‌ ಮಾರ್ಕೆಟಿಂಗ್‌ ಕ್ಷೇತ್ರ
– ವೆಬ್‌ಸೈಟ್‌ಗಳಲ್ಲಿ ಪ್ರಾಡಕr… ಪ್ರಮೋಟರ್‌ಗಳಾಗಬಹುದು.
– ಸೇಲ್ಸ… ಅನಾಲೈಜರ್‌, ಸ್ಟೋರ್‌ ಮ್ಯಾನೇಜರ್‌ ಆಗಬಹುದು

ಸಂಬಳ ಎಷ್ಟಿರುತ್ತೆ?
ರೀಟೇಲ್‌ ಮ್ಯಾನೇಜ್‌ಮೆಂಟ್‌ ಓದಿದ ಅಭ್ಯರ್ಥಿಗಳಿಗೆ ಅನುಭವ, ಸಾಮರ್ಥ್ಯಕ್ಕನುಗುಣವಾಗಿ ವಾರ್ಷಿಕವಾಗಿ 6 ಲಕ್ಷದಿಂದ 12 ಲಕ್ಷದವರೆಗೆ ಸಂಬಳ ನೀಡಲಾಗುತ್ತದೆ. ತಿಂಗಳಿಗೆ 50 ಸಾವಿರದಿಂದ ಲಕ್ಷಕ್ಕೂ ಹೆಚ್ಚು ಗಳಿಕೆಯನ್ನು ಮಾಡುವವರಿದ್ದಾರೆ.

ಎಲ್ಲೆಲ್ಲಿ ಕಲಿಯಬಹುದು?
– ಜಿಐಬಿಎಸ್‌ ಬಿಸಿನೆಸ್‌ ಸ್ಕೂಲ್‌ ಬೆಂಗಳೂರು (ಎಂಬಿಎ ರೀಟೇಲಿಂಗ್‌ ಅಂಡ್‌ ಸಪ್ಲೆ„ ಚೈನ್‌ ಮ್ಯಾನೇಜ್‌ಮೆಂಟ್‌)
– ಅಲೈಯನ್ಸ್‌ ಸ್ಕೂಲ್‌ ಆಫ್ ಬಿಸಿನೆಸ್‌, ಬೆಂಗಳೂರು (ರೀಟೇಲ್‌ ಮ್ಯಾನೇಜ್‌ಮೆಂಟ್‌)
– ಎಕ್ಸಾವಿಯರ್‌ ಇನ್ಸ್ಟಿಟ್ಯೂಟ್‌ ಆಫ್ ಬಿಸಿನೆಸ್‌ ಮ್ಯಾನೇಜ್‌ ಮೆಂಟ್‌ ಬೆಂಗಳೂರು( ಅಡ್ವಾನ್ಸ್‌ಡ್‌ ಡಿಪ್ಲೊಮಾ ಇನ್‌ ರೀಟೇಲ್‌ ಮ್ಯಾನೇಜ್‌ಮೆಂಟ್‌)
– ಜಿಇಎಂಎಸ್‌ಬಿ ಸ್ಕೂಲ್‌ ಬೆಂಗಳೂರು (ಎಂಬಿಎ ಇನ್‌ಟೇಲ್‌ ಮ್ಯಾನೇಜ್‌ಮೆಂಟ್‌)
– ವೋಗ್ಸ್‌ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ, ಬೆಂಗಳೂರು (ಗ್ರಾಜುಯೇಟ್‌ ಡಿಪ್ಲೋಮಾ ಇನ್‌ ರೀಟೇಲ್‌ ಮ್ಯಾನೇಜ್‌ ಮೆಂಟ್‌)

– ಎನ್‌. ಅನಂತನಾಗ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.