ನಾನೊಬ್ಬ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ!


Team Udayavani, Jul 18, 2017, 3:45 AM IST

lead-ninnannu-neneyalu–arj.gif

ಮನದ ಅಷ್ಟದಿಕ್ಕುಗಳಲ್ಲೂ ಈಗ ಜಾತ್ರೆಯ ಸಂಭ್ರಮ. ಮುಂದಿನ ವರ್ಷದ ದುಗುಡದ ಸಂಕಟವನ್ನು ನೆನೆಯಲು ನಾನೀಗ ತಯಾರಿಲ್ಲ. ಸದ್ಯಕ್ಕೆ ನಿಮ್ಮನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಆಸೆಯಾಗ್ತಿದೆ. ಬಂದೇ ಬರುವೆ ಸದ್ಯದಲ್ಲೇ…

ಶೋನಾ,
ಮೊದಲೆಲ್ಲಾ ಆಗಾಗ ಹರಟುತ್ತಿದ್ದ ನಾವು ಈಗ ಖಯಾಲಿಯೇ ಆದಂತೆ ಒಬ್ಬರನ್ನೊಬ್ಬರು ತುಂಬಾ ಮಿಸ್‌ ಮಾಡ್ಕೊಳ್ತೀವಲ್ಲ, ಕಾರಣವೇನಿದ್ದೀತೆಂಬ ಪ್ರಶ್ನೆಯನ್ನು ಬಿಡಿಸಲಾಗದ ಈ ನಂಟೇ ಸೂಕ್ತ ಉತ್ತರ ಎಂಬುದು ನನ್ನ ತರ್ಕ. ಜಗತ್ತಿನಲ್ಲಿ ಪರಿಪೂರ್ಣರು ಎಂದು ಯಾರೂ ಇಲ್ಲ ಎಂಬ ಸತ್ಯವನ್ನು ಮರೆತೇ ಪ್ರೇಮಿಗಳು ದೂರಾಗ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ನಿರೀಕ್ಷೆ ಇರಬೇಕು, ಇಲ್ಲ ಅಂತಲ್ಲ. ಆದರೆ, ಈ ನಿರೀಕ್ಷೆಗಳದ್ದೇ ಕಾಲ್ಪನಿಕ ಅರಮನೆ ಕಟ್ಟಿಕೊಂಡು ನಾನು ಹೇಳಿದಂತೆಯೇ ಕೇಳಬೇಕು ಅನ್ನೋ ಧೋರಣೆಯಿಂದಲೇ ಸಣ್ಣಾತಿಸಣ್ಣ ವಿಚಾರಕ್ಕೂ ಕಂದಕ ಏರ್ಪಡುತ್ತದೆಂಬ ಅನಿಸಿಕೆ ನನ್ನದು. ನಾನಾಗಾಗ ಇಂಥ ಸಣ್ಣ ವಿಚಾರಕ್ಕೆ ಕಾಲು ಕೆದರಿ ನಿಮಗೆ ನೋವುಂಟು ಮಾಡಿದಾಗಲೂ ಮತ್ತೆ ನಿಮ್ಮ ಪ್ರೀತಿಯ ಹೊಳೆಯೇ ಅಂತರ ಕಡಿಮೆಗೊಳಿಸಿ, ಪ್ರೀತಿ ಹೆಚ್ಚಿಸುವುದು ಎಂದು ಒಪ್ಪಬಲ್ಲೆ. 

ಯಾರ ಜೊತೆ ತೀರಾ ಜಗಳವಾಡುತ್ತೇವೋ, ಅವರಿಂದಲೇ ಮುದ್ದಿಸಿಕೊಳ್ಳುವುದೂ ಜಾಸ್ತಿಯಲ್ವಾ? ಕಡೇ ಪಕ್ಷ ನೀವು ನೋವಲ್ಲಿರುವಾಗ ಎಂಥ ಖಾಸಗಿ ಗುಟ್ಟನ್ನಾದರೂ ಹಂಚಿ ಹಗುರಾಗಬೇಕು ಎಂದು ನಿರ್ಣಯಿಸಿದಾಗ ಕಾಣುವ ಮೊದಲ ಮುಖ ನನ್ನದು ಎಂದು ಹೇಳಿದರೂ ಸಾಕು. ಅಷ್ಟಕ್ಕೂ ಇವಿಷ್ಟೂ ದಿನ ನಿಮ್ಮನ್ನು ನೆನೆಯಲು ಹೃದಯಕ್ಕೆ ಯಾವ ಕಾರಣವೂ ಬೇಕಿರಲಿಲ್ಲ ಎಂಬುದು ನಿಜ.

ಅದಷ್ಟು ದಿನ ಇಷ್ಟೊಂದು ದೂರ ಹೇಗಿರುವುದು ಎಂದು ನೀವಂದು ಕೇಳಿದ ಪ್ರಶ್ನೆಯೇ ಇಂದು ಅಪ್ರಸ್ತುತವೆನಿಸಿದೆ. ಆ ಎಲ್ಲ ದಿನಗಳನ್ನು ಕಳೆದು ಮತ್ತೆ ಹತ್ತಿರಾಗುವುದರಲ್ಲಿದ್ದೇವೆ. ಇದಿಷ್ಟೂ ದಿನ ನಿಮ್ಮನ್ನು ಕ್ಷಣಕ್ಷಣಕ್ಕೂ ನೆನೆಸಿಕೊಳ್ಳುತ್ತಿದ್ದೆ. ನೀವು ಅಸೌಖ್ಯದಿಂದ ಸಂಕಟಪಡುವಾಗೆಲ್ಲ ಒಬ್ಬೊಬ್ಬನೇ ಕೂತು ಅತ್ತಿದ್ದೂ ಇದೆ. ಆರೋಗ್ಯ ಕೈ ಕೊಟ್ಟಾಗ ನಿಮ್ಮನ್ನು ಎದೆಯ ಮೇಲೆ ಮಲಗಿಸಿಕೊಂಡು ಪುಟ್ಟ ಮಗುವಿನಂತೆ ಆರೈಕೆ ಮಾಡಬೇಕೆನ್ನಿಸಿದ್ದೂ ಇದೆ. ಎಂಥ ತುರ್ತಿನ ಕೆಲಸವಿದ್ದರೂ ಬದಿಗೊತ್ತಿ ನಿಮ್ಮನ್ನು ವಿಚಾರಿಸಿಕೊಂಡಿದ್ದಿದೆ. ಆದರೆ, ಕೋಪದಿಂದ ಅಹಂಕಾರದಿಂದ ನಿಮ್ಮಿಂದ ಎರಡು ದಿನ ದೂರವಿದ್ದುದಕ್ಕೆ ಕ್ಷಮೆ ಕೇಳಬೇಕು. ನನ್ನನ್ನು ಬಿಟ್ಟು ನೀವು ಬೇರ್ಯಾರನ್ನೂ ನೋಡಬಾರದು, ಬೇರ್ಯಾರನ್ನೂ ನನ್ನೆದುರು ಹೊಗಳಾºರ್ದು, ನಿಮ್ಮ ಕಣ್ಣಲ್ಲಿ ನಾನೊಬ್ನೇ ಇರ್ಬೇಕು, ನಿಮ್ಗೆ ನನ್ನಷ್ಟು ಪ್ರೀತಿ ಬೇರ್ಯಾರೂ ಕೊಡಾºರ್ದು. ನೀವೂ ಅಷ್ಟೇ… ನನ್ನ ಇಷ್ಟಪಡೋವಷ್ಟು ಬೇರ್ಯಾರನ್ನೂ ಮೆಚ್ಚಬಾರ್ದು, ಬೇರೆ ಯಾರನ್ನಾದ್ರೂ ನೋಡಿ ಹಲ್ಲು ಕಿಸಿದ್ರೆ ಕೂಡಲೇ ಅವರೆಲ್ಲರನ್ನ ಮರೆಸುವಷ್ಟು ನಾನು ನಿಮ್ಮನ್ನ ಮುದ್ದು ಮಾಡ್ಬೇಕು ಅಂತೆಲ್ಲ ಕನಸುಗಳು. ಹುಡುಗರ ವಿಷಯದಲ್ಲಿ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ನಾನು. ಈ ನನ್ನ ನಡೆಯಿಂದ ನಿಮಗೇನೇ ಬೇಜಾರಾದ್ರೂ ದಯವಿಟ್ಟು ಕ್ಷಮಿಸಿಬಿಡಿ.

ಈಗ ತಿರುಗಿ ಮತ್ತೆ ಊರಿಗೆ ಮರಳಿದ್ದೀರಿ. ನೀವು ಬರುವ ಜಾಗ ಮೊದಲಿನಂತಿಲ್ಲ. ಅಲ್ಲಿ ನಾನಿಲ್ಲ. ನಂಗೆ ಗೊತ್ತು ನನ್ನ ತುಂಬಾ ನೆನೀತೀರಿ ಅಂತ. ನಾವಿಬ್ಬರೂ ಜೊತೆಗೆ ಕಳೆದ ಜಾಗಗಳು, ನೀವು ನನ್ನನ್ನು ಗೇಲಿ ಮಾಡಿ ನಕ್ಕ ಕ್ಷಣಗಳು, ನಮ್ಮಿಬ್ಬರ ಸಣ್ಣಾತಿಸಣ್ಣ ವಿಷಯದ ಕಿತ್ತಾಟಗಳು, ನೀವು ನನ್ನ ಕದ್ದುಮುಚ್ಚಿ ನೋಡುತ್ತಿದ್ದ ಪರಿ, ನಿಮ್ಮ ಹಾವಭಾವ, ನಾ ಬರುವುದಕ್ಕೂ ಮುನ್ನ ಯಾರಿಗೂ ತಿಳಿಯದಂತೆ ಬಚ್ಚಿಟ್ಟ ನೀವು ಬಿಡಿಸಿದ ಸುಂದರ ಚಿತ್ರ, ನಿಮ್ಮ ನೃತ್ಯ ಭಂಗಿ, ನನ್ನನ್ನು ಕೆಣಕಿ ನೀವು ಪಡುತ್ತಿದ್ದ ಸಂತೋಷ, ನಿಮ್ಮ ವಾರೆನೋಟ, ಕಣ್ಣಂಚಿನ ತುಂಟತನ ಎಲ್ಲಾ ನೆನೆದರೆ ಈಗಲೂ ಮೂಕರೋದನೆಯನ್ನು ಅನುಭವಿಸುತ್ತೇನೆ.

ಅಂದು ನೀವು ನನ್ನನ್ನು ಬಿಟ್ಟು ದೂರದೂರಿಗೆ ಹೋದ ದಿನ ಸಂತೆಯಲ್ಲಿ ತಾಯಿಯನ್ನು ಕಳಕೊಂಡ ಪುಟ್ಟ ಮಗುವಿನ ಥರ ಬಿಕ್ಕಿ ಬಿಕ್ಕಿ ಅತ್ತಿದ್ದೆ. ರಾತ್ರಿಯ ನಿಮ್ಮ ಪಯಣ ನಿಮಿಷ ನಿಮಿಷಕ್ಕೂ ನಿಮ್ಮನ್ನು ನನ್ನಿಂದ ದೂರದೂರಕ್ಕೆ ಹೊತ್ತೂಯ್ದಂತೆ ಭಾಸವಾಗುತ್ತಿತ್ತು. ಅದೇ ನೀವೀಗ ಮತ್ತೆ ಹತ್ತಿರಾಗುವ ಸಮಯ ಬಂದಿದೆ. ಮನದ ಅಷ್ಟದಿಕ್ಕುಗಳಲ್ಲೂ ಈಗ ಜಾತ್ರೆಯ ಸಂಭ್ರಮ. ಮುಂದಿನ ವರ್ಷದ ದುಗುಡದ ಸಂಕಟವನ್ನು ನೆನೆಯಲು ನಾನೀಗ ತಯಾರಿಲ್ಲ. ಸದ್ಯಕ್ಕೆ ನಿಮ್ಮನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಆಸೆಯಾಗ್ತಿದೆ. ಬಂದೇ ಬರುವೆ ಸದ್ಯದಲ್ಲೇ…

– ಅರ್ಜುನ್‌ ಶೆಣೈ

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.