ಶುಲ್ಕ ವಿವರ ಸಲ್ಲಿಸಲು ಸೂಚನೆ
Team Udayavani, Jul 18, 2017, 11:54 AM IST
ಬೆಂಗಳೂರು: ಬೇರೆ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ವಕೀಲರ ಕಲ್ಯಾಣ ನಿಧಿಯ ಸ್ಟ್ಯಾಂಪ್ ಶುಲ್ಕದ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯಗಳಿಗೆ ಸಲ್ಲಿಸಬೇಕಿರುವ ವಕಾಲತ್ ಪತ್ರ ಹಾಗೂ ಜ್ಞಾಪನಪತ್ರಗಳಿಗೆ ಲಗತ್ತಿಸಬೇಕಾದ ಸ್ಟಾಂಪ್‌ಗ್ಳ ಶುಲ್ಕ ಏರಿಕೆ ಆದೇಶ ಮಾಡಿರುವ ಆದೇಶ ಪ್ರಶ್ನಿಸಿ ಮಂಡ್ಯದ ವಕೀಲ ವಿಶಾಲ್ ರಘು ಎಂಬುವವರುವ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಸೋಮವಾರ ನಡೆಸಿತು.
ವಿಚಾರಣೆ ವೇಳೆ ಸರ್ಕಾರ ಹೊರಡಿಸಿರುವ ಶುಲ್ಕ ಏರಿಕೆ ಆದೇಶದಲ್ಲಿ ಹೈಕೋರ್ಟ್‌ಗೆ ಹಾಗೂ ಅಧೀನ ನ್ಯಾಯಾಲಯಗಳಿಗೆ ಸಲ್ಲಿಸಲಾಗುವ ವಕಾಲತ್ ಅರ್ಜಿ ಹಾಗೂ ಜ್ಞಾಪನಾ ಪತ್ರಗಳಿಗೆ ಅಂಟಿಸಲಾಗುವ ಸ್ಟಾಂಪ್ ದರದ ಶುಲ್ಕಗಳಲ್ಲಿ ವ್ಯತ್ಯಾಸವಿದೆ.
ಇದರಿಂದ ತಾರತಮ್ಯ ಮಾಡಿದಂತಲ್ಲವೇ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಈ ಸಂಬಂಧ ಇತರೆ ರಾಜ್ಯಗಳಲ್ಲಿರುವ ವಕೀಲರ ಕಲ್ಯಾಣ ನಿಧಿಯ ಸ್ಟ್ಯಾಂಪ್ ಶುಲ್ಕದ ವಿವರಗಳನ್ನು ತಿಳಿಸಬೇಕು ಎಂದು ಸೂಚಿಸಿ ಜುಲೈ 24ಕ್ಕೆ ವಿಚಾರಣೆ ಮುಂದೂಡಿತು.
ಸ್ಟಾಂಪ್ ದರ ಎಷ್ಟು ಏರಿಕೆಯಾಗಿದೆ?: ಜೂನ್ 12ರಂದು ಸ್ಟಾಂಪ್ ಶುಲ್ಕ ಏರಿಸಿ ಹೊರಡಿಸಿದ ಆದೇಶದಂತೆ ಹೈಕೋರ್ಟ್‌ಗಳ ವಕಾಲತ್ ಅರ್ಜಿಗೆ 50ರೂ. ಸ್ಟ್ಯಾಂಪ್, ಮಧ್ಯಂತರ ಅರ್ಜಿಗೆ 30 ರೂ.ಗಳ ಸ್ಟ್ಯಾಂಪ್ ಹಾಗೂ ಅಧೀನ ನ್ಯಾಯಾಲಯ, ಅರೆ ನ್ಯಾಯಿಕ ಪ್ರಾಧಿಕಾರ,
ಗ್ರಾಹಕ ನ್ಯಾಯಾಲಯ ಹಾಗೂ ವಿವಿಧ ಸಕ್ಷಮ ಪ್ರಾಧಿಕಾರಗಳ ಮುಂದೆ ಸಲ್ಲಿಸಲಾಗುವ ವಕಾಲತ್ತು ಅರ್ಜಿ ಅಥವಾ ಹಾಜರಾತಿ ಜ್ಞಾಪನ ಪತ್ರಗಳಿಗೆ 30 ರೂ. ದರದ 30 ಮೊತ್ತದ ಸ್ಟ್ಯಾಂಪ್ ಹಾಗೂ ಮಧ್ಯಂತರ ಅರ್ಜಿಗಳಿಗೆ 20 ರೂ. ಮೊತ್ತದ ಸ್ಟಾಂಪ್ ಲಗತ್ತಿಸಬೇಕಿದೆ. ಇದರಿಂದ ಕಕ್ಷಿದಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ವಕೀಲರ ಕಲ್ಯಾಣ ನಿಧಿಗೆ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸದಂತಾಗುತ್ತದೆ ಎಂಬುದು ಅರ್ಜಿದಾರರ ಆಕ್ಷೇಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.