ದೌರ್ಜನ್ಯ ಖಂಡಿಸಿ ಡಿಎಸ್ಸೆಸ್ ಪ್ರತಿಭಟನೆ
Team Udayavani, Jul 18, 2017, 2:33 PM IST
ತಾಳಿಕೋಟೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಲಿತರ ಮೇಲೆ ದಬ್ಟಾಳಿಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದರೂ ಗೃಹ ಇಲಾಖೆ ಮತ್ತು ಸರ್ಕಾರ ದಲಿತರಿಗೆ ರಕ್ಷಣೆ ಕೊಡಲು ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂತರ ವಿಜಯಪುರ ಸರ್ಕಲ್‌ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಸುರೇಶ ಮಣೂರ ಮಾತನಾಡಿ, ರಾಜ್ಯದಲ್ಲಿ ದಲಿತ ವರ್ಗದ ಜನರ ಮೇಲೆ ದೌರ್ಜನ್ಯ ದಬ್ಟಾಳಿಕೆಗಳು ದಿನನಿತ್ಯ ನಡೆಯುತ್ತಿವೆ. ಸಾಮಾಜಿಕ ನ್ಯಾಯದ ತಳಹದಿ ಮೇಲೆ ಬದುಕುತ್ತಿರುವ ದಲಿತ ವರ್ಗದ ಜನರಿಗೆ ಕೆಲವು ಪಟ್ಟಣ ಮತ್ತು ಗ್ರಾಮಾಂತರ ಮಟ್ಟದಲ್ಲಿ ಬದುಕುವ ಹಕ್ಕನ್ನೇ ಕಳೆದುಕೊಂಡಂತಾಗಿದೆ ಎಂದರು.
ಜಾತಿವಾದಿಗಳ ಅಟ್ಟಹಾಸಕ್ಕೆ ಎಷ್ಟೋ ದಲಿತ ಕುಟುಂಬಗಳು ನಲುಗಿ ಹೋಗಿವೆ. ಈ ಎಲ್ಲ ದೌರ್ಜನ್ಯ ಘಟನೆಗಳು ಹಾಡುಹಗಲೇ
ನಡೆಯುತ್ತಿದ್ದರೂ ಅ ಧಿಕಾರಿಗಳ ನಿರ್ಲಕ್ಷ ಮತ್ತು ಸರ್ಕಾರಗಳ ಜಾಣ ಕುರುಡುತನಕ್ಕೆ ದಲಿತ ಕುಟುಬಗಳು ಬಲಿಯಾಗುವಂತಹ ಸಂದರ್ಭ ಸೃಷ್ಟಿಯಾಗಿದೆ.
ವಿಜಯಪುರ ಜಿಲ್ಲೆಯ ಹಾಳ ಗುಂಡಕನಾಳ ಗ್ರಾಮದಲ್ಲಿ ದಲಿತ ವೃದ್ಧನನ್ನು ಕಂಬಕ್ಕೆ ಕಟ್ಟೆ ಥಳಿಸಿ ದೌರ್ಜನ್ಯ ನಡೆಸಲಾಗಿದೆ. ಮಡಿಕೇಶ್ವರ ಗ್ರಾಮದ ದಲಿತ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ದೇವರ ಹುಲಗಬಾಳ
ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಈ ಎಲ್ಲ ಘಟನೆಗಳನ್ನು ದಲಿತ ಸಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ
ಎಂದರು. ದಲಿತರಿಗೆ ರಕ್ಷಣೆ ಕೊಡಬೇಕಾದ ಸರ್ಕಾರ ದಲಿತರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕೂಡಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಜರುಗಿಸಬೇಕು ಮತ್ತು ದಲಿತರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಮಾತನಾಡಿ, ರಾಜ್ಯದ ಬಹುತೇಕ ಕಡೆಗಳಲ್ಲಿ ದಲಿತ ಕುಟುಂಬದವರ ಮೇಲೆ ಹಲ್ಲೆ ದೌರ್ಜನ್ಯನಡೆಯುತ್ತಿದ್ದರು ಸರ್ಕಾರ ಕ್ರಮ ಕೈಗೊಂಡಿಲ್ಲ. ಹಾಳಗುಂಡಕನಾಳ, ದೇವರ ಹುಲಗಬಾಳ, ಮಡಿಕೇಶ್ವರ ಗ್ರಾಮದಲ್ಲಿ ದಲಿತರು ಒಬ್ಬಂಟಿಯಾಗಿ ತಿರುಗಾಡದಂತೆ ಜಾತಿವಾದಿಗಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಹಿರಂಗ ಸಭೆಗೂ ಮುನ್ನ ಅಂಬೇಡ್ಕರ್ ಸರ್ಕಲ್, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ್, ವಿಠಲ ಮಂದಿರ ರಸ್ತೆ, ಶಿವಾಜಿ ಸರ್ಕಲ್,
ರಾಣಾಪ್ರತಾಪ ಸರ್ಕಲ್‌ಗಳಿ ರ್ಯಾಲಿ ಸಾಗಿ ವಿಶೇಷ ತಹಶೀಲ್ದಾರ ಎಸ್.ಎಚ್. ಅರಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡರಾದ ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಶಾಂತಪ್ಪ ತಮದಡ್ಡಿ, ಮಾಳಪ್ಪ ಬಿಳೇಭಾವಿ, ರಮೇಶ ಹೊನ್ನಳ್ಳಿ, ಮಹೇಶ ಚಲವಾದಿ, ಕಾಶೀನಾಥ ಕಾರಗನೂರ, ದೇವು ಗೊಟಕುಣಕಿ, ಮಹಾಂತೇಶ ಕಟ್ಟಿಮನಿ, ರಾಜು ಬಳಗಾನೂರ, ರಾಘವೇಂದ್ರ ಕೂಚಬಾಳ, ಶ್ರೀಶೈಲ ಕಟ್ಟಿಮನಿ, ಯಮನಪ್ಪ ತಳವಾರ, ಜೈಭೀಮ ಮುತ್ತಗಿ, ಚಂದ್ರಶೇಖರ ದೊಡಮನಿ, ಶರಣು
ಭಂಟನೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.