ಗರ್ಭಿಣಿಯರಿಗೆ ಉಚಿತ ಆಟೋ ಡ್ರಾಪ್
Team Udayavani, Jul 19, 2017, 2:45 AM IST
ಅದು ಯಮಕನಮರಡಿ ಎಂಬ ಗ್ರಾಮ. ಮಲ್ಲಯ್ಯನವರು ಆಟೋ ಓಡಿಸುವುದು ಇಲ್ಲಿಯೇ. ಏನಿಲ್ಲವೆಂದರೂ ಇವರ ಆಟೋ, ಸುತ್ತಮುತ್ತಲಿನ 4-5 ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುತ್ತದೆ. ಇದು ಸುಮಾರು 20-25 ಸಾವಿರ ಮಂದಿ ವಾಸಿಸುವ ಗ್ರಾಮ. ಇಲ್ಲಿ ಯಾರೇ ಸ್ತ್ರೀ ಗರ್ಭ ಧರಿಸಲಿ, ಮಲ್ಲಯ್ಯ ಅವರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾರೆ.
ಆಟೋ ಚಾಲಕರ ಹೃದಯ ವೈಶಾಲ್ಯ ಆಗಾಗ್ಗೆ ಮಾದರಿಯ ಸೋಜಿಗ ಸೃಷ್ಟಿಸುತ್ತಲೇ ಇರುತ್ತದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಟೋ ಚಾಲಕ ಮಲ್ಲಯ್ಯ ಕೊಂಡಯ್ಯ ಹಿರೇಮಠ್ ಅವರದೂ ಅಂಥದ್ದೇ ಮಾದರಿಯ ಹೆಜ್ಜೆ. ಗರ್ಭಿಣಿ ಹಾಗೂ ಬಾಣಂತಿಯರೇನಾದರೂ ಇವರ ಆಟೋವನ್ನು ಹತ್ತಿದರೆ, ಇವರು ಹಣ ಕೇಳುವುದಿಲ್ಲ! ಉಚಿತವಾಗಿ ಮನೆಗೆ ಡ್ರಾಪ್ ಕೊಡುತ್ತಾರೆ!
ಅದು ಯಮಕನಮರಡಿ ಎಂಬ ಗ್ರಾಮ. ಮಲ್ಲಯ್ಯನವರು ಆಟೋ ಓಡಿಸುವುದು ಇಲ್ಲಿಯೇ. ಏನಿಲ್ಲವೆಂದರೂ ಇವರ ಆಟೋ, ಸುತ್ತಮುತ್ತಲಿನ 4-5 ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುತ್ತದೆ. ಇದು ಸುಮಾರು 20-25 ಸಾವಿರ ಮಂದಿ ವಾಸಿಸುವ ಗ್ರಾಮ. ಇಲ್ಲಿ ಯಾರೇ ಸ್ತ್ರೀ ಗರ್ಭ ಧರಿಸಲಿ, ಮಲ್ಲಯ್ಯ ಅವರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾರೆ.
ಏನು ಪ್ರೇರಣೆ?
ಚಾಲಕ ಮಲ್ಲಯ್ಯ ಅವರ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಸಕಾಲಕ್ಕೆ ಆಸ್ಪತ್ರೆಗೆ ತೆರಳದೇ ಹೆರಿಗೆ ಸಮಯದಲ್ಲಿ ಸಮಸ್ಯೆಯಾಗಿತ್ತು. ತನ್ನ ಪತ್ನಿಗೆ ತೊಂದರೆಯಾದಂತೆ, ಈ ಹಳ್ಳಿಯಲ್ಲಿ ಯಾರಿಗೂ ಆ ರೀತಿಯ ಸಮಸ್ಯೆ ಆಗಬಾರದೆಂದು, ಕಳೆದ 10 ವರುಷಗಳಿಂದ ಗರ್ಭಿಣಿಯರಿಗೆ ಉಚಿತ ಪ್ರಯಾಣ ಕಲ್ಪಿಸುತ್ತಿದ್ದಾರೆ. ಇದುವರೆಗೂ ಸುಮಾರು 145 ಮಹಿಳೆಯರಿಗೆ ಈ ಉಚಿತ ಸಂಚಾರ ಭಾಗ್ಯ ಸಿಕ್ಕಿದೆ.
24 ಗಂಟೆಯೂ ಸೇವೆ!
ಸ್ತ್ರೀಯರಿಗೆ ಹೆರಿಗೆ ನೋವು ಯಾವಾಗ ಬರುತ್ತದೆಂದು ಹೇಳಲಾಗದು. ಎಷ್ಟೋ ಸಲ ಮಧ್ಯರಾತ್ರಿಯೂ ಹೆರಿಗೆ ಬೇನೆಯಿಂದ ನರಳಿದ ಗರ್ಭಿಣಿಯರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕನಿಷ್ಠ ತಿಂಗಳಿಗೆ 3-5 ಗರ್ಭಿಣಿಯರನ್ನು ಹೀಗೆ ಉಚಿತವಾಗಿ ಆಸ್ಪತ್ರೆಗೆ ಒಯ್ಯುತ್ತಾರೆ, ಮಲ್ಲಯ್ಯ. ಕೇವಲ ಆಸ್ಪತ್ರೆಗೆ ಉಚಿತವಾಗಿ ದಾಖಲಿಸುವುದಷ್ಟೇ ಇವರು ತಮ್ಮ ಸೇವೆ ಎಂದು ಭಾವಿಸಿಲ್ಲ. ಗರ್ಭಿಣಿಯರನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ನೆರವಾಗುತ್ತಾರೆ. ಅವರನ್ನು ಒಳರೋಗಿಯಾಗಿ ದಾಖಲು ಮಾಡಿಸಿ, ದಾಖಲಾತಿಯ ಅರ್ಜಿಯನ್ನೂ ಸ್ವತಃ ತಾವೇ ಭರ್ತಿ ಮಾಡುತ್ತಾರೆ. ಅಲ್ಲದೆ, ಉಳಿದಂತೆ ಒಳರೋಗಿಗಳು ಭರ್ತಿ ಮಾಡಬೇಕಾದ ಅರ್ಜಿಗಳನ್ನೂ ಇವರೇ ತುಂಬುತ್ತಾರೆ.
ಗರ್ಭಿಣಿಯಾಗಿದ್ದಾಗ ನನ್ನ ಪತ್ನಿಗಾದ ಕಷ್ಟ ಬೇರಾರಿಗೂ ಆಗಬಾರದು. ಈ ಕಾರಣದಿಂದ ನಾನು ಉಚಿತ ಸಂಚಾರ ಕಲ್ಪಿಸುತ್ತಿದ್ದೇನೆ. ಇಂಥ ಸಂದಿಗ್ಧತೆಯ ವೇಳೆ ಮಾಡಿದ ನೆರವನ್ನು, ಬದುಕಿನ ಕೊನೆಯ ತನಕವೂ ಆ ಎರಡು ಜೀವಗಳು ನೆನಪಿಟ್ಟುಕೊಳ್ಳುತ್ತವೆ. ಅದೇ ನನ್ನ ಪಾಲಿಗೆ ಭರಿಸಲಾಗದ ಶುಲ್ಕ!
– ಮಲ್ಲಯ್ಯ ಕೊಂಡಯ್ಯ ಹಿರೇಮಠ್, ಆಟೋ ಚಾಲಕ
– ಗುರುರಾಜ ಬ. ಕನ್ನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.