ಕಿವಿ ಮೇಲೆ ಕಿರೀಟ ಟ್ರೆಂಡಿ ಇಯರ್‌ ಕಫ್ಸ್…


Team Udayavani, Oct 16, 2020, 10:10 AM IST

ear.jpg

ಫ್ಯಾಶನ್‌ ಜಗತ್ತು ವಿಸ್ತಾರವಾಗುತ್ತ ಹೋದಂತೆ, ಕಿವಿಗೆ ಬಗೆಬಗೆಯಲ್ಲಿ ಆಭರಣಗಳನ್ನು ಧರಿಸಿಯೂ ಮಿಂಚಬಹುದು ಎಂಬ ಗುಟ್ಟು ಮಹಿಳೆಗೆ ಗೊತ್ತಾಗಿ ಹೋಯಿತು. ಆಗ ಜೊತೆಯಾದದ್ದೇ ಕಿವಿಯೋಲೆ. ಕಿವಿಯ ಮೇಲಿನಿಂದ ಕೆಳಗಿನವರೆಗೂ “ಪಿನ್‌’ ಮಾಡಿ ಧರಿಸಬಲ್ಲಂಥ ಕಿವಿಯೋಲೆಗಳು ಬಂದಾಗ, ಅವನ್ನೆಲ್ಲ ಮಹಿಳೆಯರು ತುಂಬಾ ಖುಷಿಯಿಂದಲೇ ಸ್ವಾಗತಿಸಿದರು.

ಹಿಂದಿನ ಎಲ್ಲಾ ಫ್ಯಾಷನ್‌ಗಳು ಇದೀಗ ಒಂದೊಂದಾಗಿ ಹೊಸ ಲುಕ್‌ನೊಂದಿಗೆ ಮರುಕಳಿಸಿ ಫ್ಯಾಷನ್‌ ಜಗತ್ತಿನಲ್ಲಿ ಮತ್ತೆ ಹೊಸದೊಂದು ಫ್ಯಾಶನ್‌ ಆರಂಭಕ್ಕೆ ಮುನ್ನುಡಿ ಬರೆದಿವೆ. ಆಭರಣಗಳ ವಿಷಯಕ್ಕೆ ಬಂದರೆ ಹಿಂದಿನ ಕಾಲದಲ್ಲಿ ಇದ್ದಂತಹ ಸಾಂಸ್ಕೃತಿಕ ಶೈಲಿಯಲ್ಲಿಯೇ ಮತ್ತಷ್ಟು ಆಧುನಿಕತೆ ಬೆರೆತು ನವಿರಾದ ವಿನ್ಯಾಸಗಳಲ್ಲಿ ಮಹಿಳೆಯರ ಸೌಂದರ್ಯ ಹೆಚ್ಚಿಸಿವೆ. ಅದೇ ಕಾರಣದಿಂದ ಮಹಿಳೆಯರನ್ನು ಸೆಳೆಯುತ್ತಿವೆ. ಅಂಥ ಆಭರಣಗಳ ಸಾಲಿಗೆ ಇದೀಗ “ಇಯರ್‌ ಕಫ್ಸ್’ಗಳು ಸೇರಿಕೊಂಡಿವೆ.

ಒಂದು ಕಾಲವಿತ್ತು. ಆಗೆಲ್ಲಾ ಕಿವಿಗೆ ಓಲೆ, ಜುಮುಕಿ ಧರಿಸಿದರೆ ಅಷ್ಟೇ ಸಾಕು ಎಂಬ ಮಾತಿತ್ತು. ಆದರೆ ಫ್ಯಾಶನ್‌ ಜಗತ್ತು ವಿಸ್ತಾರವಾಗುತ್ತ ಹೋದಂತೆ, ಕಿವಿಗೆ ಬಗೆಬಗೆಯಲ್ಲಿ ಆಭರಣಗಳನ್ನು ಧರಿಸಿಯೂ ಮಿಛಬಹುದು ಎಂಬ ಗುಟ್ಟು ಮಹಿಳೆಗೆ ಗೊತ್ಥಾಗಿ ಹೋಯಿತು. ಆಗ ಜೊತೆಯಾದದ್ದೇ ಕಿವಿಯೋಲೆ. ಕಿವಿಯ ಮೇಲಿನಿಂದ ಕೆಳಗಿನವರೆಗೂ “ಪಿನ್‌’ ಮಾಡಿ ಧರಿಸಬಲ್ಲಂಥ ಕಿವಿಯೋಲೆಗಳು ಬಂದಾಗ, ಅವನ್ನೆಲ್ಲ ಮಹಿಳೆಯರು ತುಂಬಾ ಖುಷಿಯಿಂದಲೇ ಸ್ವಾಗತಿಸಿದರು. ಕೊಳ್ಳುವವರು ಇರುವಾಗ ಉತ್ಪಾದಿಸುವವರೂ ಇರುತ್ತಾರಲ್ಲವೆ? ಕಿವಿಯೋಲೆಗಳ ವಿಷಯದಲ್ಲೂ ಹಾಗೇ ಆಯಿತು.

ಬಂಗಾರ, ವಜ್ರ, ಪ್ಲಾಟಿನಂನ ಕಿವಿಯೋಲೆಗಳು ಮಾರುಕಟ್ಟೆಗೆ ಬಂದವು ದೇವತೆಗಳು, ರಾಣಿಯರು ಕಿವಿ ಕಾಣದ ರೀತಿಯಲ್ಲಿ ಕಿವಿಯೋಲೆಗಳನ್ನು ಹಾಕಿಕೊಳ್ಳುತ್ತಿದ್ದುದನ್ನು ನಾವೆಲ್ಲಾ ಪೌರಾಣಿಕ ಹಾಗೂ ಜಾನಪದ ಕಥೆ- ಚಿತ್ರಗಳಲ್ಲಿ ನೋಡಿದ್ದೇವೆ. ಆ ಆಭರಣಗಳಿಗೆ ಕರ್ಣಾಭರಣಗಳು ಅಥವಾ ಕಿವಿ ಪಟ್ಟಿ ಎಂಬ ಹೆಸರಿತ್ತು. ಇದೀಗ ಹೊಸ ರೀತಿಯ ಲುಕ್‌ನೊಂದಿಗೆ, ವಿಭಿನ್ನ ವಿನ್ಯಾಸ ಮತ್ತು ಆಕಾರಗಳಲ್ಲಿ ಈ ಕರ್ಣಾಭರಣಗಳು ದೊರೆಯುತ್ತಿವೆ. ಇಯರ್‌ ಕಪ್ಸ್‌ ಎಂಬ ಹೆಸರಿನಲ್ಲಿ ಫ್ಯಾಷನ್‌ ಪ್ರಿಯರ ಆ್ಯಕ್ಸೆರೀಸ್‌Õಗಳಲ್ಲಿ ಜಾಗ ಪಡೆದುಕೊಂಡಿವೆ.

ಟ್ಯಾಸೆಲ್‌ ಡ್ಯಾಲಿಂಗ್‌, ಸಿಂಪಲ್‌ ಅಂಡ್‌ ಸ್ಲಿಕ್‌ ಮತ್ತು ಗೋಲ್ಡ್‌ ಪ್ಲೇಟೆಡ್‌ನ‌ಲ್ಲಿ ಹಲವು ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿರುವ ಇಯರ್‌ ಕಫ್ಸ್ಗಳು àಗಿನ ಹೊಸ ಫ್ಯಾಶನ್‌ ಆಹಿವೆ. ಸಂಪೂರ್ಣವಾಗಿ ಕಿವಿಯನ್ನು ಅಲಂಕರಿಸುವ ಎಲೆ, ಬಳ್ಳಿ, ಪುಟ್ಟ ಪುಟ್ಟ ಹೂವಿನ ಆಕಾರ ಮತ್ತು ನಕ್ಷತ್ರ ಆಕಾರದ, ನವಿಲು, ಚಿಟ್ಟೆ, ಹಾವು ಮತ್ತು ಹಲ್ಲಿ, ಹೂ ಗುತ್ಛಗಳ ಆಕಾರದಲ್ಲಿ, ವಿವಿಧ ಚಿತ್ತಾರಗಳ ಮಾದರಿಯಲ್ಲಿ, ಈ ಚೆಲುವಿನ ಆಭರಣಗಳು ರೂಪು ತಾಳಿವೆ. ಇಷ್ಟಲ್ಲದೆ ಮಣಿಗಳಿಂದ ಕೂಡಿದ ಚೈನ್‌ ಮಾದರಿಯ ಇಳೆ ಬೀಳುವ ಇಯರ್‌ ಕಫ್ಸ್ಗಳು ಅಲ್ಲದೇ ಮುತ್ತು, ಹವಳ ಮತ್ತು ಗೋಲ್ಡ್‌ನಿಂದ ಮಾಡಿದ ಇಯರ್‌ ಕಫ್ಸ್ಗಳೂ ಮಾರುಕಟ್ಟೆಯಲ್ಲಿ ಲಭ್ಯ.

ಇಯರ್‌ ಕಫ್ಸ್ ಅಂತರಾಷ್ಟ್ರೀಯ ಫ್ಯಾಷನ್‌ ಜಗತ್ತಿನಲ್ಲಿ ಕೂಡ ಹೆಸರುವಾಸಿ. ದೇಶಿ-ವಿದೇಶಿ ಫ್ಯಾಷನ್‌ ತಾರೆಯರು ರ್‍ಯಾಂಪ್‌ ವಾಕ್‌ನಲ್ಲಿ ಕೇವಲ ಒಂದು ಕಿವಿಗೆ ಮಾತ್ರ ಇಯರ್‌ ಕಫ್ಸ್ ಧರಿಸಿ ಟ್ರೆಂಡಿ ಎನ್ನಿಸಿದ್ದಾರೆ. ಅಲ್ಲದೇ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ “ರಾಮಲೀಲಾ’ ಚಿತ್ರದಲ್ಲಿ ಸಾಂಸ್ಕೃತಿಕ ದಿರಿಸಿನೊಂದಿಗೆ ಇಯರ್‌ ಕಫ್ಸ್ ಹಾಕಿಕೊಂಡು ತನ್ನ ಚೆಲುವನ್ನು ಪ್ರದರ್ಶಿಸಿದ್ದಾಳೆ. ಅನುಷ್ಕಾ ಶರ್ಮಾ, ಶ್ರುತಿ ಹಾಸನ್‌ ಹಲವು ಸಿನಿತಾರೆಯರು  ಟ್ರೆಂಡಿ ಇಯರ್‌ ಕಫ್ಸ್ ಹಾಕಿಕೊಂಡು ಫೋಸ್‌ ಕೊಟ್ಟಿದ್ದಾರೆ.

ಆಧುನಿಕ ಉಡುಗೆಗಳಾದ ಜೀನ್ಸ್‌-ಟೀ ಶರ್ಟ್ಸ್, ಫಾಲಾಗೋ, ಕುರ್ತಾ ಮತ್ತು ಲಾಂಗ್‌ ಫ್ರಾಕ್‌, ಮ್ಯಾಕ್ಸಿ ಡ್ರೆಸ್‌ಗಳಿಗೆ ಈ ಇಯರ್‌ ಕಪ್ಸ್‌ ಅಥವಾ ಕಿವಿಯೋಲೆಗಳು ಫ‌ರ್‌ಫೆಕ್ಟ್ ಲುಕ್‌ ನೀಡುತ್ತವೆ. ಇಂಡೋ-ಏಶಿಯನ್‌ ಮಾದರಿಯ ವಿನ್ಯಾಸಗಳಲ್ಲಿ ದೊರಕುವ ಇಯರ್‌ ಕಫ್ಸ್ಗಳು ಆನಾರ್ಕಲೀ ಡ್ರೆಸ್‌, ಸ್ಯಾರಿ, ಲೆಹಾಂಗ ಮತ್ತು ಆಫ್ ಸ್ಯಾರಿಯಂತಹ ದೇಸಿ ಉಡುಗೆಗಳಿಗೆ ಹೇಳಿಮಾಡಿಸಿದಂತಿವೆ.

ಸಮಾರಂಭಗಳಲ್ಲಿ, ಸಂಜೆ ಪಾರ್ಟಿಗಳಲ್ಲಿ ಡ್ರೆಸ್‌ಗಳಿಗೆ ಹೊಂದುವಂತಹ ಇಯರ್‌ ಕಫ್ಸ್ಗಳನ್ನು ಹಾಕಿಕೊಂಡರೆ ಎಲ್ಲರಿಗಿಂತ ಹೆಚ್ಚು ಮಿಂಚಬಹುದು. ವಿಶೇಷವಾಗಿ ಅಚ್ಚ ಬಿಳಿ ಮತ್ತು ಗೋಲ್ಡ್‌ ವರ್ಣ ವಿನ್ಯಾಸದ ಲಾಂಗ್‌ ಆನಾರ್ಕಲೀ ಸೂಟ್‌ಗಳಲ್ಲಿ ಮ್ಯಾಚಿಂಗ್‌ ಇಯರ್‌ ಕಫ್ಸ್ಗಳು ಏಂಜೆಲ್‌ ಲುಕ್‌ ನೀಡುವಲ್ಲಿ ಎರಡು ಮಾತಿಲ್ಲ.

– ರಶ್ಮಿ ಟಿ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.