ಅ”ಜೇಬು’ ದುನಿಯಾ! ಒಂದು ಜೇಬು, ಅಲ್ಲಿ ನೂರು ಕತೆ


Team Udayavani, Jul 19, 2017, 2:00 AM IST

pocket.jpg

ಪುರುಷರ ಉಡುಪಿಗೆ ಮಾತ್ರ ಜೇಬು ಎಂಬ ದಬ್ಟಾಳಿಕೆಯ ತಂತ್ರವನ್ನು ಆಚೆಗೆ ಸರಿಸಿ, ಮಹಿಳೆಯರ ಡ್ರೆಸ್ಸಿನಲ್ಲೂ ಇಂದು ಜೇಬು ಬಂದು ಕುಳಿತಿದೆ. ಆದರೆ, ಆ ಜೇಬನ್ನು ಅಲಂಕಾರಕ್ಕೆ ಇಡಲಾಗಿದೆಯೇ ವಿನಾ, ಅದರಲ್ಲೇನನ್ನೂ ಇಡಲು ಸಾಧ್ಯವಿಲ್ಲ. ಈ ಜೇಬಿನ ಹಿಂದೆ ಏನೆಲ್ಲ ರಾಜಕೀಯ ನಡೆದಿತ್ತು ಗೊತ್ತಾ? ಒಂದು ಇಂಟೆರೆಸ್ಟಿಗ್‌ ಕತೆ…

ಸಡಿಲವಾದ ಸಲ್ವಾರ್‌, ಉದ್ದನೆಯ ಗೌನ್‌, ಮೈಗೊಪ್ಪುವ ಜೀನ್ಸ್ ಪ್ಯಾಂಟ್‌, ಮೊಳಕಾಲುದ್ದದ ಸ್ಕರ್ಟ್‌- ಹೀಗೆ ಧರಿಸುವ ಉಡುಪು ಯಾವುದೇ ಇರಲಿ; ಅದಕ್ಕೊಂದು ಕಿಸೆ ಅಥವಾ ಜೇಬಿದ್ದರೆ? ಪರ್ಸ್‌, ದುಡ್ಡು, ಕೀಲಿ, ಕರ್ಚಿಫ್ ಮತ್ತು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್ ಇಡಲು ಈ ಜೇಬಿಗಿಂತ ಸೂಕ್ತ ಸ್ಥಳ ಇನ್ನೊಂದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಪುರುಷರ ಮತ್ತು ಮಹಿಳೆಯರ ಜೀನ್ಸ್ ಪ್ಯಾಂಟ್‌ಗಳನ್ನು ಗಮನಿಸಿದರೆ, ನೋಡಲು ಒಂದೇ ರೀತಿಯಾಗಿ ಕಂಡರೂ ಅನೇಕ ವ್ಯತ್ಯಾಸಗಳುಂಟು. ಅವುಗಳಲ್ಲೊಂದು ಪಾಕೆಟ್‌ ಅಥವಾ ಜೇಬು!

ಮಹಿಳೆಯರ ಪ್ಯಾಂಟ್‌ಗಳಲ್ಲಿ ಜೇಬು ಇಲ್ಲ ಅಥವಾ ಇದ್ದರೂ ಅದು ತೀರಾ ಚಿಕ್ಕದಾಗಿದ್ದು, ಏನನ್ನೂ ಇಡಲು ಸಾಧ್ಯವಿಲ್ಲ. ಅಂದರೆ, ಜೇಬಿರುವುದು ಕೇವಲ ತೋರಿಕೆಗೆ ಮಾತ್ರ! ನಂಬಲು ಕಷ್ಟವೆನಿಸಿದರೂ ಲಿಂಗ ತಾರತಮ್ಯ ಮತ್ತು ಸಮಾಜದ ಪುರುಷಪ್ರಧಾನ ಮನಸು, ಈ ಜೇಬಿನ ವಿನ್ಯಾಸಕ್ಕೆ ಕಾರಣ!

ಶಿಲಾಯುಗದಲ್ಲಿ ಜನರು ಪುಟ್ಟ ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡು ಆಯುಧ ಮತ್ತು ಬೆಂಕಿ ಉರಿಸಲು ಕಲ್ಲನ್ನು ಅದರಲ್ಲಿಟ್ಟುಕೊಂಡು ಓಡಾಡುತ್ತಿದ್ದರು. ನಾಗರೀಕತೆಯ ಆರಂಭದ ದಿನಗಳಲ್ಲಿ ದುಡ್ಡಿನ ಬಳಕೆ ಚಾಲ್ತಿಗೆ ಬಂತು. ಅದನ್ನು ಸರಿಯಾಗಿ ಇಡಲು ಈಗಿನಂತೆ ಉಡುಪುಗಳಲ್ಲಿ ಜೇಬುಗಳಿರಲಿಲ್ಲ. ಮೊದಮೊದಲು ಎಲ್ಲರೂ ಚಿಕ್ಕ ಚೀಲಗಳನ್ನು ಬಳಸಿದರು. ಹದಿನಾರನೇ ಶತಮಾನದಲ್ಲಿ ಉಡುಪಿನಲ್ಲಿ ಜೇಬುಗಳನ್ನು ಇಡುವ ರೂಢಿ ಬಂದಿತು. ಆಗ ಪುರುಷರು ತಮ್ಮ ದುಡ್ಡು ಮತ್ತು ಇತರ ವಸ್ತುಗಳನ್ನು ಅದರಲ್ಲೇ ಇಡಲಾರಂಭಿಸಿದರು. ಆ ದಿನಗಳಲ್ಲಿ ಮಹಿಳೆಯರಿಗೆ ಮಣಭಾರದ, ಮೀಟರ್‌ಗಟ್ಟಲೆ ಉದ್ದವಾದ, ಅನೇಕ ಪದರಗಳ ಉಡುಪು ರೂಢಿಯಲ್ಲಿತ್ತು. ಹಾಗಾಗಿ, ಇವುಗಳೊಳಗೆ ಜೇಬನ್ನು ಹೊರಗೆ ಕಾಣದಂತೆ ಅಡಗಿಸಿ ಹೊಲಿಯುತ್ತಿದ್ದರು. ಸೊಂಟದ ಸುತ್ತ ಬಿಗಿದ, ದಾರದಿಂದ ನೇತಾಡುವ ಚೀಲದಂತಿರುತ್ತಿತ್ತು ಈ ಜೇಬು! ಆದರೆ, ಹದಿನೆಂಟನೇ ಶತಮಾನದಲ್ಲಿ ಗ್ರೀಕ್‌- ರೋಮನ್‌ ಶೈಲಿಯ ಉಡುಪುಗಳು ಜನಪ್ರಿಯತೆ ಪಡೆದವು. ಮಣಭಾರದ ದೊಡ್ಡ ಬಟ್ಟೆ ಬದಲು ನೇರವಾದ ಸರಳ ದೇಹದಾಕಾರದ ಆ ವಿನ್ಯಾಸಗಳು ಸ್ತ್ರೀಗೆ ಹಲವು ಅನುಕೂಲಗಳನ್ನು ಕಲ್ಪಿಸಿದ್ದವು.

ಈಗ ಜೇಬುಗಳನ್ನು ಹೊರಗೆ ಕಾಣದಂತೆ ಇಡುವುದಾದರೂ ಎಲ್ಲಿ? ಇಂಥ ಸ್ಥಿತಿಯಲ್ಲಿ ಮಹಿಳೆಯರ ನೆರವಿಗೆ ಬಂದಿದ್ದೇ ಪರ್ಸ್‌- ಕೈಚೀಲ. ಆದರೆ, ತೀರಾ ಚಿಕ್ಕದಾಗಿದ್ದ ಅವು ಮಹಿಳೆಯರ ದೈನಂದಿನ ಬಳಕೆಗೆ ಸೂಕ್ತವಾಗಿರಲಿಲ್ಲ. ದೊಡ್ಡದನ್ನು ಮಾಡಬಹುದಾಗಿತ್ತು, ಆದರೆ ಅವು ದುಡಿಯುವ ಮಹಿಳೆಯರ ಸಂಕೇತ ಎಂದು ಪರಿಗಣಿಸಲಾಯಿತು. ಮಹಿಳೆ ಎಂದರೆ ಕೋಮಲೆ- ಅಬಲೆ; ಮನೆ- ಅಡುಗೆ- ಮಕ್ಕಳು ಮಾತ್ರ ಅವಳ ಹೊಣೆ. ಹೊರಗಿನ ಪ್ರಪಂಚ ಅವಳದ್ದಲ್ಲ, ಅದು ಅವಳಿಗೆ ಅನಗತ್ಯ ಎಂದು ನಂಬಿದ್ದ ಜಮಾನಾ ಅದು. ಹಣಕಾಸು ವ್ಯವಹಾರ ಆಕೆಯ ಕ್ಷೇತ್ರವಲ್ಲ; ಹೀಗಿರುವಾಗ ದುಡ್ಡು ಇಡಲು ಸಾಧ್ಯವಾಗುವ ಚೀಲವೇಕೆ ಮಹಿಳೆಯರಿಗೆ? ಅದರ ಬದಲು ಚೆಂದ ಕಾಣಲು ಮಣಿ, ರೇಷ್ಮೆದಾರ, ಕಸೂತಿ, ಹರಳುಗಳಿಂದ ಅಲಂಕೃತವಾದ ಪುಟ್ಟ ಕೈಚೀಲ ಸಾಕಲ್ಲವೇ ಎಂಬ ವಾದ! ದುಡಿಯುವ ಮಹಿಳೆಯನ್ನು ಕಂಡರೆ ಸದಾ ಸಂಶಯದ ದೃಷ್ಟಿಯ ಜತೆಗೇ ಆಕೆ ಬಳಸುವ ಎಲ್ಲ ವಸ್ತುಗಳ ಬಗ್ಗೆಯೂ ತಿರಸ್ಕಾರ ಅಂದಿನ ಸಮಾಜದಲ್ಲಿತ್ತು!

ಕಾಲ ನಿಧಾನವಾಗಿ ಬದಲಾಯಿತು. ಹತ್ತೂಂಬತ್ತನೇ ಶತಮಾನದ ಅಂತ್ಯದಲ್ಲಿ ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಂತೆ ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಹೋರಾಟ ಆರಂಭಿಸಿದರು. ಸಮಾನತೆಯ ಗಾಳಿ ಬೀಸತೊಡಗಿತು. ಮಹಿಳೆಯರ ಉಡುಪಿನಲ್ಲೂ ಸುಧಾರಣೆ ಕಂಡವು. ಕೇವಲ ಪುರುಷರು ಧರಿಸುತ್ತಿದ್ದ ಪ್ಯಾಂಟುಗಳನ್ನು ಮಹಿಳೆಯರು ಧರಿಸತೊಡಗಿದ್ದು ಕ್ರಾಂತಿಗೆ ಮುನ್ನುಡಿಯನ್ನೇ ಬರೆಯಿತು. ಆದರೆ, ಪುರುಷರನ್ನೇ ಗಮನದಲ್ಲಿಟ್ಟು ವಿನ್ಯಾಸವಾಗಿದ್ದ ಅವುಗಳಲ್ಲಿ ದೊಡ್ಡ ಜೇಬುಗಳಿದ್ದವು. ಸುಂದರ ಸುಕೋಮಲ ಮಹಿಳೆಯರು ಇವುಗಳನ್ನು ಧರಿಸಿದ್ದೇ ಅಸಹನೀಯವಾಗಿರುವಾಗ ದೊಡ್ಡ ಜೇಬುಗಳಿದ್ದರೆ? ಕಿರಿದಾದ ನಡುವಿರಬೇಕಾದ ಮಹಿಳೆಗೆ ಆ ಅಂಕು-ಡೊಂಕನ್ನು ಹೆಚ್ಚಿಸುವ ಉಡುಪು ಸೂಕ್ತ. ಪ್ಯಾಂಟ್‌ ಧರಿಸಿದ್ದಲ್ಲದೆ, ಅದರಲ್ಲಿ ಜೇಬಿದ್ದು, ಏನಾದರೂ ಇಟ್ಟರೆ ಅದು ಉಬ್ಬಿದಂತೆ ಕಾಣುತ್ತದೆ; ಕೃಶಕಾಯರಾಗಿರಬೇಕಾದ ಮಹಿಳೆಯರು ದಪ್ಪವಾಗಿ ಕಾಣುತ್ತಾರೆ. ಇದಲ್ಲದೆ ಆಕರ್ಷಕ ಮೈಮಾಟಕ್ಕೆ ಇದರಿಂದ ಹಾನಿ ಎಂಬ ಅಭಿಪ್ರಾಯ ಆಗ ಬಲವಾಗಿತ್ತು. 1954ರಲ್ಲಿ ಪ್ರಖ್ಯಾತ ವಸ್ತ್ರ ವಿನ್ಯಾಸಕಾರ ಕ್ರಿಶ್ಚಿಯನ್‌ ಡಿಯೋರ್‌ ಹೇಳಿದ ಮಾತು ಗಮನಾರ್ಹ: ಪುರುಷರಿಗೆ ಜೇಬಿರುವುದು ವಸ್ತುಗಳನ್ನು ಇಡಲು, ಮಹಿಳೆಯರಿಗೆ ಬರೀ ಅಲಂಕಾರಕ್ಕಾಗಿ! ಅಂತೂ ಮಹಿಳೆಯರ ಅನುಕೂಲ, ಇಷ್ಟ- ಕಷ್ಟ ಯಾವುದನ್ನೂ ಪರಿಗಣಿಸದೇ ಸೌಂದರ್ಯ- ಫ್ಯಾಶನ್‌ ಹೆಸರಿನಲ್ಲಿ ಮಹಿಳೆಯರ ಪ್ಯಾಂಟ್‌ಗಳಿಂದ ಜೇಬುಗಳನ್ನು ತೆಗೆಯಲಾಯಿತು ಮತ್ತು ಅದು ಇಂದಿನವರೆಗೂ ಮುಂದುವರೆದಿದೆ.

ಇತ್ತೀಚೆಗೆ ಹಾಲಿವುಡ್‌ನ‌ ಸಿನಿತಾರೆಯರಾದ ಸಾಂಡ್ರಾ ಬುಲ್ಲಕ್‌, ಆ್ಯಮಿ ಶೂಮರ್‌ ಮುಂತಾದವರು ದೊಡ್ಡ ಜೇಬಿರುವಂಥ ಉಡುಪನ್ನು ಆಸ್ಕರ್‌ನಂಥ ಪ್ರತಿಷ್ಠಿತ ಸಮಾರಂಭಗಳಲ್ಲಿ ಧರಿಸಿ ಸಂಚಲನ ಸೃಷ್ಟಿಸಿ¨ªಾರೆ. ಆದರೆ, ಸಾಮಾನ್ಯ ಯುವತಿ- ಮಹಿಳೆಯರು ತೊಡುವ ನಿತ್ಯದ ಉಡುಪಿನಲ್ಲಿ ಅನುಕೂಲಕರ ಜೇಬು ಇಂದಿಗೂ ಇಲ್ಲ. ಸಮಾನತೆಯ ಕೂಗು ಬಲವಾಗಿರುವ ಈ ಕಾಲದಲ್ಲಾದರೂ ಮಹಿಳೆಯರಿಗೆ ಬೇಕಾದ್ದನ್ನು ಇಟ್ಟುಕೊಳ್ಳುವ ಸೌಕರ್ಯ ಒದಗಿಸುವ ಜೇಬುಳ್ಳ ಉಡುಪುಗಳು ಬರಬಹುದೇ? 

ಆಗಿನ ಮಹಿಳೆಯರ ಜೇಬಿನಲ್ಲಿ ಏನಿರುತ್ತಿತ್ತು?
ಕ್ರೆಡಿಟ್‌ ಕಾರ್ಡು, ಕಾರಿನ ಕೀ, ಮೊಬೈಲ್ ಇಲ್ಲದ ಕಾಲದಲ್ಲಿ ಮಹಿಳೆಯರು ಜೇಬಿನಲ್ಲಿ ಏನಿಡುತ್ತಿದ್ದರು? ಎಂಬ ಸಂಶಯ ಮೂಡುವುದು ಸಹಜವೇ. ಯಾರಿಗೂ ಕಾಣದಂತೆ ಕೂಡಿಟ್ಟ ಚಿಲ್ಲರೆ ನಾಣ್ಯಗಳು ಜೇಬಿನಲ್ಲಿ ಸ್ಥಾನ ಪಡೆಯುತ್ತಿದ್ದವು. ಪೆನ್ಸಿಲ್, ಚಾಕು, ಕತ್ತರಿ, ಕನ್ನಡಕ ಮತ್ತು ವಾಚು… ಜೇಬಿನಲ್ಲಿ ಇರಲೇಬೇಕಾದ ವಸ್ತುಗಳಾಗಿದ್ದವು. ಇದಲ್ಲದೇ, ತಮ್ಮನ್ನು ತಾವು ಚೆಂದಗಾಣಿಸಲು ಕನ್ನಡಿ, ಸೆಂಟ್‌ ಬಾಟಲಿ, ಬಾಚಣಿಗೆ ಮತ್ತು ನಶ್ಯದ ಡಬ್ಬಿಯೂ ಇದರಲ್ಲಿರುತ್ತಿತ್ತು. ವಯಸ್ಸಾದ ಮಹಿಳೆಯರು, ಒಳ್ಳೆಯ ವರ್ತನೆ ತೋರಿದ ಮಗುವಿಗೆ ಮೆಚ್ಚುಗೆ ಸೂಚಿಸಲು ಬಿಸ್ಕೆಟ್‌ ಮತ್ತು ಕಿತ್ತಳೆ ಅಥವಾ ಸೇಬು ಹಣ್ಣನ್ನು ಜೇಬಿನಲ್ಲಿಡುತ್ತಿದ್ದರಂತೆ.

ಒಳಲಂಗದೊಳಗೆ ಜೇಬು ಬಂದ ಕತೆ…
ಹದಿನೆಂಟನೇ ಶತಮಾನದಲ್ಲಿ ಮಹಿಳೆಯರ ಜೇಬು, ಲಂಗದ ಮೇಲ್ಭಾಗಕ್ಕೆ ಅಥವಾ ಸೊಂಟದ ಪಟ್ಟಿಗೆ ಸಿಕ್ಕಿಸಿ ನೇತಾಡುವ ಪುಟ್ಟ ಚೀಲದ ರೀತಿಯಲ್ಲಿ ಇರುತ್ತಿತ್ತು. ಇಂಥ ಜೇಬುಗಳ ದಾರ ಕತ್ತರಿಸಿ ಒಯ್ಯುವುದು ಕಳ್ಳರಿಗೆ ಸುಲಭವಾಗಿತ್ತು. ಇದೇ ಪಿಕ್‌ಪಾಕೆಟ್‌ ತಂತ್ರ. ಇದನ್ನು ತಪ್ಪಿಸಲು ಒಳಲಂಗದೊಳಗೇ ಜೇಬನ್ನು ಹೊಲಿಯುವ ಪದ್ಧತಿ ಬಂತು. ಭಾರದ, ಹಲವು ಪದರಗಳ ಮಹಿಳೆಯರ ಬಟ್ಟೆಗಳನ್ನು ತಯಾರಿಸುವಾಗ ದರ್ಜಿಗಳು ಒಳಲಂಗಕ್ಕೆ ಹೊಂದಿಕೆಯಾಗುವ ಹಾಗೆ ಜೇಬುಗಳನ್ನು ಹಳೆ ಬಟ್ಟೆಯಿಂದ ಕೈಹೊಲಿಗೆಯಲ್ಲಿ ಸಿದ್ಧಪಡಿಸುತ್ತಿದ್ದರು. ಮೇಲ್ವರ್ಗದ ಮಹಿಳೆಯರಲ್ಲಿ ವಿಶೇಷ ಜೇಬುಗಳನ್ನು ಗಿಫಾrಗಿ ನೀಡುವ ರೂಢಿಯೂ ಇತ್ತು. 

ಜೇಬಿದ್ದರೆ ಅವಳು ಗ್ರೇಟ್‌!
ಹತ್ತೂಂಬತ್ತನೇ ಶತಮಾನದ ಕಡೆಯಲ್ಲಿ ಸ್ಕರ್ಟ್‌, ಮಹಿಳೆಯರಲ್ಲಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಆದರೆ, ತಾನು ಸ್ವತಂತ್ರ ಮಹಿಳೆ ಎಂದು ಭಾವಿಸಿದವರು ಮಾತ್ರ ಉಡುಪಿನಲ್ಲಿ ಜೇಬನ್ನು ಹೊಲಿಸುತ್ತಿದ್ದರು. ಪುರುಷರೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಮಾನ ಹಕ್ಕು ಹೊಂದಬೇಕು ಎಂದು ಹೋರಾಡುತ್ತಿದ್ದ ಮಹಿಳೆಯರು ಜೇಬಿದ್ದ ಉಡುಪಿನಲ್ಲಿ ಎರಡೂ ಕೈ ಹಾಕಿ ನಿಲ್ಲುತ್ತಿದ್ದರು!

– ಡಾ. ಕೆ.ಎಸ್‌. ಚೈತ್ರ

ಟಾಪ್ ನ್ಯೂಸ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.