ಶಂಕರನಾರಾಯಣ ಮೈರ್ಪಾಡಿ ಅವರಿಗೆ ಗುರುನಮನ
Team Udayavani, Jul 19, 2017, 2:50 AM IST
ಪಣಂಬೂರು: ಯಕ್ಷಗಾನ ಗುರು, ಅಂಧ ಮಕ್ಕಳಿಗೆ ಯಕ್ಷಗಾನ ಕಲಿಸಿದ ಕೀರ್ತಿಗೆ ಪಾತ್ರರಾದ ಶಂಕರ ನಾರಾಯಣ ಮೈರ್ಪಾಡಿ ಅವರಿಗೆ ಗುರುನಮನ ನಡೆಯಿತು.
ಯಕ್ಷಗಾನ ನಾಟಕ ಕಲಾ ಪೋಷಕರ ಸಂಘ ಪಣಂಬೂರು, ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷಗಾನ ಕಲಾ ಮಂಡಳಿ ಎನ್‌ಎಂಪಿಟಿ ಮತ್ತು ಪಣಂಬೂರು ನಂದನೇಶ್ವರ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣ ದಲ್ಲಿ ಕಾರ್ಯಕ್ರಮ ಜರಗಿತು.
ಶೈಲಜಾ ಶಂಕರನಾರಾ ಯಣ ಮೈರ್ಪಾಡಿ ಅವರಿಗೆ ಗೌರವಾರ್ಪಣೆ, ಯಕ್ಷಗಾನ ರಂಗದಲ್ಲಿ ಸಾಧನೆ ಗೈದ ಸುಷ್ಮಾ ಮೈರ್ಪಾಡಿ, ಶರತcಂದ್ರ ಪಣಂಬೂರು ಅವರಿಗೆ ಸಮ್ಮಾನ ಜರಗಿತು.
ಕಣಿಪುರ ಯಕ್ಷಗಾನ ಮಾಸಿಕ ಸಂಪಾದಕ ನಾರಾಯಣ ಚಂಬಲ್ತಿಮಾರ್ ಮಾತನಾಡಿ, ಯಕ್ಷಗಾನ ರಂಗಕ್ಕೆ ಉತ್ತಮ ವಿಮರ್ಶಕ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡುವ ಆವಶ್ಯಕತೆಯಿದೆ ಎಂದರು. ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ ಅವರಲ್ಲಿ ಅಪಾರ ಪ್ರತಿಭೆ ಯಿದ್ದು ಮಕ್ಕಳಿಗೆ ಕಲಿಸಿ ಯಕ್ಷಗಾನ ಕಲೆಯನ್ನು ಪಸರಿಸುತ್ತಿದ್ದಾರೆ ಎಂದರು.
ಬಲ್ಲಿರೇನಯ್ಯ ಯಕ್ಷಗಾನ ಮಾಸಿಕ ಸಂಪಾದಕ ತಾರಾನಾಥ ಬಲ್ಯಾಯ ಶುಭ ಹಾರೈಸಿದರು.
ಕಲೆಯನ್ನು ಬೆಳೆಸಬೇಕು
ಗುರುನಮನ ಸ್ವೀಕರಿಸಿದ ಶಂಕರ ನಾರಾಯಣ ಮೈರ್ಪಾಡಿ ಮಾತನಾಡಿ, ಗುರುನಮನ ಸಂಸ್ಕೃತಿ ನಮ್ಮ ಪರಂಪರೆಯ ಪ್ರತೀಕವಾಗಿದೆ. ಯಾವುದೇ ಕಲೆಯಿರಲಿ ಅದನ್ನು ಮತ್ತಷ್ಟು ಕಲಿತು ಕಲೆಯನ್ನು ಬೆಳೆಸಬೇಕು ಎಂದರು. ಸಾರಿಗೆ ಅಧಿಕಾರಿ ರವಿಶಂಕರ್ ಕಾರಂತ್ ಅಭಿನಂದನಾ ಭಾಷಣ ಮಾಡಿದರು.
ಉದ್ಯಮಿ ಜಗದೀಶ್ ರಾವ್ ಗುರುನಮನ ನಡೆಸಿದರು. ಯಕ್ಷಗಾನ ಕಲಾವಿದ ಸೇರಾಜೆ ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿಯ ಹರಿವಾಣ ಸಹಿತ ಶಾಲು ಹೊದೆಸಿ ಪೋಷಕರ ಪರವಾಗಿ ಪಿ. ಸದಾಶಿವ ಐತಾಳ್ ಗೌರವಿಸಿದರು. ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಎಂ. ಸದಾಶಿವ, ದೇವಳದ ಮ್ಯಾನೇಜರ್ ವೆಂಕಟೇಶ್ ರಾವ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾ ಮಂಡಳಿ ಎನ್‌ಎಂಪಿಟಿ ಸದಸ್ಯ ಪಿ.ಸುಧಾಕರ್ ಕಾಮತ್ ಸ್ವಾಗತಿಸಿದರು. ಸುಬ್ರಹ್ಮಣ್ಯ ವಿಜಯಲಕ್ಷ್ಮೀ ಹೆಬ್ಟಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರದ ಮಕ್ಕಳಿಂದ ಯಕ್ಷಗಾನ ಬಯಲಾಟ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.