ಆ್ಯಂಬುಲೆನ್ಸ್‌ ಚಾಲಕ- ಮಾಲಕರಿಂದ ಪ್ರತಿಭಟನೆ

Team Udayavani, Jul 19, 2017, 2:50 AM IST

pratibatane.jpg

ಮಹಾನಗರ:  ವೆನಾÉಕ್‌ ಜಿಲ್ಲಾ ಸರಕಾರಿ ಆಸ್ಪತ್ರೆ  ಸಹಿತ ಜಿಲ್ಲೆಯ ಎಲ್ಲ  ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಆ್ಯಂಬುಲೆನ್ಸ್‌ ಚಾಲಕರಿಗೆ  ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆಯ “ಆ್ಯಂಬುಲೆನ್ಸ್‌ ಮಾಲಕರ ಹಾಗೂ ಚಾಲಕರ ಘಟಕ’ದ ವತಿಯಿಂದ ಜು. 17ರಂದು  ವೆನಾÉಕ್‌ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಯಿತು.

ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್‌ ಶೆಟ್ಟಿ  ಜಪ್ಪು ಮಾತನಾಡಿ, ಮಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ನಗರ ವಾಗಿದ್ದು, ಇಲ್ಲಿ ವಿಶ್ವದರ್ಜೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿವೆ. ಆರೋಗ್ಯ ಕ್ಷೇತ್ರ ದಲ್ಲಿ  ಆ್ಯಂಬುಲೆನ್ಸ್‌ ವಾಹನಗಳ ಸೇವೆ ಪ್ರಮುಖವಾದುದು. ಆ್ಯಂಬುಲೆನ್ಸ್‌  ಚಾಲಕರು ಜೀವರಕ್ಷಕರು. ಸೇವಾ ಮನೋಭಾವ ಹೊಂದಿರುವ ಇವರು ಎಂಥ ಪರಿಸ್ಥಿತಿಯಲ್ಲೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗುತ್ತಾರೆ ಎಂದರು.

ಕೂಡಲೇ ಸರಿಪಡಿಸಿ
2010ರಲ್ಲಿ  ಸಂಭವಿಸಿದ್ದ  ಮಂಗಳೂರು ವಿಮಾನ ದುರಂತದ ಸಂದರ್ಭದಲ್ಲಿ ಇವರು ನಿರ್ವಹಿಸಿದ ಸೇವೆ ಶ್ಲಾಘನೀಯ. ಆ್ಯಂಬುಲೆನ್ಸ್‌ನಲ್ಲೇ ಜೀವನೋಪಾಯ ಕಂಡುಕೊಂಡಿರುವ ಇವರಿಗೆ ಆಸ್ಪತ್ರೆಗಳ ಆವರಣದಲ್ಲಿ ಮೂಲ ಸೌಕರ್ಯದ ಸಮಸ್ಯೆ ಎದುರಾಗುತ್ತಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.  

ನೈರ್ಮಲ್ಯ ಕಾಪಾಡಿ
ವೆನಾÉಕ್‌ ಆಸ್ಪತ್ರೆಯ ಹೊರಗೆ  ಆ್ಯಂಬುಲೆನ್ಸ್‌  ನಿಲ್ಲಿಸುವ ಪ್ರದೇಶದಲ್ಲಿ ಸಾರ್ವಜನಿಕರು ಕಸ ಬಿಸಾಡುವುದು ಹಾಗೂ ಮೂತ್ರ ವಿಸರ್ಜಿಸುವುದರಿಂದ ಈ ಪ್ರದೇಶದಲ್ಲಿ ಶುಚಿತ್ವಕ್ಕೆ ತೊಂದರೆ ಯಾಗಿದ್ದು,  ಆಂಬ್ಯುಲೆನ್ಸ್‌ ಚಾಲಕರಿಗೆ ಮಲೇರಿಯಾ, ಡೆಂಗ್ಯು ರೋಗಗಳು ಬರುವ ಸಾಧ್ಯತೆಗಳಿವೆ. ಜಿಲ್ಲಾಡಳಿತವು ತತ್‌ಕ್ಷಣ ಈ ಪ್ರದೇಶದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಲು ಕ್ರಮ ಜರಗಿಸಬೇಕು. ಜತೆಗೆ ಇವರಿಗಾಗಿ ಈ ಪ್ರದೇಶದಲ್ಲಿ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಬೇಕು.   ಸುಸಜ್ಜಿತ ಪಾರ್ಕಿಂಗ್‌ (ಮೇಲ್ಛಾವಣಿ ಸಹಿತ) ವ್ಯವಸ್ಥೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿರುವ ಇತರ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್‌ ಚಾಲಕರಿಗೂ ಸೂಕ್ತ  ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಶಾಂತ್‌ ಭಟ್‌ ಕಡಬ, ಆನಂದ್‌ ಅಮೀನ್‌ ಅಡ್ಯಾರ್‌, ಅಬ್ದುಲ್‌ ರಶೀದ್‌  ಜಪ್ಪು, ತು.ರ.ವೇ. ಆ್ಯಂಬುಲೆನ್ಸ್‌ ಮಾಲಕರ ಹಾಗೂ ಚಾಲಕರ ಘಟಕದ ಅಧ್ಯಕ್ಷ ಗಂಗಾಧರ್‌, ಉಪಾಧ್ಯಕ್ಷರಾದ ನಿತ್ಯಾನಂದ ವಾಮಂಜೂರು, ದೇವಿಪ್ರಸಾದ್‌ ಕಾವೂರು, ಪ್ರಧಾನ ಕಾರ್ಯದರ್ಶಿ ಸಿ.ಎಸ್‌. ರಾಧಿಕಾ, ಮಹಮ್ಮದ್‌ ಸಿರಾಜ್‌ ಅಡ್ಕರೆ, ರಕ್ಷಿತ್‌ ಬಂಗೇರ ಕುಡುಪು, ಹರೀಶ್‌ ಶೆಟ್ಟಿ ಶಕ್ತಿನಗರ, ಜ್ಯೋತಿಕಾ ಜೈನ್‌, ಉಮೇಶ್‌ ಮಂಕಿಸ್ಟಾಂಡ್‌, ಗಂಗಾಧರ್‌ ಅತ್ತಾವರ್‌ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

rain

Tamil Nadu;ಸೈಕ್ಲೋನ್‌ ದುರ್ಬಲವಾದ್ರೂ ಭಾರೀ ಮಳೆ?

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.