ವೈದ್ಯಕೀಯ ಸೀಟ್‌ ಮ್ಯಾಟ್ರಿಕ್ಸ್‌ ವಿಳಂಬ: ವಿದ್ಯಾರ್ಥಿಗಳಲ್ಲಿ ಆತಂಕ


Team Udayavani, Jul 19, 2017, 4:40 AM IST

Medical-18-7.jpg

ಬೆಂಗಳೂರು: ರಾಜ್ಯ ಸರಕಾರ ವೈದ್ಯಕೀಯ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸದೇ ಇರುವುದರಿಂದ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆ ವಿಳಂಬವಾಗಲಿದೆ. ನೀಟ್‌ನಲ್ಲಿ ತೇರ್ಗಡೆಯಾಗಿ, ಕೆಇಎ ಮೂಲಕ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಆರಂಭವಾಗಿದೆ. ಆದರೆ, ಈ ವರ್ಷ ಎಷ್ಟು ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳು ರಾಜ್ಯದಲ್ಲಿ ಲಭ್ಯವಿವೆ ಹಾಗೂ ಎಷ್ಟು ವಿದ್ಯಾರ್ಥಿಗಳಿಗೆ ಸೀಟು ಸಿಗಬಹುದು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡಿರುವ ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ರಾಜ್ಯ ಸರಕಾರ ಇನ್ನೂ ಕೆಇಎಗೆ ನೀಡಿಲ್ಲ. ಇದರಿಂದ ಬಹುತೇಕ ವಿದ್ಯಾರ್ಥಿಗಳಲ್ಲಿ ಹಾಗೂ ಹೆತ್ತವರಲ್ಲಿ ಗೊಂದಲ ಸೃಷ್ಟಿಯಾಗಿದೆ. ಎಷ್ಟು ಸೀಟುಗಳು ಲಭ್ಯವಿವೆ ಹಾಗೂ ಯಾವ ರ್‍ಯಾಂಕ್‌ಗೆ ಯಾವ ಕಾಲೇಜು ಲಭ್ಯವಾಗಬಹುದು ಎಂಬ ಯಾವ ಮಾಹಿತಿಯೂ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಆಪ್ಶನ್‌ ಎಂಟ್ರಿ ಆರಂಭವಾದ ಅನಂತರವೇ ಕಾಲೇಜುಗಳ ಮಾಹಿತಿ ಲಭ್ಯವಾಗಲಿದೆ.

ನೀಟ್‌ ರ್‍ಯಾಂಕ್‌ ಆಧಾರದಲ್ಲಿ ಸೀಟು ಲಭ್ಯವಾಗದೇ ಇದ್ದರೆ, ಸಿಇಟಿ ರ್‍ಯಾಂಕ್‌ ಆಧಾರದಲ್ಲೇ ಎಂಜಿನಿಯರಿಂಗ್‌ ಅಥವಾ ಭಾರತೀಯ ವೈದ್ಯ ಪದ್ಧತಿಯ ಕೋರ್ಸ್‌ ಸೇರಬಹುದೆಂದು ಆಶಾಭಾವನೆ ಹೊಂದಿದ್ದ ವಿದ್ಯಾರ್ಥಿಗಳಿಗೂ ನಿರಾಸೆಯಾಗಿದೆ. ವೈದ್ಯಕೀಯ ಕೋರ್ಸ್‌ನ ಮೊದಲ ಹಂತದ ಸೀಟು ಹಂಚಿಕೆ ಅನಂತರ ಎಂಜಿನಿಯರಿಂಗ್‌ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಬೇಕು ಎಂದು ಹಲವು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದರು. ಆದರೆ, ಕೆಇಎ ಇದಕ್ಕೆ ಅವಕಾಶ ನೀಡಿಲ್ಲ. ಎಂಜಿನಿಯರಿಂಗ್‌ 2ನೇ ಸುತ್ತಿನ ಸೀಟು ಹಂಚಿಕೆ ಮುಗಿದೆ. ಎಂಜಿನಿಯರಿಂಗ್‌ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರು ವೈದ್ಯಕೀಯ ಕೋರ್ಸ್‌ಗೆ ನೀಟ್‌ ಅಡಿಯಲ್ಲಿ ಸೀಟು ಪಡೆದು, ಎಂಜಿನಿಯರಿಂಗ್‌ ಸೀಟನ್ನು ಕೆಇಎಗೆ ಒಪ್ಪಿಸುವ ಸಾಧ್ಯತೆ ಇದೆ. ಉಳಿಕೆಯಾಗಿರುವ ಎಲ್ಲ ಸೀಟುಗಳನ್ನು ಎಂಜಿನಿಯರಿಂಗ್‌ 2ನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆ ಮಾಡುವುದಕ್ಕೆ ಪ್ರಾಧಿಕಾರ ನಿರ್ಧರಿಸಿದೆ.

ಈ ಮಧ್ಯೆ, ವಿದ್ಯಾರ್ಥಿಗಳಿಗೆ ಸಂಕಟ ಎದುರಾಗಿದೆ. ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್‌ ಸೀಟು ಹಂಚಿಕೆಯಾಗಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು. ಇಲ್ಲವಾದರೆ ಸೀಟು ರದ್ದಾಗಲಿದೆ ಎಂಬ ಸಂದೇಶ ಪ್ರಾಧಿಕಾರ ನೀಡಿದೆ. ಹಾಗೆಯೇ ನೀಟ್‌ ಅಡಿಯಲ್ಲಿ ಸೀಟು ಲಭ್ಯವಾಗುವುದಿಲ್ಲ ಎಂಬ ಸಂದೇಶವನ್ನು ಕೆಲವು ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.

ಶುಲ್ಕ ವಿವರ ಪ್ರಾಧಿಕಾರಕ್ಕೆ ಇನ್ನೂ ಬಂದಿಲ್ಲ
ಪ್ರಸಕ್ತ ಸಾಲಿನಿಂದಲೇ ವೈದ್ಯಕೀಯ ಶಿಕ್ಷಣದ ಪ್ರವೇಶ ಶುಲ್ಕ ಶೇ. 10ರಷ್ಟು ಏರಿಸಲು ಸರಕಾರ ನಿರ್ಧರಿಸಿದ್ದು, ಶುಲ್ಕದ ವಿವರವನ್ನು ಇನ್ನೂ ಪ್ರಾಧಿಕಾರಕ್ಕೆ ನೀಡಿಲ್ಲ. ಶೇ. 10ರಷ್ಟು ಹೆಚ್ಚಳದಿಂದ ಈ ವರ್ಷ ಸರಕಾರಿ ಕಾಲೇಜು ಪ್ರವೇಶ ಶುಲ್ಕ 77 ಸಾವಿರ ರೂ. ಹಾಗೂ ಖಾಸಗಿ ಸೀಟಿಗೆ 6.35 ಲಕ್ಷ ರೂ. ಶುಲ್ಕವಾಗಲಿದೆ. ಸರಕಾರಿ ವೈದ್ಯಕೀಯ ಕಾಲೇಜಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 16,000 ರೂ. ಶುಲ್ಕ ಇರಲಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಇನ್ನೂ ಪ್ರಾಧಿಕಾರಕ್ಕೆ ಸಿಕ್ಕಿಲ್ಲ. ಹಾಗೆಯೇ ಈ ಬಾರಿ ರಾಜ್ಯದಲ್ಲಿ ಆರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು 100ರಿಂದ 150ಕ್ಕೆ ಹಾಗೂ ಕಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ 150ರಿಂದ 200ಕ್ಕೆ  ಏರಿಸಲಾಗಿದೆ. ಇದರಿಂದ ಹೆಚ್ಚುವರಿ 350 ಸರಕಾರಿ ಸೀಟುಗಳು ಲಭ್ಯವಾಗಿವೆ.

ಟಾಪ್ ನ್ಯೂಸ್

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.