ದೇಶ ರಕ್ಷಕ ಕುಟುಂಬದ ಯುವಕ ಈಗ ಕ್ಯಾಪ್ಟನ್!
Team Udayavani, Jul 19, 2017, 3:45 AM IST
ಪುತ್ತೂರು: ತಂದೆ ಮಾಜಿ ಸೈನಿಕ, ಇಬ್ಬರು ಪುತ್ರರು ಹಾಲಿ ಸೈನಿಕರು. ದೇಶ ಕಾದ, ಕಾಯುವ ಕುಟುಂಬದ ಓರ್ವ ಸದಸ್ಯ ಈಗ ಸೇನಾ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಸಾಧನೆ ಮಾಡಿದ್ದಾರೆ. ಪುತ್ತೂರಿನ ನಗರದ ಎಪಿಎಂಸಿ ರಸ್ತೆ ಸಮೀಪದ ಕುಟುಂಬವೊಂದರ ದೇಶ ರಕ್ಷಣೆಯ ಕಾಯಕಕ್ಕೆ ಹತ್ತೂರೇ ನಮೋ ನಮಃ ಎನ್ನುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ನಗರದ ಎಪಿಎಂಸಿ ರಸ್ತೆ ಸಮೀಪದ ನಿವಾಸಿ ಮಾಜಿ ಸೈನಿಕ ರಾಧಾಕೃಷ್ಣ ಗೌಡ ಮತ್ತು ಉಷಾ ರಾಧಾಕೃಷ್ಣ ದಂಪತಿಯ ಎರಡನೇ ಪುತ್ರ ರಾಧೇಶ್ ಆರ್. ಗೌಡ ಪದೋನ್ನತಿಗೊಂಡು ಕ್ಯಾಪ್ಟನ್ ಆಗಿ ನೇಮಕಗೊಂಡವರು. ಮೊದಲ ಪುತ್ರ ರಂಜಿತ್ ಆರ್.ಗೌಡ ಕಮೀಷನ್ಡ್ ಅಧಿಕಾರಿ ಆಗಿದ್ದಾರೆ.
ಕ್ಯಾಪ್ಟನ್ ಆಗಿ ಪದೋನ್ನತಿ
ರಾಧೇಶ್ ಆರ್. ಗೌಡ ಭಾರತೀಯ ಭೂ ಸೇನೆಯಲ್ಲಿ 18ನೇ ಗ್ರೆನೇಡಿಯರ್ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್ ದ್ರಾಸ್ ಸೇನಾ ಶಿಬಿರದ 21ನೇ ಗ್ರೇನೇಡಿಯರ್ನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ರಾಧೇಶ್ ಆರ್. ಗೌಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುತ್ತೂರಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಮಂಗಳೂರು ಹಾಗೂ ಎಂಜಿನಿಯ ರಿಂಗ್ ಶಿಕ್ಷಣವನ್ನು ಪುತ್ತೂರು ಹಾಗೂ ಕನಕಪುರದಲ್ಲಿ ಪೂರ್ಣಗೊಳಿಸಿ, 2015ರಲ್ಲಿ ಭಾರತೀಯ ಭೂ ಸೇನೆಯಲ್ಲಿ ಕಮೀಷನ್ಡ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಚೆನ್ನೈ ಆಫೀಸರ್ ಟ್ರೇನಿಂಗ್ ಅಕಾಡೆಮಿಯಲ್ಲಿ 1 ವರ್ಷದ ತರಬೇತಿ ಪಡೆದು 18ನೇ ಗ್ರೇನೆಡಿಯರ್ ಬೆಟಾಲಿಯನ್‌ಗೆ ನಿಯುಕ್ತಿಗೊಂಡು ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಕ್ಯಾಪ್ಟನ್ ಆಗಿ ನಿಯಕ್ತಿಗೊಂಡಿದ್ದಾರೆ.
2017 ಎ. 15ರಂದು ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದೇನೆ. ಮುಂದಿನ 1 ವರ್ಷ ಕಾರ್ಗಿಲ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದೇನೆ. ತಂದೆ ಮಾಜಿ ಸೈನಿಕರಾಗಿದ್ದು, ಅವರು ನಮಗೆಲ್ಲಾ ಸ್ಫೂರ್ತಿ. ಸಹೋದರ ನೇವಿಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ ಎಂದು ದೇಶ ಸೇವೆಯ ಬಗ್ಗೆ ಸಂಭ್ರಮಿಸುತ್ತಾರೆ ರಾಧೇಶ್ ಆರ್. ಗೌಡ. ರಾಧೇಶ್ ಗೌಡ ಅವರ ಸಹೋದರ ರಂಜಿತ್ ಗೌಡ ಕಮಿಷನ್ಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಂಜಿತ್ 2012ನೇ ಸಾಲಿನಲ್ಲಿ ಭಾರತೀಯ ನೌಕಾ ಪಡೆಯಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ನೇಮಕಗೊಂಡು, ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ್ ತನಕದ ಪದವಿಯನ್ನು ಪುತ್ತೂರಿನಲ್ಲೇ ಪೂರ್ಣಗೊಳಿಸಿದ್ದರು.
ಮಕ್ಕಳ ಬಗ್ಗೆ ಹೆಮ್ಮೆ
ನಾನು 9 ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದೆ. ಈಗ ಮಕ್ಕಳಿಬ್ಬರು ಸೈನ್ಯದಲ್ಲಿ ದೇಶ ರಕ್ಷಕರಾಗಿದ್ದಾರೆ. ನಾನು ಬಯಸಿದ್ದು ಅದನ್ನೆ. ಹಾಗಾಗಿ ನನಗೆ ಅತೀವ ಹೆಮ್ಮೆಯಿದೆ.
– ರಾಧಾಕೃಷ್ಣ ಗೌಡ (ತಂದೆ), ಮಾಜಿ ಸೈನಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.