ಸಿಎ-ಸಿಪಿಟಿ:ತವಿಶಿ ದೇಚಮ್ಮ ರಾಜ್ಯಕ್ಕೆ ಪ್ರಥಮ
Team Udayavani, Jul 19, 2017, 3:10 AM IST
ಮೂಡಬಿದಿರೆ: ರಾಷ್ಟ್ರ ಮಟ್ಟದಲ್ಲಿ ನಡೆದ ಸಿಎ-ಸಿಪಿಟಿ ಪರೀಕ್ಷೆಗೆ ಹಾಜರಾದ ಆಳ್ವಾಸ್ ಪದವಿಪೂರ್ವ ಕಾಲೇಜಿನ 130 ವಿದ್ಯಾರ್ಥಿಗಳಲ್ಲಿ 105 ಮಂದಿ ಉತ್ತೀರ್ಣರಾಗಿ ಶೇ. 80.76 ಫಲಿತಾಂಶ (61 ಮಂದಿ ಡಿಸ್ಟಿಂಕ್ಷನ್) ದಾಖಲಿಸಿ ರಾಜ್ಯದಲ್ಲಿ ಅಗ್ರಸ್ಥಾನ ಗಳಿಸಿದೆ. ಇವರಲ್ಲಿ ತವಿಶಿ ದೇಚಮ್ಮ 191 (ಶೇ. 95.50) ಅಂಕ ಗಳಿಸಿ ರಾಜ್ಯದಲ್ಲಿ ಪ್ರಥಮ, ರಾಷ್ಟ್ರದಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ 88,916 ಮಂದಿ ಈ ಪರೀಕ್ಷೆಗೆ ಹಾಜರಾಗಿ ಶೇ. 40.52 ಉತ್ತೀರ್ಣತೆ ಸಾಧಿಸಿದ್ದು ರಾಷ್ಟ್ರ ಮಟ್ಟದಲ್ಲಿ 200ರಲ್ಲಿ 192 ಅಂಕವನ್ನು ಪಡೆದ ಇಂದೋರ್‌ನ ವಿದ್ಯಾರ್ಥಿ ಮೇಕಾ ನರೇಶ್ ಕುಮಾರ್ ಪ್ರಥಮ ಸ್ಥಾನಿಯಾಗಿದ್ದಾರೆ ಎಂದರು.
ಆಳ್ವಾಸ್‌ನ ಶ್ರದ್ಧಾ ಎಂ.ಎನ್. 185, ಶೃಂಗೇರಿ ಮೂಲದ ಅವಳಿ ಸಹೋದರಿಯರಾದ ಸ್ವಾತಿ ಹೆಗ್ಡೆ 186, ಭಾಗ್ಯಶ್ರೀ ಎನ್. ಹೆಗ್ಡೆ 184 ಅಂಕ ಗಳಿಸಿದ್ದಾರೆ.
ಸುಕೇಶ್ ಟಿ. ಎಸ್. 176, ಅಭಯಕಾಂತ್ 175, ಪ್ರಖ್ಯಾತ್ ಶೆಟ್ಟಿ 174, ಅದಿತಿ ಎಸ್. ಹೆಗ್ಡೆ 174, ನಾಗೇಂದ್ರ 173, ನಿಖೀಲಾ ಆಶ್ರಿತ್ 172, ಅನಿತಾ ಕೆ. ಹೆಗ್ಡೆ 172 ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆಯುತ್ತಿರುವ, ಗಾಲಿಕುರ್ಚಿಯಲ್ಲೇ ಓಡಾಡುತ್ತಿರುವ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಅಂಗವಿಕಲ ವಿದ್ಯಾರ್ಥಿ ದೀಕ್ಷಿತ್ ಶೆಟ್ಟಿ 127 (ಪಿಯುಸಿಯಲ್ಲಿ ಶೇ. 95) ಅಂಕ ಗಳಿಸಿದ್ದಾರೆ.
ಇದಲ್ಲದೆ ಪದವಿ ತರಗತಿಯಿಂದ ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಶೇ. 53.37 (45ರಲ್ಲಿ 24 ಮಂದಿ) ಉತ್ತೀರ್ಣತೆ ದಾಖಲಾಗಿದೆ. ದೇಶದ, ರಾಜ್ಯದ ಫಲಿತಾಂಶಗಳನ್ನು ತುಲನೆ ಮಾಡಿ ನೋಡುವಾಗ ಆಳ್ವಾಸ್ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತಸ ತಂದಿದೆ’ ಎಂದು ಅವರು ತಿಳಿಸಿದರು.
ಆಳ್ವಾಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ| ಪದ್ಮನಾಭ ಶೆಣೈ, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್, ಸಿಎ-ಸಿಪಿಟಿ ಸಂಯೋಜಕ ಪ್ರಶಾಂತ್ ಎಂ.ಡಿ. ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತವಿಶಿ ದೇಚಮ್ಮ
ಮೂಲತಃ ಮಡಿಕೇರಿಯ ತವಿಶಿ ದೇಚಮ್ಮ ಅವರು ಮಡಿಕೇರಿಯ ವಕೀಲರ ಸಂಘದ ಕಾರ್ಯದರ್ಶಿ, ರೋಟರಿ ಅಧ್ಯಕ್ಷ ಪ್ರೀತಂ, ನ್ಯೂಸ್ ಚಾನೆಲ್‌ನಲ್ಲಿ ದುಡಿಯುತ್ತಿರುವ ಹೇಮಾ ಅವರ ಪುತ್ರಿ. ದೇಚಮ್ಮ ಎಸೆಸೆಲ್ಸಿ (ಶೇ. 98.23)ಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ನನಗೆ ವಿಜ್ಞಾನ ಬೇಡ; ವಾಣಿಜ್ಯವೇ ಬೇಕು ಎಂದೂ ಅದೂ ಮೂಡಬಿದಿರೆ ಆಳ್ವಾಸ್‌ನಲ್ಲೇ ಕಲಿಯಬೇಕೆಂದೂ ತನ್ನ ಆಗ್ರಹ ವ್ಯಕ್ತಪಡಿಸಿದ ಕಾರಣ ಆಕೆಯನ್ನು ಆಳ್ವಾಸ್‌ಗೆ ಸೇರಿಸಿದೆವು. ಆಳ್ವ ಅವರು ಅಡಾಪ್ಶನ್ ಸ್ಕೀಂನಡಿ ಹಾಸ್ಟೆಲ್ ಸಹಿತ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅಲ್ಲಿನ ವಾತಾವರಣ ಆಕೆಗೆ ಹಿತವಾಗಿತ್ತು. ಪಿಯುಸಿಯಲ್ಲಿ 591 ಅಂಕ ಗಳಿಸಿದ ದೇಚಮ್ಮ ಸದ್ಯ ಬೆಂಗಳೂರಿನಲ್ಲಿ ಹಗಲು ಸಿಎ ಅಭ್ಯಾಸ ಮಾಡುತ್ತ ಸಂಜೆ ಜೈನ್ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿರುವುದಾಗಿ ಪ್ರೀತಂ ತಿಳಿಸಿದರು.
ದೇಚಮ್ಮ ಪತ್ರಿಕೆ ಜತೆ ಮಾತನಾಡಿ, “ಆಳ್ವಾಸ್‌ನವರು ರ್‍ಯಾಂಕ್ ನಿರೀಕ್ಷಿಸಿ ದ್ದರು, ನಾನು ನಿರೀಕ್ಷಿಸಿರಲಿಲ್ಲ, ಅಲ್ಲಿಯ ಶಿಸ್ತು, ಬೋರ್ಡ್ ಪರೀಕ್ಷೆಗೆ ಕೊಟ್ಟಷ್ಟೇ ಮಹತ್ವವನ್ನು ಈ ತರಬೇತಿಗೂ ನೀಡಿರುವುದರಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ. ಮುಂದಿನ ಹಂತದ ಪರೀಕ್ಷೆಗೆ ತಯಾರಾಗುತ್ತಿದ್ದೇನೆ’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.