ಕರಾವಳಿಯಾದ್ಯಂತ ಬಿರುಸಿನ ಮಳೆ
Team Udayavani, Jul 19, 2017, 4:00 AM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಮಂಗಳವಾರ ಬೆಳಗ್ಗಿನಿಂದಲೇ ಬಿರುಸಿನ ಮಳೆಯಾಗಿದೆ. ಕೆಲವೆಡೆ ಗಾಳಿ ಸಹಿತ ಮಳೆ ಬಂದಿದ್ದು, ಮಧ್ಯಾಹ್ನ ತನಕ ಮುಂದುವರಿದಿದೆ. ಇನ್ನು ಕೆಲವೆಡೆ ದಿನವಿಡೀ ಸುರಿದಿದೆ.
ಮಂಗಳೂರು, ಉಡುಪಿಯಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗಿದ್ದು, ಗಾಳಿಯೂ ಇತ್ತು. ಬಿರುಸಿನ ಮಳೆಗೆ ಮಂಗಳೂರು ಬಂಟ್ಸ್ ಹಾಸ್ಟೆಲ್, ಪಿವಿಎಸ್, ಕಂಕನಾಡಿ, ಲೇಡಿಹಿಲ್ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಕೃತಕ ನೆರೆ ಉಂಟಾ ಗಿದೆ. ರಸ್ತೆ ನಡುವೆ ಇರುವ ಹೊಂಡಗಳಲ್ಲಿ ನೀರು ತುಂಬಿರುವುದು ತಿಳಿಯದೇ ನಗರದ ಕೆಲವೆಡೆ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದ ಘಟನೆಯೂ ನಡೆಯಿತು. ಕೋಟೆಕಾರು, ಬೀರಿ, ತಲಪಾಡಿ, ತೊಕ್ಕೊಟ್ಟು ಪರಿಸರದಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಬಜಪೆ, ಪುತ್ತೂರು, ಮೂಲ್ಕಿ, ವಿಟ್ಲ, ಮಡಂತ್ಯಾರು, ವೇಣೂರು, ಸುರತ್ಕಲ್, ಕಡಬದಲ್ಲಿ ಬೆಳಗ್ಗಿನಿಂದಲೇ ವರ್ಷಧಾರೆಯಾಗಿದೆ. ಕಿನ್ನಿಗೋಳಿ, ಕಟೀಲು ಪರಿಸರದಲ್ಲಿ ಸಂಜೆ ಮಳೆ ಬಿರುಸು ಪಡೆದಿದೆ.
ಬಂಟ್ವಾಳದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದ್ದು, ಸೋಮವಾರ ತಡರಾತ್ರಿಯೂ ಮಳೆಯಿತ್ತು. ಕಾಣಿಯೂರು-ಬೆಳ್ಳಾರೆ ರಸ್ತೆಗೆ ಹೊಳೆ ನೀರು ನುಗ್ಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಉಡುಪಿ, ಮಣಿಪಾಲ, ಬ್ರಹ್ಮಾವರ, ಕಾಪು, ಶಿರ್ವ, ತೆಕ್ಕಟ್ಟೆ, ಪಡುಬಿದ್ರಿ, ಕೊಲ್ಲೂರು, ಜಡ್ಕಲ್, ಮುದೂರು, ಕೋಟೇಶ್ವರ, ಕಾರ್ಕಳ, ಸಿದ್ದಾಪುರ ಮೊದಲಾದೆಡೆ ಉತ್ತಮ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.