ಮನೆ ಮೇಲೆ ಮರ ಬಿದ್ದು  ಮೂವರಿಗೆ ಗಾಯ; 3 ಲ.ರೂ. ನಷ್ಟ

Team Udayavani, Jul 19, 2017, 3:40 AM IST

mane-mele-mara.jpg

ಪಡುಬಿದ್ರಿ: ತೆಂಕ ಎರ್ಮಾಳು ಕಂಞನ್‌ತೋಟ ಚಿಕ್ಕಿ ಪೂಜಾರ್ತಿ ಅವರ ಮನೆಯ ಹೆಂಚಿನ ಮಾಡಿಗೆ ಮಂಗಳವಾರ ಬೆಳಗ್ಗಿನ ವೇಳೆ ಗಾಳಿ ಮಳೆಗೆ ಭಾರೀ ಗಾತ್ರದ ಹೆರಿಬೋಗಿ (ಕರ್ಮಾರು) ಮರವೊಂದು ತುಂಡಾಗಿ ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಇಬ್ಬರು ಮಕ್ಕಳು ಮತ್ತು ಮಹಿಳೆ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಾಪು ಕಂದಾಯ ಪರಿವೀಕ್ಷಕ ರಾಮಕೃಷ್ಣ ನಾಯಕ್‌ ಹಾಗೂ ಗ್ರಾಮ ಲೆಕ್ಕಿಗ ಅರುಣ್‌ ಕುಮಾರ್‌ ಅವರು ಸುಮಾರು 3 ಲಕ್ಷ ರೂ. ನಷ್ಟ  ಸಂಭವಿಸಿರುವುದಾಗಿ ಅಂದಾಜಿಸಿದ್ದಾರೆ.

ಏಳು ಮಂದಿ ವಾಸ: ಡಿಕ್ಲರೇಶನ್‌ ತಗಾದೆಯಿಂದಾಗಿ ನ್ಯಾಯಾಲಯದ ಮೆಟ್ಟಲೇರಿರುವ ಈ ಜಾಗದಲ್ಲಿ ಚಿಕ್ಕಿ ಪೂಜಾರ್ತಿ ಸಹಿತ ಏಳು ಮಂದಿ ವಾಸಿಸು ತ್ತಿದ್ದರು. ಮಣ್ಣಿನ ಇಟ್ಟಿಗೆಗಳ ಗೋಡೆ ಹೊಂದಿರುವ ಮನೆ ಇದಾಗಿದ್ದು ಮನೆಯ ಮಾಡು ಸಂಪೂರ್ಣ ನಾಶ ವಾಗಿದೆ. ಮನೆಯನ್ನು ಬಿಚ್ಚಿ ಪುನಾ ರಚಿಸಬೇಕಿದ್ದು ಗ್ರಾ.ಪಂ. ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ಗ್ರಾ.ಪಂ. ಅಧ್ಯಕ್ಷೆ ಅರುಣಾಕುಮಾರಿ ಹೇಳಿದ್ದಾರೆ.

ಸದ್ಯ ಸಮೀಪದಲ್ಲೇ ಇರುವ ತಮ್ಮ ಸಂಬಂಧಿ ಬೇಬಿ ಪೂಜಾರ್ತಿ ಅವರ ಮನೆಯಲ್ಲಿ ವಾಸ್ತವ್ಯವಿರುವ ಈ ಕುಟುಂಬಕ್ಕೆ ಮಧ್ಯಾಹ್ನದೂಟದ ವ್ಯವಸ್ಥೆ ಯನ್ನು ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ ಹಾಗೂ ಪಿಡಿಒ ಅಶಾಲತಾ ಕಲ್ಪಿಸಿದ್ದಾರೆ. ಕೆಎಫ್‌ಡಿಸಿ ನಿರ್ದೇಶಕ ವೈ. ದೀಪಕ್‌ ಕುಮಾರ್‌ ಮನೆಯ ಬಳಿ ಇನ್ನೂ ಅಪಾಯ ಕಾರಿ ಯಾಗಿ ರುವ ಮರಗಳನ್ನು ಕಡಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಿದ್ದಾರೆ.

ಜಿ.ಪಂ. ಸದಸ್ಯ ಶಶಿಕಾಂತ್‌ ಪಡು ಬಿದ್ರಿ, ತಾ.ಪಂ. ಸದಸ್ಯ ಕೇಶವ ಮೊಲಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾ.ಪಂ. ಸದಸ್ಯ ರತ್ನಾಕರ ಕೋಟ್ಯಾನ್‌, ಬಾಲ ಚಂದ್ರ ಎರ್ಮಾಳು ಸಹಿತ ಸ್ಥಳೀಯರು ಸೇರಿ ಮನೆ ಗೋಡೆಯ ಆಧಾರದಲ್ಲಿ ನಿಂತಿರುವ ಮರವನ್ನು ಸರಿಸಿ ಮನೆಯ ಇಟ್ಟಿಗೆ ಗೋಡೆಗೆ ಮಳೆಯಿಂದ ಹೆಚ್ಚಿನ ಹಾನಿಯಾಗದಂತೆ ಟಾರ್ಪಾಲನ್ನು ಹೊದೆಸಿದ್ದಾರೆ.

ಘಟನೆ ಸಂಭವಿಸಿದಾಗ ಮಕ್ಕಳೊಂದಿಗೆ ಲತಾ ಅವರು ಕೋಣೆಯಲ್ಲಿ  ಮಲಗಿದ್ದರು. ಅಪಾಯ ವನ್ನು ಗಮನಿಸಿ, ಮಕ್ಕಳಾದ ಸಿಂಚನಾ (7) ಹಾಗೂ ನಿಶಾಂತ್‌ (11) ಅವರ ಮೇಲೆ ಹೆಂಚುಗಳು, ಮರದ ಪಕ್ಕಾಸು, ರೀಪುಗಳು ಬೀಳುವುದನ್ನು ತಪ್ಪಿಸಿ ಮಕ್ಕಳನ್ನು ರಕ್ಷಿಸಲು ಅವರ ಮೇಲೆ ಅಂಗಾತ ಮಲಗಿದ್ದ ಲತಾ ಪೂಜಾರ್ತಿ (32) ಅವರ ತಲೆಗೆ ತೀವ್ರ ಸ್ವರೂಪದ ಗಾಯ ಗಳಾಗಿವೆ. ಸಿಂಚನಾಳ ಬಲಗಾಲ ಮೂಳೆ ಮುರಿತ ವಾಗಿದ್ದು  ನಿಶಾಂತ್‌ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.