ಗ್ರಾಮೀಣ ಭಾಗದಲ್ಲಿ ಕನ್ನಡ ಬೆಳೆಯುತ್ತಿದೆ: ಉದಯ ಕುಮಾರ್ ಶೆಟ್ಟಿ ಇನ್ನ
Team Udayavani, Jul 19, 2017, 4:05 AM IST
ಬೆಳ್ಮಣ್: ಕನ್ನಡದ ಪರ ಹೋರಾಟಗಳು ನಗರ ಪ್ರದೇಶಗಳಲ್ಲಿ ನಿರಂತರವಾಗಿದ್ದರೂ ನಿಜವಾದ ಸ್ವಾರ್ಥ ರಹಿತ ಹೋರಾಟ ಗ್ರಾಮೀಣ ಪ್ರದೇಶಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದು ಈ ಭಾಗದಲ್ಲಿ ಕನ್ನಡ ಉಳಿಯುವುದರ ಜತೆಯಲ್ಲಿ ಉತ್ತಮವಾಗಿ ಬೆಳೆಯುತ್ತಿದೆಯೆಂದು ಭಾರತೀಯ ಮಾನವ ಹಕ್ಕುಗಳ ಉಡುಪಿ ಜಿಲ್ಲಾಧ್ಯಕ್ಷ ಇನ್ನಾ ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ರವಿವಾರ ಬೆಳ್ಮಣ್ ಸಂತ ಜೋಸೆಫರ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕ , ಬೆಳ್ಮಣ್ ಹೋಬಳಿ ಮತ್ತು ಬೆಳ್ಮಣ್ ವಲಯ ಪತ್ರಕರ್ತರ ಬಳಗ , ರೋಟರಿ ಕ್ಲಬ್ ಬೆಳ್ಮಣ್, ಹಾಗೂ ಕನ್ನಡ ಸಾಹಿತ್ಯ ಸಂಘ ಇವರ ಸಹಭಾಗಿತ್ವದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ನಡೆದ ಬೆಳ್ಮಣ್ ಹೋಬಳಿ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಪತ್ರಕರ್ತರು ಹಾಗೂ ಇತರ ಸಂಸ್ಥೆಗಳ ಜತೆ ಅರ್ಥಪೂರ್ಣವಾಗಿ ನಡೆದ ಈ ಸಮ್ಮೇಳನದ ಮಾಧ್ಯಮ ಮತ್ತು ಸಾಹಿತ್ಯಗೋಷ್ಠಿಯಲ್ಲಿ ಪತ್ರಕರ್ತ ಶೇಖರ ಅಜೆಕಾರು ಅವರ ಬದುಕು ಬರೆಹ ಬಗ್ಗೆ ಮುಂಬೈನ ಹಿರಿಯ ಪತ್ರಕರ್ತ ಧನಂಜಯ ಗುರುಪುರ ಹಾಗೂ ಉಡುಪಿ ಎಂಜಿಎಂನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬೊರ್ಗಲ್‌ಗುಡ್ಡೆ ಮಂಜುನಾಥ ಮಾತನಾಡಿದರೆ,ಮಾಧ್ಯಮ ಮತ್ತು ಕೃಷಿರಂಗ ಗೋಷ್ಠಿಯಲ್ಲಿ ಪತ್ರಕರ್ತ ರಾಧಾಕೃಷ್ಣ ತೋಡಿಕಾನರ ಬದುಕು ಬರೆಹದ ಬಗ್ಗೆ ಚಿಂತಕ,ಹರಿದಾಸ ಬಿ.ಸಿ.ರಾವ್ ಶಿವಪುರ ಮಾತನಾಡಿದರು. ಇದೇ ಸಂದರ್ಭ ಶೇಖರ ಅಜೆಕಾರು,ರಾಧಾಕೃಷ್ಣ ತೋಡಿಕಾನ ಹಾಗೂ ಸಮ್ಮೇಳನಾಧ್ಯಕ್ಷ ಶ್ರೀಕರ ಭಟ್‌ರನ್ನು ಸಮ್ಮಾನಿಸಲಾಯಿತು.
ಬೆಳ್ಮಣ್ ಹೋಬಳಿ ಆಧ್ಯಕ್ಷೆ ಜಯಂತಿ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದು, ರೋಟರಿ ಆಧ್ಯಕ್ಷ ದೇವೇಂದ್ರ ಶೆಟ್ಟಿ,ಕಾರ್ಯದರ್ಶಿ ರಾಜೇಶ್ ಕೆ.,ತಾಲೂಕು ಕಸಾಪ ಆಧ್ಯಕ್ಷ ಪ್ರಭಾಕರ ಶೆಟ್ಟಿ,ಸೂರಾಲು ನಾರಾಯಣ ಮಡಿ, ಸಂಘಟಕ ಬಿ. ಪುಂಡಲೀಕ ಮರಾಠೆ, ದೀಕ್ಷಾ, ಸೃಷ್ಟಿ ಶೆಟ್ಟಿ ಮತ್ತಿತರರಿದ್ದರು. ಪಿಲಾರು ಸುಧಾಕರ ಶೆಣೈ ಸ್ವಾಗತಿಸಿ, ಶರತ್ ವಂದಿಸಿದರು. ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.