ಗಿರಿಜನರ ಪುನರ್ ವಸತಿ ಪ್ಯಾಕೇಜ್‌ಗೆ ಶಿಫಾರಸು
Team Udayavani, Jul 19, 2017, 11:42 AM IST
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿನ ಬುಡಕಟ್ಟು ಜನರ ಸ್ಥಳಾಂತರ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಪ್ರೊ.ಮುಜಾಫರ್ ಅಸ್ಸಾದಿ ವರದಿಯ ಅನುಷ್ಠಾನ ಸಂಬಂಧ ಅರಣ್ಯ ಇಲಾಖೆಯಿಂದ ಈವರೆಗೆ ಯಾವುದೇ ಸೌಲಭ್ಯ ಪಡೆಯದಿರುವ 3219 ಅರ್ಹ ಗಿರಿಜನ ಕುಟುಂಬಗಳಿಗೆ 15 ಲಕ್ಷ ರೂ.ಗಳ ಪುನರ್ ವಸತಿ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರೊ.ಮುಜಾಫರ್ ಅಸ್ಸಾದಿ ವರದಿ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಡಿ. ರಂದೀಪ್ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಹೈಕೋರ್ಟ್ ಆದೇಶದ ಹಿನ್ನೆಲೆ ಸರ್ಕಾರ ರಚಿಸಿದ ಪ್ರೊ.ಮುಜಾಫರ್ ಅಸ್ಸಾದಿ ಸಮಿತಿಯ ಅಂತಿಮ ವರದಿಯಲ್ಲಿನ ಶಿಫಾರಸುಗಳಿಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಮಿತಿ ಸಭೆಯಲ್ಲಿ ಶಿಫಾರಸು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ವಿವಿಧ ಇಲಾಖೆಗಳಿಗೆ ನೀಡಲಾಗಿದೆ.
ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಈ ಹಿಂದೆ ಎರಡು ಸಭೆ ನಡೆಸಿ ನಾಗರಹೊಳೆ ಅಭಯಾರಣ್ಯದಲ್ಲಿ 3418 ಗಿರಿಜನ ಕುಟುಂಬಗಳು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ಥಳಾಂತರಗೊಂಡಿದ್ದು, ಈ ಗಿರಿಜನರ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಅಧ್ಯಯನ ನಡೆಸಿ ಈ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ಸೌಲಭ್ಯ ವಿಸ್ತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಅದರಂತೆ ಜಿಲ್ಲೆಯ ಎಚ್.ಡಿ.ಕೋಟೆ 1801, ಹುಣಸೂರು 1106, ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ 511 ಕುಟುಂಬಗಳು ಸೇರಿದಂತೆ ಒಟ್ಟಾರೆ 3418 ಕುಟುಂಬಗಳಿಗೆ ಪುನರ್ವಸತಿ ಸೌಲಭ್ಯ ನೀಡಲು ಮುಂದಾದಾಗ, ಅರಣ್ಯ ಇಲಾಖೆ ನೀಡಿದ ಹಾಡಿವಾರು ಕುಟುಂಬಗಳ ಪಟ್ಟಿಯಂತೆ ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕುಗಳಿಂದಲೇ 4626 ಕುಟುಂಬಗಳು ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 511 ಕುಟುಂಬಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಕುಟುಂಬಗಳನ್ನು ಪುನರ್ ಸಮೀಕ್ಷೆ ನಡೆಸಿ ಪುನರ್ವಸತಿ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಅರಣ್ಯ, ಕೃಷಿ, ಸಮಾಜಕಲ್ಯಾಣ ಹಾಗೂ ಕಂದಾಯ ಇಲಾಖೆವತಿಯಿಂದ ಜಂಟಿ ಸಮೀಕ್ಷೆ ನಡೆಸಿದ್ದು, ಬಡಗ (ಚಂದನಕೆರೆ) ಹಾಡಿಯಲ್ಲಿನ 32 ಗಿರಿಜನ ಕುಟುಂಬಗಳಪೈಕಿ 23 ಕುಟುಂಬಗಳು ಪುನರ್ ವಸತಿ ಪ್ಯಾಕೇಜ್ ಪಡೆಯಲು ಅರ್ಹವಾಗಿದ್ದು, ಇನ್ನುಳಿದ 9 ಕುಟುಂಬಗಳ ಬಗ್ಗೆ ಮಾಹಿತಿ ದೊರೆತಿಲ್ಲ. ಮರಿಯಮ್ಮ ಕಾಲನಿಯ 50 ಕುಟುಂಬಗಳ ಪೈಕಿ 3 ಕುಟುಂಬಗಳ ಹೆಸರು ಎರಡು ಬಾರಿ ದಾಖಲಾಗಿರುವುದರಿಂದ 47 ಕುಟುಂಬಗಳು ಅರ್ಹ, ಪಲಡಲ ಹಾಡಿಯ 16 ಕುಟುಂಬಗಳ ಪೈಕಿ 15 ಕುಟುಂಬಗಳು ಅರ್ಹವಾಗಿದ್ದು, ಇನ್ನುಳಿದ ಒಂದು ಕುಟುಂಬದ ಬಗ್ಗೆ ಮಾಹಿತಿ ದೊರೆತಿಲ್ಲ.
ಸಿನ್ಕೋನ ಬೇಗೂರು ಹಾಡಿಯ 152 ಕುಟುಂಬಗಳ ಪೈಕಿ 76 ಕುಟುಂಬಗಳು ಅರ್ಹ, ಇನ್ನುಳಿದ 76 ಕುಟುಂಬಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತವಾಗದಿರುವುದರಿಂದ ಕೈಬಿಡಲಾಗಿದೆ. ವಡ್ಡರಮಡು ಹಾಡಿಯ 19 ಕುಟುಂಬಗಳ ಪೈಕಿ 18 ಕುಟುಂಬಗಳು ಅರ್ಹ, ದೇವಮಚ್ಚಿ ಅರಣ್ಯದ 34 ಕುಟುಂಬಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಗೊಳ್ಳದೆ, ಸಂರಕ್ಷಿತ ಅರಣ್ಯ ಪ್ರದೇಶದಲ್ಲೇ ವಾಸಿಸುತ್ತಾ ಅರಣ್ಯ ಹಕ್ಕು ಪತ್ರ ಹೊದಿರುವುದರಿಂದ ಕೈ ಬಿಡಲಾಗಿದೆ.
ಲಕುಂದ ಹಾಡಿಯ 18 ಕುಟುಂಬಗಳೂ ಅರ್ಹ, ನೊಕ್ಯಾ ಯಡತೊರೆ ಹಾಡಿಯ 9 ಕುಟುಂಬಗಳ ಪೈಕಿ 8 ಕುಟುಂಬಗಳು ನಾಗರಹೊಳೆಯಿಂದ ಸ್ಥಳಾಂತರಗೊಂಡವರಲ್ಲದ್ದರಿಂದ 1 ಕುಟುಂಬವನ್ನು ಅರ್ಹ ಎಂದು ಪರಿಗಣಿಸಲಾಗಿದೆ. ಬ್ರಹ್ಮಗಿರಿ ಪುರ ಹಾಡಿಯ 95 ಕುಟುಂಬಗಳ ಪೈಕಿ 91 ಕುಟುಂಬ ಅರ್ಹ, ತಟ್ಟೆಕೆರೆ ಹಾಡಿಯ 63 ಕುಟುಂಬಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಒಳಗೇ ವಾಸಿಸುತ್ತಿದ್ದು ಅರಣ್ಯ ಹಕ್ಕು ಹೊಂದಿರುವುದರಿಂದ ಪುನರ್ ವಸತಿ ಪಟ್ಟಿಯಿಂದ ಕೈ ಬಿಡಲಾಗಿದೆ. ಇನ್ನು ಕುಂಬಾರಕಟ್ಟೆ ಹಾಡಿಯ 23 ಕುಟುಂಬಗಳನ್ನೂ ಅರ್ಹ ಎಂದು ಪರಿಗಣಿಸಲಾಗಿದೆ.
ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕುಗಳ ಸಮೀಕ್ಷೆ ವರದಿಯಲ್ಲಿ ಕೆಲ ಗೊಂದಲಗಳಿರುವುದರಿಂದ ಮತ್ತೂಮ್ಮೆ ಸಭೆ ನಡೆಸಿ, ಹತ್ತು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಮಗ್ರ ಗಿರಿಜನ ಯೋಜನಾಧಿಕಾರಿ ಶಿವಕುಮಾರ್ ಸೇರಿದಂತೆ ಅರಣ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇತರರು ಇದ್ದರು.
ಪ್ರೊ.ಮುಜಾಫರ್ ಅಸ್ಸಾದಿ ವರದಿ ಅನುಷ್ಠಾನ ಸಂಬಂಧ 3418 ಗಿರಿಜನ ಕುಟುಂಬಗಳ ಪೈಕಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿರುವ 3219 ಕುಟುಂಬಗಳು ಪುನರ್ ವಸತಿ ಸೌಲಭ್ಯ ಪಡೆಯಲು ಅರ್ಹ ಎಂದು ಕಂಡುಬಂದಿದ್ದು, ಈ ಕುಟುಂಬಗಳು ಅರಣ್ಯ ಇಲಾಖೆಯಿಂದ ಯಾವುದೇ ಸವಲತ್ತು ಪಡೆಯದಿರುವುದನ್ನು ಖಚಿತಪಡಿಸಿಕೊಂಡು 15 ಲಕ್ಷ ರೂ.ಗಳ ಪುನರ್ ವಸತಿ ಪ್ಯಾಕೇಜ್‌ಗೆ ಶಿಫಾರಸು ಮಾಡಲಾಗುವುದು.
-ಡಿ.ರಂದೀಪ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.