ಅಂತೂ ಇಂತೂ ಬಂತಲ್ಲ ಜೋರು ಮಳೆ!
Team Udayavani, Jul 19, 2017, 11:44 AM IST
ದಾವಣಗೆರೆ: ಈ ಬಾರಿಯ ಮುಂಗಾರು ಹಂಗಾಮಿನಲ್ಲೇ ಮೊಟ್ಟ ಮೊದಲ ಬಾರಿಗೆ ಒಂದಿಷ್ಟು ಉತ್ತಮ ಮಳೆ ಸುರಿದ ಪರಿಣಾಮ ಮಂಗಳವಾರ ದಾವಣಗೆರೆ ನಗರದ ಭಾಗ ಜಲಾವೃತ್ತಗೊಂಡಿದ್ದವು. ಭಾನುವಾರ ಸಂಜೆಯಿಂದ ಪ್ರಾರಂಭವಾಗಿದ್ದ ಮಳೆ ಸೋಮವಾರ ಆಗಾಗ ಜಿಟಿ ಜಿಟಿಯಾಗಿ ಬಂದಿತ್ತು. ನಿನ್ನೆ ಬೆಳ್ಳಂಬೆಳಗ್ಗೆಯಿಂದಲೇ ಆರಂಭಗೊಂಡ ಮಳೆ, ಮಧ್ಯಾಹ್ನ 12-30ರ ವೇಂಎ ಒಂದೂವರೆ ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು. ಕೆಲ ಹೊತ್ತು ವಿರಾಮ ನೀಡಿದಾಗ ಬಿಸಿಲ ದರ್ಶನವಾಯಿತು. ಮತ್ತೆ ಸಂಜೆ ಸುಮಾರು ಹೊತ್ತು ಒಂದೇ ಸಮನೆ ಸುರಿಯಿತು.
ಬಹಳ ದಿನಗಳ ಮಾತ್ರವಲ್ಲ ಬಹು ವರ್ಷದಿಂದ ಗಟ್ಟಿ ಮಳೆಯನ್ನೇ ನೋಡದ ಜನರು ಮಳೆ ಕಂಡು ನೆಮ್ಮದಿ ಉಸಿರುಬಿಟ್ಟರು. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು ಅದರಲ್ಲೇ ದ್ವಿಚಕ್ರ, ಆಟೋ ರಿಕ್ಷಾ, ಬಸ್, ಕಾರು ಚಾಲಕರು ಸರ್ಕಸ್ ಮಾಡುತ್ತಲೇ ಮುಂದೆ ಸಾಗಿದರು. ಮಹಾನಗರ ಪಾಲಿಕೆ ಮುಂದಿರುವ ರೈಲ್ವೆ ಕೆಳ ಸೇತುವೆ, ಎಪಿಎಂಸಿ ಬಳಿಯ ರೈಲ್ವೆ ಮೇಲ್ಸೇತುವೆ ಇತರೆ ಭಾಗಗಳು ಜಲಾವೃತ್ತಗೊಂಡಿದ್ದವು. ರೈಲ್ವೆ ಕೆಳ ಸೇತುವೆ ದಾಟಲು ವಾಹನ ಸವಾರರು ಎಂದಿನಂತೆ ಸಮಸ್ಯೆ ಅನುಭವಿಸಿದರು. ಅಂತೂ ಇಂತೂ ದಾವಣಗೆರೆಯಲ್ಲಿ ಬಹಳ ದಿನಕ್ಕೆ ಗಟ್ಟಿ ಮಳೆಯಾಯಿತು. ಸಂಜೆ ಕೆಲ ಕಾಲ ವಿರಾಮ ನೀಡಿದ ಮಳೆ ಮತ್ತೆ ಜಿನುಗುಲಾರಂಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.