ವಿಡಿಯೋದಲ್ಲಿರುವುದು ನಾನೇ, ಸಂಪೂರ್ಣ ಬೆತ್ತಲಾಗಿಲ್ಲ..! ಸಂಜನಾ
Team Udayavani, Jul 19, 2017, 12:27 PM IST
ಬೆಂಗಳೂರು: ಪಾರ್ಟ್ 2 ಚಿತ್ರದ ಸೆನ್ಸಾರ್ ಕತ್ತರಿ ಹಾಕಿದ್ದ ಬೆತ್ತಲು ದೃಶ್ಯ ಭಾರೀ ಸುದ್ದಿ ಮಾಡಿದ ಬಳಿಕ ನಟಿ ಸಂಜನಾ ಬುಧವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನಡೆಸಿದ್ದಾರೆ.
ಚಿತ್ರದ ನಿರ್ದೇಶಕರನ್ನೇ ಕೇಳಿ ಹೇಳಿಕೆ ನೀಡಬೇಕೆಂದು ಇನ್ನಷ್ಟು ಕುತೂಹಲ ಹೆಚ್ಚಿಸಿದ್ದ ಸಂಜನಾ ಇಂದು ನಿರ್ದೇಶಕರು ಬೇರೆ ಚಿತ್ರದ ಶೂಟಿಂಗ್‌ಗೆ ಹೋಗಿದ್ದಾರೆ ಹೀಗಾಗಿ ಸುದ್ದಿಗೋಷ್ಠಿಗೆ ಬಂದಿಲ್ಲ ಎಂದರು.
ಹೌದು, ಆ ದೃಶ್ಯದಲ್ಲಿ ಇರುವುದು ನಾನೆ.ನಾನು ಅಲ್ಲಿ ಸಂಪೂರ್ಣ ಬೆತ್ತಲಾಗಿಲ್ಲ. ಬೆನ್ನನ್ನು ಮಾತ್ರ ಸಂಪೂರ್ಣ ತೋರಿಸಿದ್ದೆ. ಸಣ್ಣ ಶಾರ್ಟ್ ಹಾಕಿ ಎದುರುಗಡೆಯೂ ಬಟ್ಟೆ ಹಾಕಿಕೊಂಡಿದ್ದೆ ಎಂದು ಲ್ಯಾಪ್‌ಟಾಪ್‌ನಲ್ಲಿದ್ದ ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಫೋಟೋಗಳನ್ನು ತೋರಿಸಿದರು.
ಈ ವಿಡಿಯೋವನ್ನು ಲೀಕ್ ಮಾಡಿದವರು ಯಾರಂತ ನನಗೆ ಗೊತ್ತಿಲ್ಲ.ನಾನು ಅಭಿನಯಿಸಿದ್ದೇ ಬೇರೆ, ತೆರೆಯ ಮೇಲೆ ಬಂದಿರುವುದೇ ಬೇರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕೆ.ಮಂಜು, ನಿರ್ಮಾಪಕಿ ಕವಿತಾ ಲಂಕೇಶ್ ಅವರು ಉಪಸ್ಥಿತರಿದ್ದು ಸಂಜನಾ ಪರ ಮಾತನಾಡಿದರು.
ಈ ಬಗ್ಗೆ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ನೀಡಿ, ನಿರ್ದೇಶಕನ ಬಳಿ ಸ್ಪಷ್ಟನೆ ಕೇಳುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಂಜನಾಗೆ ಆದ ರೀತಿ ಬೇರೆ ಯಾವ ನಟಿಗೂ ಆಗಬಾರದು,ಇದು ಚೀಪ್ ಪಬ್ಲಿಸಿಟಿ ಗಿಮಿಕ್ ಅಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.