ದೊಡ್ಡ ಮೊತ್ತದ ನೋಟು ಕಂಡರೆ ಭಯ!
Team Udayavani, Jul 19, 2017, 3:06 PM IST
ಲಿಂಗಸುಗೂರು: ಪಟ್ಟಣ ಹಾಗೂ ತಾಲೂಕಿನಲ್ಲಿ ಇತ್ತೀಚೆಗೆ 2000 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಹೆಚ್ಚಿದ್ದು, ಜನ ದೊಡ್ಡ ಮೊತ್ತದ ನೋಟು ಕಂಡರೆ ಸಂಶಯದಿಂದ ನೋಡುವಂತಾಗಿದೆ.
ನಕಲಿ ನೋಟುಗಳ ಹಾವಳಿಗೆ ಬ್ರೇಕ್ಹಾಕಲು ಕೇಂದ್ರ ಸರಕಾರ 2016ರ ನ. 8ರಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿತ್ತು. ಆಮೇಲೆ 2000 ಹಾಗೂ 500 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದರೂ ನಕಲಿ ನೋಟುಗಳ ಹಾವಳಿ ಹೆಚ್ಚಿದೆ. ನೋಟ್ ಬ್ಯಾನ್ ಸಂಕಷ್ಟ ಅನುಭವಿಸಿದ್ದ ಜನರೀಗ ನಕಲಿ ನೋಟುಗಳಿಗೆ ಭಯ ಪಡುವಂತಾಗಿದೆ. ತಾಲೂಕಿನಲ್ಲಿ ಇತ್ತೀಚೆಗೆ 2000 ರೂ. ಮುಖಬೆಲೆಯ ನಕಲಿ ನೋಟುಗಳು ಎಗ್ಗಿಲ್ಲದೆ ಚಲಾವಣೆ ಆಗುತ್ತಿವೆ. ದೊಡ್ಡ
ಮೊತ್ತದ ನೋಟುಗಳನ್ನು ನೀಡಿದರೆ ಸ್ವೀಕರಿಸಲು ಜನ ಹಿಂದೆ-ಮುಂದೆ ನೋಡುತ್ತಾರೆ. ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ-
ವಹಿವಾಟು ಜೋರಾಗಿರುವುದರಿಂದ ಎಷ್ಟೇ ಎಚ್ಚರಿಕೆ ವಹಿಸಿದರೂ ನಕಲಿ ನೋಟುಗಳ ಹಾವಳಿ ತಡೆಗಟ್ಟುವುದು ಸಾಧ್ಯವಾಗಿಲ್ಲ.
ನೋಟಿನ ಕಂತೆಗಳ ಮಧ್ಯೆ ಐದಾರು ನಕಲಿ ನೋಟುಗಳು ಸೇರಿರುತ್ತವೆ. ಇಂತಹ ನೋಟುಗಳು ಬಂದಾಗ ಸುಮ್ಮನೆ ಇಲ್ಲದ
ಕಿರಿಕಿರಿ ಏಕೆಂದು ವರ್ತಕರು ಅವುಗಳನ್ನು ಹರಿದು ಹಾಕುತ್ತಿದ್ದಾರೆ.
ಕಲರ್ ಝರಾಕ್ಸ್: ಪಟ್ಟಣದ ವರ್ತಕರೊಬ್ಬರು 1 ಲಕ್ಷ ರೂ.ಗಳನ್ನು ಬ್ಯಾಂಕ್ಗೆ ತುಂಬಲು ಹೋದಾಗ 2000 ಮುಖಬೆಲೆಯ ಎರಡು ಕಲರ್ ಝೆರಾಕ್ಸ್ ಮಾಡಿದ ನೋಟುಗಳು ಪತ್ತೆಯಾಗಿವೆ. ಕೆಲವರು ಇದನ್ನೇ ದಂಧೆಯಾಗಿ ಮಾಡಿಕೊಂಡು, ಚಲಾವಣೆಗೆ ವ್ಯವಸ್ಥಿತ
ಸಂಚು ರೂಪಿಸಿದ್ದಾರೆ. ಇದರಿಂದ ಅಮಾಯಕರು ಸಂಕಷ್ಟ ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ನೋಟುಗಳು ಬಂದರೆ ಜನತೆ ಪೊಲೀಸರಿಗೆ ಮಾಹಿತಿ ನೀಡಬೇಕು. ನಕಲಿ ನೋಟುಗಳ ಹಾವಳಿ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.