ಜಗತ್ತಿನ ಮಿಂಚುಗಳ ರಾಜಧಾನಿ
Team Udayavani, Jul 20, 2017, 5:20 AM IST
ಮೆಶಿನ್‌ಗನ್ ಎಂದರೇನೆಂದು ನಿಮಗೆ ಗೊತ್ತೇ ಇರುತ್ತೆ. ಒಂದು ಬಾರಿ ಟ್ರಿಗರ್ ಒತ್ತಿದರೆ ಒಂದರ ಹಿಂದೊಂದರಂತೆ ಹತ್ತಿಪ್ಪತ್ತು ಬುಲೆಟ್ಟುಗಳನ್ನು ಸಿಡಿಸುವ ಅವುಗಳ ರಣರಂಗದಲ್ಲಿ ರಕ್ತದ ಕೋಡಿಯನ್ನೇ ಹರಿಸಬಲ್ಲವು. ಇಲ್ಲಿ ಬುಲೆಟ್ಟುಗಳು ಬಂದೂಕಿನಿಂದ ಸಿಡಿಯುವ ವೇಗದಲ್ಲಿ ಮಿಂಚುಗಳ ಆಕಾಶದಿಂದ ಸಿಡಿಯತೊಡಗಿದರೆ ಹೇಗಿರುತ್ತೆ? ಅದೇ ವೆನಿಝುವೆಲಾದ ಮರಕಾಯಿಬೋ ಸರೋವರದ ವಿಶೇಷತೆ.
ಕಟಟಂಬೊ ಮಿಂಚು
ಮರಕಾಯಿಬೋ ಸರೋವರ ಧರೆಗಿಳಿಸುವ ಸರಣಿ ಮಿಂಚುಗಳಿಗೆ ಹೆಸರುವಾಸಿ. ಇಲ್ಲಿ ವರ್ಷದ 260 ದಿನಗಳ ಕಾಲ, ದಿನದ 10 ಗಂಟೆ ಅವಧಿಯಲ್ಲಿ 280 ಬಾರಿ ಮಿಂಚುಗಳು ಹೊಡೆಯುತ್ತವೆ. ವಿಶೇಷವೆಂದರೆ ಈ ಅಪರೂಪದ ವಿದ್ಯಮಾನ ಜನಪ್ರದೇಶದಿಂದ ದೂರ ಅಂದರೆ ಸರೋವರದ ಮಧ್ಯದಲ್ಲಿ ಘಟಿಸುತ್ತದೆ. ಅಲ್ಲಿನ ಜನರ ಪ್ರಕಾರ ಈ ಸರಣಿ ಮಿಂಚುಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತವೆ. ಕಡಿಮೆಯಾಗಲೂಬಹುದು, ಹೆಚ್ಚಾಗಲೂಬಹುದು.
ಇತಿಹಾಸದಲ್ಲಿ ಉಲ್ಲೇಖ
ಹಳೆಯ ಕಾಲದಲ್ಲಿಯೇ ಅಲ್ಲಿನ ಜನರು ಈ ವಿದ್ಯಮಾನವನ್ನು ದಾಖಲಿಸಿದ್ದರು. ಆಗಿನ ಕಾಲದಲ್ಲಿ ಆ ಮಿಂಚಿಗೆ “ಮರಕಾಯಿಬೋನ ದೀಪ’ ಎಂದು ಕರೆಯುತ್ತಿದ್ದರು. ರಾತ್ರಿ ಸರೇವರದಲ್ಲಿ ದಿಕ್ಕು ತಪ್ಪಿದ ನಾವಿಕರಿಗೆ ಅದು ಬೆಳಕು ತೋರುತ್ತಿದ್ದಿದ್ದು ಅದಕ್ಕೆ ಕಾರಣ. ಅದ್ಕೆ ಸಣ್ಣ ಧ್ವಜವನ್ನೂ ತಯಾರು ಮಾಡಿದ್ದರು.
ಸರಣಿ ಮಿಂಚಿನ ರಹಸ್ಯ
ಈ ವಿದ್ಯಮಾನದ ಹಿಂದೆ ಮಂತ್ರ ತಂತ್ರಗಳಂಥ ನಿಗೂಢ ಸಕ್ತಿಗಳ ಕೈವಾಡ ಏನೂ ಇಲ್ಲ. ಸರೋವರ ನೆಲೆನಿಂತಿರುವ ಭೌಗೋಳಿಕ ಪ್ರದೇಶವೇ ಇದಕ್ಕೆ ಕಾರಣ. ಉತ್ತರದಿಂದ ಬೀಸುವ ಕೆರೆಬಿಯನ್ ಸಮುದ್ರದ ಬಿಸಿ ಗಾಳಿಯು ದಕ್ಷಿಣದ ಆ್ಯಂಡೀಸ್ ಪರ್ವತ ಶ್ರೇಣಿಯ ಕಡೆಯಿಂದ ಬೀಸುವ ತಂಪುಗಾಳಿಯ ಜತೆ ಘರ್ಷಿಸಿದಾಗ ಮಿಂಚುಗಳು ಉತ್ಪತ್ತಿಯಾಗುತ್ತವೆ.
ಈ ವಿದ್ಯಮಾನದಿಂದಾಗಿ ಮೀನುಗಾರರು ಸರೋವರಕ್ಕೆ ಇಳಿಯುವುದೇ ದುಸ್ತರವಾಗಿದೆ. ವರ್ಷಕ್ಕೆ ಕಡಿಮೆಯೆಂದರೂ ಮೂರರಿಂದ ನಾಲ್ಕು ಮಂದಿ ಈ ಮಿಂಚುಗಳಿಗೆ ಬಲಿಯಾಗುತ್ತಿದ್ದಾರೆ. ಈ ತೀವ್ರತೆಯಿಂದಾಗಿ ಮೀನುಗಾರರು ಈ ವಿದ್ಯಮಾನ ಜರುಗುವ ಸಂದರ್ಭದಲ್ಲಿ ಸರೋವರದಿಂದ ದೂರವೇ ಉಳಿಇಡುತ್ತಾರೆ.
ಚಿನ್ನಿ ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.