ಹಡಿಲು ಜಮೀನಿನಲ್ಲಿ ಭತ್ತ ಕೃಷಿ
Team Udayavani, Jul 20, 2017, 5:05 AM IST
ಉಡುಪಿ: ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆ, ಕೆಸರ್ ಕಂಡೊಡು ಆಟಿದ ಗೊಬ್ಬು ಮೊದಲಾದ ಹೆಸರುಗಳಲ್ಲಿ ನೂರಾರು ಜನರನ್ನು ಒಂದು ದಿನದ ಮಟ್ಟಿಗೆ ಕೃಷಿ ಗದ್ದೆಗಳಿಗೆ ಇಳಿಸಲಾಗುತ್ತಿದೆಯಾದರೂ, ಕೃಷಿ ಕೆಲಸ ಯಾರಿಗೂ ಬೇಡವಾಗಿದೆ. ಕೃಷಿ ಜಮೀನು ಇದ್ದರೂ ವಿವಿಧ ಕಾರಣಗಳಿಂದಾಗಿ ಕೃಷಿಕಾರ್ಯ ಮಾಡುವ ಹುಮ್ಮಸ್ಸು ಜನರಿಗಿಲ್ಲ. ಕೃಷಿಯಿಂದ ವಿಮುಖರಾಗುತ್ತಿರುವ ಹಿನ್ನೆಲೆಯಲ್ಲಿ ಇರುವ ಕೃಷಿ ಜಮೀನುಗಳು ಹಡಿಲು (ಪಾಳು) ಬೀಳುತ್ತಿವೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಉದ್ಯಾವರ-ಕುತ್ಪಾಡಿ ವಲಯ ಸಮಿತಿ ವತಿಯಿಂದ ಉದ್ಯಾವರ ಕಲೈಬೈಲು ಲಾರೆನ್ಸ್ ಆಳ್ವರ ಹಡಿಲು ಬಿದ್ದಿರುವ ಕೃಷಿ ಜಮೀನಿನಲ್ಲಿ ನೇಜಿ ನಾಟಿ ಕಾರ್ಯ ಆರಂಭಿಸಲಾಯಿತು.
ವೈಜ್ಞಾನಿಕ ಕ್ರಮಗಳು ಮತ್ತು ಅನುಭವಿ ಕೃಷಿಕರನ್ನು ಅನುಸರಿಸಿ ಮಾಡುವ ಯಾವುದೇ ಕೃಷಿಯಲ್ಲಿ ನಷ್ಟದ ಮಾತೇ ಇಲ್ಲ ಎಂದು ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು ಹೇಳಿದರು.
ಉದ್ಯಾವರ ವಲಯ ಸಮಿತಿಯ ಕಾರ್ಯದರ್ಶಿ ಸುಧರ್ಮ ಕುಂದರ್, ಜಾನ್ ಫೆರ್ನಾಂಡಿಸ್, ಹಿರಿಯ ಕೃಷಿಕ ವೀರಪ್ಪ ಪೂಜಾರಿ, ಸುರೇಶ್, ದಿನೇಶ್, ಜಯಲಕ್ಷ್ಮೀ ಪಿತ್ರೋಡಿ, ಲಾರೆನ್ಸ್ ಆಳ್ವ ಮತ್ತು ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.