ಜಿಎಸ್‌ಟಿಯಿಂದ ತೆರಿಗೆಗಳೆಲ್ಲ ಸರಳಗೊಳ್ಳುತ್ತವೆ: ಡಾ| ಸುಬ್ರಹ್ಮಣ್ಯಂ
Team Udayavani, Jul 20, 2017, 5:10 AM IST
ಸುರತ್ಕಲ್: ಮಂಗಳೂರು ರಿಫೈನರಿ ಪೆಟ್ರೋಲಿಯಂ ಲಿಮಿಟೆಡ್ ವತಿಯಿಂದ ಸರಕು ಮತ್ತು ಸೇವಾ ತೆರಿಗೆಯ ಕುರಿತು ವಿಚಾರ ಸಂಕಿರಣವು ಬುಧವಾರ ಎಂಆರ್‌ಪಿಎಲ್ ಸಭಾಂಗಣದಲ್ಲಿ ಜರಗಿತು.
ಕೇಂದ್ರೀಯ ಅಬಕಾರಿ ಇಲಾಖೆಯ ಆಯುಕ್ತ ಡಾ| ಎಂ. ಸುಬ್ರಹ್ಮಣ್ಯ ಮಾತನಾಡಿ, ಜಿಎಸ್‌ಟಿಗೆ ಸುಮಾರು 17 ವರ್ಷಗಳ ಹಿಂದೆಯೇ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಈಗ ಜಾರಿಗೆ ಬಂದಿದೆ. ಇದರಿಂದಾಗಿ ನಮ್ಮ ತೆರಿಗೆಗಳೆಲ್ಲ ಸರಳಗೊಳ್ಳುತ್ತದೆ. ಪರಿಣಾಮ ವಿದೇಶಿ ಸಂಸ್ಥೆಗಳಿಗೂ ನಮ್ಮ ಜತೆ ವ್ಯಾಪಾರ ಮಾಡಲು ಸುಲಭವಾಗುತ್ತದೆ ಎಂದರು.
ವಾಣಿಜ್ಯ ಇಲಾಖಾ ತೆರಿಗೆ ವಿಭಾಗದ ಜಂಟಿ ಆಯುಕ್ತೆ ಎಚ್. ಜಿ. ಪವಿತ್ರಾ ಮಾತನಾಡಿ, ಜಿಎಸ್‌ಟಿಯಿಂದ ಹಳೆ ತೆರಿಗೆಗಳೆಲ್ಲ ರದ್ದಾಗಿ ಕೇವಲ ಒಂದೇ ತೆರಿಗೆ ಉಳಿಯುತ್ತದೆ ಎಂದರು.
ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್. ಕುಮಾರ್ ಮಾತನಾಡಿದರು.ಉಪ ಆಯುಕ್ತ ಶಂಕರ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಅಧಿ ಕಾರಿಗಳು ಜಿಎಸ್‌ಟಿ ಕುರಿತು ಮಾಹಿತಿ ನೀಡಿದರು.
ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ
ಜಿಎಸ್‌ಟಿ ಅನುಷ್ಠಾನದಿಂದ ಅಲ್ಲಲ್ಲಿ ಚೆಕ್‌ಪೋಸ್ಟ್ ರದ್ದಾಗುತ್ತವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಕೂಡ ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರಬೇಕು. ಜಿಎಸ್‌ಟಿಯಿಂದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ. ಒಂದೇ ತೆರಿಗೆ ಹಾಗೂ ಸೂಕ್ತ ದಾಖಲೆ ಪತ್ರ ಇರಿಸುವುದರಿಂದ ಅಪಾರ ಪ್ರಮಾಣದ ತೆರಿಗೆ ಸೋರಿಕೆ
ತಡೆಗಟ್ಟಲು ಸಾಧ್ಯ.
– ಎಚ್. ಕುಮಾರ್,
ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.