4ನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡ್ಬೇಡಿ!
Team Udayavani, Jul 20, 2017, 7:50 AM IST
ಹೈದರಾಬಾದ್: ಆ ಪುಟಾಣಿಗಳು ಹೋಗುವುದು ಕಿಂಡರ್‌ಗಾರ್ಡನ್‌ಗೆ. ಬ್ಯಾಗ್‌ನಲ್ಲಿ 5-6ನೇ ತರಗತಿ ವಿದ್ಯಾರ್ಥಿ ಬಳಕೆ ಮಾಡುವಷ್ಟು ಪುಸ್ತಕಗಳಿರುತ್ತವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಎಷ್ಟೆಷ್ಟೋ ತಜ್ಞರ ಸಮಿತಿಗಳು ಕೊಟ್ಟ ವರದಿ ಕಪಾಟು ಸೇರಿವೆ. ಅದರ ವಿರುದ್ಧ ಯಾವುದೇ ರಾಜ್ಯ ಸರಕಾರ ಕ್ರಮ ಕೈಗೊಂಡ ದ್ದಿಲ್ಲ. ಆದರೆ, ತೆಲಂಗಾಣ ಸರಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಶಾಲಾ ಮಕ್ಕಳ ಬ್ಯಾಗ್ ತೂಕ 1.5 ಕೆಜಿಯಿಂದ 5 ಕೆಜಿ ವರೆಗೆ ಇರಬೇಕು. ಜತೆಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿ ಗಳಿಗೆ ಮನೆ ಕೆಲಸ (ಹೋಮ್ ವರ್ಕ್) ಕೊಡಲೇ ಬಾರದು ಎಂದು ಆದೇಶವನ್ನೇ ಹೊರಡಿಸಿದೆ.
ಈ ಬಗ್ಗೆ ತೆಲಂಗಾಣದಲ್ಲಿರುವ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಂಗಳವಾರ ಸರ್ಕಾರಿ ಆದೇಶ ರವಾನೆಯಾಗಿದೆ. ಆಯಾ ತರಗತಿಗೆ ಹೊಂದಿಕೊಂಡಂತೆ ಸ್ಕೂಲ್ ಬ್ಯಾಗ್‌ನ ತೂಕ ಇರಬೇಕು ಎಂದು ಕಟ್ಟಾಜ್ಞೆ ಹೊರಡಿಸಲಾಗಿದೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಒಂದನೇ ತರಗತಿಯಿಂದ 4-6ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್‌ನ ತೂಕ 6-12 ಕೆಜಿ ಇರುತ್ತದೆ. ಪ್ರೌಢಶಾಲೆಯ ಹಂತಕ್ಕೆ ಬಂದಾಗ ಅದರ ತೂಕ 17 ಕೆಜಿ ವರೆಗೆ ಇರುತ್ತದೆ. ಇದರಿಂದಾಗಿ ಮಕ್ಕಳ ಕೈಕಾಲುಗಳ ಮೇಲೆ ನೋವು ಉಂಟಾಗುತ್ತದೆ ಎಂದು ಹಲವು ಬಾರಿ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಉದ್ವೇಗ ಕೂಡ ಉಂಟಾ ಗಲಿದೆ ಎಂದು ಅಧ್ಯಯನದಿಂದ ಕಂಡುಬಂದಿದೆ.
ಗೈಡ್‌ಗೆ ನಿಷೇಧ: ಹೇಳಿ ಕೇಳಿ ಎಲ್ಲ ಶಾಲೆಗಳಲ್ಲಿ ಗೈಡ್‌ಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಹೊಸ ಆದೇಶ ಪ್ರಕಾರ ನಿಷೇಧವಿದೆ. ಅದರ ಬದಲಾಗಿ ಮಕ್ಕಳನ್ನು ಚಿಂತನೆಗೆ ಹಚ್ಚುವಂಥ ಕೆಲಸ ಹೆಚ್ಚು ನೀಡಬೇಕೆಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
MUST WATCH
ಹೊಸ ಸೇರ್ಪಡೆ
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.