ಸಾಸ್ತಾನ ಮೀನು ಮಾರುಕಟ್ಟೆ ಸಮೀಪ ಅಂಗಡಿ ಕೋಣೆ ತೆರವು
Team Udayavani, Jul 21, 2017, 7:25 AM IST
ಕೋಟ: ಅಂಗಡಿ ಕೋಣೆ ತೆರವು ವಿಚಾರವಾಗಿ ಅಂಗಡಿ ಮಾಲಕರು ಹಾಗೂ ಗ್ರಾ.ಪಂ. ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಐರೋಡಿ ಗ್ರಾ.ಪಂ. ವ್ಯಾಪ್ತಿಯ ಸಾಸ್ತಾನ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಕೋಣೆಗಳನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಬಿಗು ಪೊಲೀಸ್ ಬಂದೋ
ಬಸ್ತ್ನಲ್ಲಿ ತೆರವುಗೊಳಿಸಲಾಯಿತು.
ಅಂಗಡಿ ಮಾಲಿಕರು, ಗ್ರಾ.ಪಂ. ನಡುವೆ ಹಗ್ಗಜಗ್ಗಾಟ
ಹಲವಾರು ವರ್ಷದಿಂದ ಶಿಥಿಲಾವಸ್ಥೆ ಯಲ್ಲಿದ ಸಾಸ್ತಾನ ಮೀನುಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ ಸರಕಾರದಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಹೀಗಾಗಿ ಮೀನು ಮಾರುಕಟ್ಟೆಗೆ ತಾಗಿಕೊಂಡಿರುವ ವಾಣಿಜ್ಯ ಮಳಿಗೆಗಳನ್ನು ಕೂಡ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಐರೋಡಿ ಗ್ರಾ.ಪಂ. ನಿರ್ಣಯಿಸಿತ್ತು. ಆದರೆ ಅಂಗಡಿ ತೆರವುಗೊಳಿಸುವುದನ್ನು ವಿರೋ ಧಿಸಿ ಮಾಲಿಕರು ನ್ಯಾಯಾಲಯದ ಮೊರೆಹೋಗಿದ್ದರು. ಹೀಗಾಗಿ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿತ್ತು.
ಇ.ಒ. ಕೋರ್ಟ್‌ನಲ್ಲಿ ತೆರವಿಗೆ ಆದೇಶ
ಕುಂದಾಪುರ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದು ತಾ.ಪಂ. ಇ.ಒ. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಳಿಸುಕೊಳ್ಳುವಂತೆ ಸೂಚಿಸಿದ್ದು, ಇದೀಗ ತಾ.ಪಂ. ನ್ಯಾಯಾಲಯದಲ್ಲಿ ಅಂಗಡಿ ಕೋಣೆಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ. ಅನುದಾನವನ್ನು ತುರ್ತಾಗಿ ಬಳಿಸಿಕೊಳ್ಳಬೇಕಾದ ಅಗತ್ಯವಿದ್ದು, ಅಭಿವೃದ್ಧಿಗಾಗಿ ಈ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರೋಡಿಗ್ರಸ್ ತಿಳಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಅಂಗಡಿ ತೆರವು
ಗುರುವಾರ ಬೆಳಗ್ಗೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಪೊಲೀಸ್ ಬಂದೋಬಸ್ತ್ನಲ್ಲಿ ಅಂಗಡಿಕೋಣೆಗಳನ್ನು ತೆರವುಗೊಳಿಸಲು ಮುಂದಾದಾಗ ಅಂಗಡಿ ಮಾಲಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ಕುರಿತು ಉತ್ಛನ್ಯಾಯಾಲಯದ ಮೊರೆ ಹೋಗಿದ್ದು 15ದಿನಗಳ ಕಾಲವಕಾಶ ನೀಡುವಂತೆ ಕೋರಿದರು. ಆದರೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿರುವ ಕಾರಣ ಹೆಚ್ಚಿನ ಅವಕಾಶ ನೀಡಲು ಅಸಾಧ್ಯ ಎಂದು ಗ್ರಾ.ಪಂ.ನವರು ತಿಳಿಸಿದರು.
ಅನಂತರ ಅಂಗಡಿ ಮಾಲಕರ ಪರ ವಕೀಲರು ಸ್ಥಳಕ್ಕಾಗಮಿಸಿ ಮನವೊಳಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಒತ್ತಡಕ್ಕೂ ಮಣಿಯದ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಅವರು ತಾ.ಪಂ. ಆದೇಶದಂತೆ ಅಂಗಡಿ ತೆರವಿಗೆ ಸೂಚಿಸಿದರು. ತೆರವು ಸಂದರ್ಭ ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೂ ಸ್ಥಳದಲ್ಲಿದ್ದ ಕೆಲವು ಪಂಚಾಯತ್ ಸದಸ್ಯರು ಹರಿಹಾಯ್ದ ಘಟನೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.