ಮಾನವೀಯತೆ ಮೆರೆದ ಪೊಲೀಸ್ ಸಿಬಂದಿ
Team Udayavani, Jul 21, 2017, 5:35 AM IST
ಮಹಾನಗರ: ಪೊಲೀಸ್ ಎಂದಾಕ್ಷಣ ಅವರ ಬಗ್ಗೆ ನೇತ್ಯಾತ್ಮಕವಾಗಿಯೇ ಯೋಚಿಸುವುದು ಹೆಚ್ಚು. ಆದರೆ ಅವರಲ್ಲೂ ಮಾನವೀಯ ಮೌಲ್ಯಗಳಿವೆ ಎಂಬುದಕ್ಕೆ ಬರ್ಕೆಯ ಪೊಲೀಸ್ ಕಾನ್‌ಸ್ಟೆಬಲ್ ಕಿಶೋರ್ ಪೂಜಾರಿ ಉದಾಹರಣೆಯಾಗಿದ್ದಾರೆ.
ಜು. 19ರಂದು ಠಾಣಾ ವ್ಯಾಪ್ತಿಯ ಬೊಕ್ಕಪಟ್ಣದಲ್ಲಿ ತಾತ್ಕಾಲಿಕ ತಪಾಸಣ ಕೇಂದ್ರದಲ್ಲಿ ಕಿಶೋರ್ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಬೊಕ್ಕಪಟ್ಣ ಶಾಲಾ ವಿದ್ಯಾರ್ಥಿಯೋರ್ವ ಕುಂಟುತ್ತಾ ನಡೆದು ತನ್ನ ಮನೆಯತ್ತ ಸಾಗಲು ಬಸ್ ಗಾಗಿ ಕಾಯುತ್ತಿದ್ದ. ಈತ ಮೂಲತಃ ಬಾಗಲಕೋಟೆಯವನಾಗಿದ್ದು, ಕಂಕ ನಾಡಿಯಲ್ಲಿ ನೆಲೆಸಿದ್ದವನು.
ವಿದ್ಯಾರ್ಥಿ ಎಲ್ಲೋ ಬಿದ್ದ ಪರಿಣಾಮ ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿರುವುದು ಕಿಶೋರ್ ಅವರ ಗಮನಕ್ಕೆ ಬಂದಿತು. ಕೂಡಲೇ ಅವನಲ್ಲಿಗೆ ಹೋದ ಕಿಶೋರ್, ಪಕ್ಕದ ಮನೆಯಿಂದ ನೀರು ತಂದು ಗಾಯದಲ್ಲಿ ಸೇರಿದ್ದ ಮರಳು, ಮಣ್ಣನ್ನು ತೆಗೆದು, ಗಾಯವನ್ನು ಸ್ವತ್ಛಗೊಳಿಸಿದರು. ಮೆಡಿಕಲ್ ಸ್ಟೋರ್‌ನಿಂದ ಪ್ಲಾಸ್ಟರ್ ತಂದು ಗಾಯಕ್ಕೆ ಹಚ್ಚಿ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿದರು.
ಸುರಕ್ಷತೆ ಒದಗಿಸುವ ಇಲಾಖೆಯ ಕರ್ತವ್ಯದೊಂದಿಗೆ, ಮಾನವೀಯತೆಯ ಪ್ರತಿನಿಧಿ ಯಾಗಿಯೂ ಮೆರೆದ ಕಿಶೋರ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಉನ್ನತ ಪೊಲೀಸ್ ಅಧಿಕಾರಿಗಳು ಕಿಶೋರ್ ಅವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.