ಆತ್ಮಹತ್ಯೆ, ವಂಚನೆ ಎರಡೂ ಆಯಾಮಗಳಲ್ಲೂ ತನಿಖೆ
Team Udayavani, Jul 21, 2017, 8:35 AM IST
ಕಾಪು: ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ತನಿಖಾ ಹಂತದಲ್ಲಿ ಆತ್ಮಹತ್ಯೆಗೆ ನಿಖರ ಕಾರಣಗಳ ಬಗ್ಗೆ ಹೇಳಲಾಗದು ಎಂದು ಉಡುಪಿ ಎಸ್ಪಿ ಕೆ. ಟಿ. ಬಾಲಕೃಷ್ಣ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪಡುಬೆಳ್ಳೆ ಘಟನೆಯ ಬಗ್ಗೆ ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿದೆಯಾದರೂ, ಅದರ ಜೊತೆಗೆ ನಕಲಿ ಚಿನ್ನಾಭರಣ ನೀಡಿ ಬ್ಯಾಂಕ್ಗೆ ವಂಚಿಸಿದ ಘಟನೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಮೃತ ಶಂಕರ್ ಆಚಾರ್ಯ ಅವರು ಇನ್ನಂಜೆ ಸಿ. ಎ. ಬ್ಯಾಂಕ್ನಲ್ಲಿ ಸುಮಾರು 2.75 ಕೆ. ಜಿ. ತೂಕದಷ್ಟು ನಕಲಿ ಚಿನ್ನ ಅಡವಿರಿಸಿ 64 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಮಾಹಿತಿಯಿದ್ದು, ಕರ್ತವ್ಯ ಲೋಪವಿಲ್ಲದೇ ತನಿಖೆ ನಡೆಯುತ್ತಿದೆ. ಅದುವರೆಗೂ ನಾವು ಕಾಯಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.