ಹಿಂದೂ ರಾಷ್ಟ್ರೀಯವಾದಕ್ಕೆ ಚೀನ ಜೊತೆ ಯುದ್ಧ ಬೇಕು!
Team Udayavani, Jul 21, 2017, 5:45 AM IST
ಹೊಸದಿಲ್ಲಿ: ಹಿಂದೂ ರಾಷ್ಟ್ರೀಯವಾದಕ್ಕೆ ಚೀನದೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಡೋಕ್ಲಾಂ ಗಡಿಯಲ್ಲೀಗ ಸಮಸ್ಯೆ ಸೃಷ್ಟಿಯಾಗಿದೆ!
ಹೀಗೆಂದು ಹೇಳಿದ್ದು, ಚೀನದ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್. ಡೋಕ್ಲಾಂ ಗಡಿ ವಿವಾದ ಬಗ್ಗೆ ಭಾರತವನ್ನು ಹೀಗಳೆವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿರುವ ಪತ್ರಿಕೆ, ಇದೀಗ ಹಿಂದೂ ರಾಷ್ಟ್ರೀಯವಾದವನ್ನು ಗುರಿ ಮಾಡಿಕೊಂಡಿದೆ. ಜೊತೆಗೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದೆ.
“ಭಾರತವನ್ನು ಯುದ್ಧದ ಅಪಾಯದತ್ತ ದೂಡುತ್ತಿರುವ ಹಿಂದೂ ರಾಷ್ಟ್ರೀಯವಾದ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಗಡಿಯಲ್ಲಿ ಚೀನವನ್ನು ಭಾರತ ಗುರಿಮಾಡಲು ಕಾರಣ, ಅಲ್ಲಿನ ಧಾರ್ಮಿಕ ರಾಷ್ಟ್ರೀಯವಾದ ಎಂದಿದೆ. ಜೊತೆಗೆ ಪ್ರಧಾನಿಯಾಗಿ ಮೋದಿ ಅವರ ಆಯ್ಕೆ ಹಿಂದೂ ರಾಷ್ಟ್ರೀಯವಾದಕ್ಕೆ ತುಪ್ಪ ಸುರಿಯಿತು ಎಂದು ಹೇಳಿದೆ. ಪ್ರಧಾನಿ ಮೋದಿ ಆಡಳಿತವನ್ನೂ ಟೀಕಿಸಲಾ ಗಿದ್ದು, “ಮೋದಿ ಸರಕಾರ ಧಾರ್ಮಿಕ ರಾಷ್ಟ್ರೀಯವಾದ ವಿಪರೀತಕ್ಕೆ ಹೋಗಿದ್ದರೂ ಅದರ ವಿರುದ್ಧ ಏನೊಂದೂ ಕ್ರಮ ಕೈಗೊ ಳ್ಳುತ್ತಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೇಲಿನ ಹಿಂಸಾ ಪ್ರಕರಣಗಳು ಹೆಚ್ಚಿದ್ದರೂ, ಅವುಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ’ ಎಂದು ಹೇಳಿದೆ.
ಅಲ್ಲದೇ “ನವದೆಹಲಿ ಪಾಕಿಸ್ತಾನ ಮತ್ತು ಚೀನಗಳ ವಿರುದ್ಧ ಕಠಿನ ವಿದೇಶಿ ನೀತಿಗಳನ್ನು ಜಾರಿಗೊಳಿಸಿದ್ದು, ಇದರ ವಿರುದ್ಧ ಭಾರತದ ರಾಜಕಾರಣಿಗಳು ಮತ್ತು ವಿದೇಶಾಂಗ ಪರಿಣತರು, ಮಗುಮ್ಮಾಗಿ ದ್ದಾರೆ. ಅವರು ಭಾರತ-ಚೀನ ನೀತಿ ಯನ್ನು ಧಾರ್ಮಿಕ ರಾಷ್ಟ್ರೀಯವಾದ ಅಪಹರಿಸುವುದನ್ನು ತಡೆಯುತ್ತಿಲ್ಲ’ ಎಂದೂ ಆರೋಪಿಸಿದೆ.
ಭಿನ್ನ ಅಭಿಪ್ರಾಯಗಳನ್ನು ವಿವಾದ ಮಾಡದಿರಿ: ಗಡಿ ವಿವಾದವನ್ನು ಶಾಂತಿ ಯಿಂದ ಪರಿಹರಿಸುವ ಬಗ್ಗೆ ಭಾರತ ಮಾತನಾಡಿದ್ದು, ಭಿನ್ನ ಅಭಿಪ್ರಾಯಗಳನ್ನು ವಿವಾದ ಮಾಡುವುದು ಬೇಡ ಎಂದು ಚೀನಕ್ಕೆ ಕಿವಿಮಾತು ಹೇಳಿದೆ. ಸದ್ಯ ಉದ್ಭವವಾದ ಪರಿಸ್ಥಿತಿ ಕುರಿತಂತೆ ಹೊಸದಿಲ್ಲಿ ಭೂತಾನ್ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ. ಸಮಸ್ಯೆಯನ್ನು ಶಾಂತಿ ಯಿಂದ ಬಗೆಹರಿಸುವುದಕ್ಕೆ ನಾವು ಸಿದ್ಧರಿ ದ್ದೇವೆ. ಇದರೊಂದಿಗೆ ಜು.27ರಂದು ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬ್ರಿಕ್ಸ್ ಸಮ್ಮೇಳನಕ್ಕಾಗಿ ಚೀನಕ್ಕೆ ತೆರಳವುದನ್ನು ಬಾಗ್ಲೆ ಖಚಿತಪಡಿಸಿದ್ದಾರೆ.
“ವಾಪಸ್ ಹೋಗದಿದ್ರೆ ಭಾರತೀಯ ಯೋಧರ ಸೆರೆ ಅಥವಾ ಸಾವು ಖಚಿತ!’
ಡೋಕ್ಲಾಂನಿಂದ ಭಾರತೀಯ ಸೈನಿಕರು ಹಿಂದೆ ಸರಿಯಬೇಕು. ಇಲ್ಲದಿದ್ದರೆ ಅವರನ್ನು ಬಂಧಿಸಬಹುದು ಅಥವಾ ಹತ್ಯೆಗೈಯ್ಯಬಹುದು ಎಂದು ಚೀನದ ಮಾಜಿ ವಿದೇಶಾಂಗ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬಯಿಯ ಚೀನ ಕಾನ್ಸುಲೇಟ್‌ನಲ್ಲಿ ಸೇವೆಯಲ್ಲಿದ್ದ ಅಧಿಕಾರಿ ಲಿಯು ಯೋಫಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತೀಯ ಸೈನಿಕರು ಚೀನ ಗಡಿಯನ್ನು ಉಲ್ಲಂ ಸಿದ್ದಾರೆ. ಆದ್ದರಿಂದ ಅವರೇ ಹಿಂದೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಇಲ್ಲದಿದ್ದರೆ, ಸೆರೆ ಅಥವಾ ಸಾವು ಖಚಿತ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.