ಸುಳ್ಯ: ಗಾಳಿ-ಮಳೆ; ವ್ಯಾಪಕ ಹಾನಿ
Team Udayavani, Jul 21, 2017, 8:55 AM IST
ಸುಳ್ಯ : ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ಭಾರೀ ಗಾಳಿ ಮಳೆಯಾಗಿದ್ದು, ಮರ ಹಾಗೂ ಕೊಂಬೆಗಳು ಬಿದ್ದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಅಸ್ತವ್ಯಸ್ತಗೊಂಡಿದೆ. ಕೃಷಿಗೂ ಹಾನಿಯಾಗಿವೆ.
ಸುಳ್ಯ ಹಾಗೂ ಪಂಜ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 12 ಮನೆಗಳ ಸಹಿತ 1 ಮಸೀದಿ ಮತ್ತು ಪಂಚಾಯತ್ ವಸತಿಗೃಹ ಕಟ್ಟಡಗಳು ಜಖಂಗೊಂಡಿವೆ.
ಪುತ್ತೂರು-ಸುಳ್ಯ 33 ಕೆ.ವಿ. ವಿದ್ಯುತ್ ಮಾರ್ಗದ ಬೊಳುಬೈಲು ಮತ್ತು ಜಾಲೂÕರು ಸಮೀಪ ಮರ ಉರುಳಿ ಮುಖ್ಯವಿದ್ಯುತ್ ವಿತರಣಾ ಮಾರ್ಗಕ್ಕೆ ಹಾನಿಯಾಗಿದೆ. ತಾಲೂಕಿನಾದ್ಯಂತ 80 ವಿದ್ಯುತ್ ಕಂಬಗಳ ಸಹಿತ ತಂತಿ ಮತ್ತು ಉಪಕರಣಗಳು ಹಾನಿಗೊಂಡು ಮೆಸ್ಕಾಂಗೆ 15 ಲಕ್ಷ ರೂಪಾಯಿನಷ್ಟು ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಇಳಿಕೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬುಧವಾರ ಮುಳುಗಡೆಯಾಗಿದ್ದ ಕುಮಾರಧಾರಾ ಹಳೆಯ ಸೇತುವೆ, ಪುತ್ತೂರು- ಸುಬ್ರಹ್ಮಣ್ಯ ರಸ್ತೆಯ ಸೇತುವೆ, ಸ್ನಾನಘಟ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆ ಪ್ರವಾಹ ಇಳಿಕೆಯಾಗಿದೆ. ಪಯಸ್ವಿನಿ ನದಿ ನೀರಿನ ಮಟ್ಟವೂ ಇಳಿಕೆಯಾಗಿದೆ. ಗುರುವಾರ ಮಧ್ಯಾಹ್ನ ಬಳಿಕ ಮಳೆ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.