ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಅವಕಾಶ: ಜನರ ರಾಷ್ಟ್ರಪತಿಯಾಗಿ
Team Udayavani, Jul 21, 2017, 1:48 PM IST
ರಾಮನಾಥ್ ಕೋವಿಂದ್ ಅವರು ದೇಶದ ಸಮಸ್ತ ಪ್ರಜೆಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿ ಎನ್ನುವುದು ಜನರ ಅಪೇಕ್ಷೆ.
ರಾಷ್ಟ್ರಪತಿ ಎಂದರೆ ಒಂದು ಔಪಚಾರಿಕ-ಆಲಂಕಾರಿಕ ಹುದ್ದೆ ಎಂಬ ಭಾವನೆಯಿದೆ. ಬಹುತೇಕ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದವರನ್ನು ಸರಕಾರ ರಾಷ್ಟ್ರಪತಿ ಮಾಡುತ್ತದೆ. ಸರಕಾರ ಕೈಗೊಂಡ ನಿರ್ಧಾರಗಳಿಗೆ ಅಂಗೀಕಾರದ ಮುದ್ರೆಯೊತ್ತುವುದಷ್ಟೇ ರಾಷ್ಟ್ರಪತಿ ಮಾಡುವ ಕೆಲಸ. ಇನ್ನು ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಔಪಚಾರಿಕತೆಯ ವಿಧಿವಿಧಾನಗಳನ್ನು ಬಿಟ್ಟರೆ ರಾಷ್ಟ್ರಪತಿಗೆ ಹೆಚ್ಚೇನೂ ಕೆಲಸವಿರುವುದಿಲ್ಲ. ಹೀಗಾಗಿ ರಾಷ್ಟ್ರಪತಿಗಳಾದವರು ಜನರಿಂದ ಬಲು ದೂರ ಇರುತ್ತಾರೆ. ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಹೀಗಾಗಿಯೇ ರಾಷ್ಟ್ರಪತಿಯನ್ನು ರಬ್ಬರ್ ಸ್ಟಾಂಪ್ ಎಂದು ಕರೆಯುವ ರೂಢಿ ಇದೆ. ಆರಂಭದ ಒಂದಿಬ್ಬರು ರಾಷ್ಟ್ರಪತಿಗಳು ಮತ್ತು ಅಬ್ದುಲ್ ಕಲಾಂ ಹಾಗೂ ಪ್ರಸ್ತುತ ನಿರ್ಗಮನದ ಹೊಸ್ತಿಲಲ್ಲಿರುವ ಪ್ರಣವ್ ಮುಖರ್ಜಿಯವರನ್ನು ಬಿಟ್ಟರೆ ಹೆಚ್ಚಿನೆಲ್ಲ ರಾಷ್ಟ್ರಪತಿಗಳು ರಬ್ಬರ್ ಸ್ಟಾಂಪ್‌ಗ್ಳಾಗಿಯೇ ಇದ್ದವರು. 14ನೇ ರಾಷ್ಟ್ರಪತಿಯಾಗಿ ರಾಮ್‌ನಾಥ್ ಕೋವಿಂದ್ ಪದಗ್ರಹಣ ಮಾಡಲು ಕ್ಷಣಗಣನೆ ಆರಂಭವಾಗಿರುವಂತೆಯೇ ರಾಷ್ಟ್ರಪತಿ ಕುರಿತಾಗಿರುವ ಈ ಅನಿಸಿಕೆಗಳು ನೆನಪಿಗೆ ಬಂದಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಬಿಹಾರದ ರಾಜ್ಯಪಾಲರಾಗಿದ್ದ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗಲೇ ಅವರ ಗೆಲುವು ನಿಶ್ಚಯವಾಗಿತ್ತು. ಈ ಸಲದ ರಾಷ್ಟ್ರಪತಿ ಚುನಾವಣೆ ತುಸು ಗಮನ ಸೆಳೆದಿದ್ದರೆ ಕಣದಲ್ಲಿದ್ದ ಇಬ್ಬರು ಸ್ಪರ್ಧಿಗಳ ಜಾತಿಯ ಕಾರಣಕ್ಕೆ ಮಾತ್ರ. ಕೋವಿಂದ್ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ದಲಿತರು ಎಂಬುದೇ ಈ ಸಲ ಹೆಚ್ಚು ಚರ್ಚೆಗೊಳಗಾದ ವಿಷಯ. ಬಿಜೆಪಿ ದಲಿತರ ಒಲವು ಗಳಿಸಿಕೊಂಡು ತನ್ನ ಇಮೇಜ್ ಬದಲಾಯಿಸುವ ಸಲುವಾಗಿ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಖ್ಯಾತರಾಗಿರದ ಕೋವಿಂದ್‌ರನ್ನು ಆರಿಸಿರುವುದು ಈಗಾಗಲೇ ಬಹಳ ಚರ್ಚೆಗೊಳಗಾಗಿರುವ ವಿಚಾರ. ಗೆಲುವು ಸಾಧ್ಯವಿಲ್ಲದಿದ್ದರೂ ಸಾಂಕೇತಿಕ ಸ್ಪರ್ಧೆ ನೀಡುವ ಸಲುವಾಗಿಯಾದರೂ ಯುಪಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲೇ ಬೇಕಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿಯ ದಲಿತ ಅಭ್ಯರ್ಥಿಗೆ ಎದುರಾಗಿ ದಲಿತ ಅಭ್ಯರ್ಥಿಯಾಗಿ ಸಿಕ್ಕಿದವರು ಮೀರಾ ಕುಮಾರ್. ಹೀಗೆ ಪರಮೋಚ್ಚ ಸ್ಥಾನದ ಚುನಾವಣೆಯೊಂದು ಸಿದ್ಧಾಂತ ಮತ್ತು ತತ್ವಗಳಿಗೆ ಬದಲಾಗಿ ಜಾತಿಯ ಕಾರಣಕ್ಕೆ ಗಮನ ಸೆಳೆದದ್ದು ಪ್ರಜಾಪ್ರಭುತ್ವದ ವಿಪರ್ಯಾಸವೂ ಹೌದು. ಹಾಗೆಂದು ಕೋವಿಂದ್‌ಗೆ ಜಾತಿಯೇ ಅರ್ಹತೆ ಎಂದಲ್ಲ. ಅವರೊಬ್ಬ ಪರಿಪಕ್ವ ರಾಜಕಾರಣಿ. ರಾಜಕಾರಣಕ್ಕೆ ಪ್ರವೇಶಿಸುವ ಮೊದಲು ಸುಪ್ರೀಂ ಕೋರ್ಟಿನ ವಕೀಲರಾಗಿದ್ದವರು. ರಾಜ್ಯಸಭಾ ಸದಸ್ಯರಾಗಿ, ವಿವಿಧ ಸಮಿತಿಗಳ ಅಂಗವಾಗಿ, ವಕ್ತಾರರಾಗಿ ಅಪಾರ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿದ್ದಾರೆ. ಹೀಗಾಗಿ ಅನುಭವ ಮತ್ತು ಅಧಿಕಾರವನ್ನು ಬಳಸಿಕೊಂಡು ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಅವಕಾಶ ಅವರಿಗಿದೆ.
ಅರಿವಾಗುವುದು ಸಾಂವಿಧಾನಿಕ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ. ತ್ರಿಶಂಕು ಸಂಸತ್ತು ನಿರ್ಮಾಣವಾದರೆ ಅಥವಾ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಶಿಫಾರಸುಗಳು ಬಂದ ಸಂದರ್ಭದಲ್ಲಿ ರಾಷ್ಟ್ರಪತಿಗೆ ಅಗ್ನಿಪರೀಕ್ಷೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅವರ ಕೈಗೊಳ್ಳುವ ನಿರ್ಧಾರ ಅವರ ಸಾಮರ್ಥ್ಯ, ಬದ್ಧತೆ ಮತ್ತು ವಿವೇಚನಾ ಶಕ್ತಿಯನ್ನು ತೋರಿಸುತ್ತದೆ. ಈ ವಿಚಾರದಲ್ಲಿ ನಿರ್ಗಮನ ರಾಷ್ಟ್ರಪತಿ ಮುಖರ್ಜಿಯವರ ಮೇಲ್ಪಂಕ್ತಿಯನ್ನು ಕೋವಿಂದ್ ಅನುಸರಿಸಬಹುದು. ಕೋವಿಂದ್, ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಬಡವರ ಜತೆಗೆ ದೇಶದ ಸಮಸ್ತ ಪ್ರಜೆಗಳ ಪ್ರಥಮ ಪ್ರಜೆಯಾಗಿ ಅವರು ಕಾರ್ಯನಿರ್ವಹಿಸಲಿ ಎನ್ನುವುದು ಜನರ ಅಪೇಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.