ಜುಕುಂಟಂಗರಡ್ಕ-ಮಾವಿನಕಟ್ಟೆ ರಸ್ತೆ ಕಳಪೆ ಕಾಮಗಾರಿ: ತನಿಖೆಗೆ ಒತ್ತಾಯ
Team Udayavani, Jul 22, 2017, 6:55 AM IST
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ಮೂರು ಲಕ್ಷದ ನಿಧಿಯಿಂದ ಕುಂಟಂಗರಡ್ಕ ಮಾವಿನಕಟ್ಟೆ ರಸ್ತೆಯನ್ನು ಕಳೆದ ಮೂರು ತಿಂಗಳ ಹಿಂದೆ ಡಾಮರೀಕರಣಗೊಳಿಸಲಾಗಿತ್ತು. ಆದರೆ ಇದು ಪ್ರಥಮ ಮಳೆಯಲ್ಲೇ ಕಟ್ಟು ಹೋಗಿ ಇದೀಗ ನಡೆದಾಡಲೂ ಆಗುತ್ತಿಲ್ಲ. ಬಸ್ ಸಂಚಾರವಿಲ್ಲದ ರಸ್ತೆಯಲ್ಲಿ ರಿಕ್ಷಾಗಳಂತೂ ಬಾಡಿಗೆಗೆ ಬರಲು ಸುತಾರಾಂ ಒಪುತ್ತಿಲ್ಲ.ಗುತ್ತಿಗೆ ದಾರರು ಕಳಪೆ ಕಾಮಗಾರಿ ನಡೆಸಿ ಬಿಲ್ ಪಡೆದು ಹಾಯಾಗಿದ್ದಾರೆ.
ಆದರೆ ರಸ್ತೆಯ ಶೋಚನೀಯಾ ವಸ್ಥೆಯನ್ನು ರಸ್ತೆ ಫಲಾನುಭವಿಗಳು ಅನುಭವಿಸಬೇಕಾಗಿದೆ. ಆಡಳಿತ ಮತ್ತು ವಾರ್ಡ್ ಸದಸ್ಯರು ಸ್ವಜನ ಪಕ್ಷಪಾತಿಗಳಾಗಿ ಸ್ವಪಕೀÒಯರ ತಾಳಕ್ಕೆ ತಕ್ಕ ಕೂಣಿಯುವುದಲ್ಲದೆ ಸಾರ್ವಜನಿಕರ ಕೇÒಮವನ್ನು ಬಯಸುತ್ತಿಲ್ಲ. ಗ್ರಾಮ ಪಂಚಾಯತ್‌ನಲ್ಲಿ ಇಂತಹ ಹಲಾವಾರು ಕಳಪೆ ಕಾಮಗಾರಿಗಳು ನಡೆಯುತ್ತಿದ್ದರೂ ಅಧಿಕೃತರಿಗೆ ಇದು ಕ್ಯಾರೇ ಅಲ್ಲ. ಉನ್ನತ ಅಧಿಕಾರಿಗಳಿಗೆ ವಿಜಿಲೆನ್ಸ್ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಭ್ರಷ್ಟಾಚಾರಿಗಳ ಪರವಾಗಿಯೇ ಇವರು ವಾದಿಸುವುದರಿಂದ ದೂರುದಾತರಿಗೆ ನ್ಯಾಯ ದೊರಕುತ್ತಿಲ್ಲವೆಂಬ ಆರೋಪವಿದೆ.
ಕುಂಟಂಗರಡ್ಕ ಮಾವಿನಕಟ್ಟೆ ರಸ್ತೆಯ ಕಳಪೆ ಕಾಮಗಾರಿಯನ್ನು ತನಿಖೆ ನಡೆಸಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂಬುದಾಗಿ ಡಿ.ವೈ.ಎಫ್.ಐ. ಕುಂಬಳೆ ಘಟಕ ದೂರು ಸಲ್ಲಿಸಿದೆ.ಇಲ್ಲದಿದ್ದಲ್ಲಿ ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.