ಕಾಡಲ್ಲಿ ಕೊರಗುತ್ತಿವೆ ಕೊರಗ ಕುಟುಂಬಗಳು
Team Udayavani, Jul 22, 2017, 7:40 AM IST
ಬೆಳ್ತಂಗಡಿ: ಡಾಮರು ಹಾದಿ ಸವೆಸಿ ಮಣ್ಣ ರಸ್ತೆಯಲ್ಲಿ ಸಾಗಿದರೆ ದಪ್ಪನೆಯ ರಬ್ಬರು ಮರಗಳ ಕಾನನ. ಅಲ್ಲಲ್ಲಿ ಕಾಣಸಿಗುವ ಅನನಾಸಿನ ಪ್ಲಾಂಟೇಶನ್‌ಗಳು. ಬಾನೆತ್ತರಕ್ಕೆ ಬೆಳೆದ ಅಕೇಶಿಯಾ ಸಾಲುಗಳ ಮಧ್ಯೆ ಕಾಣ ಸಿಗುವ ನೀಲಿ ಬಣ್ಣದ ಟರ್ಪಾಲಿನ ಟೆಂಟು. ಮತ್ತೂಂದಕ್ಕೆ ತಗಡು ಹಾಸಿದ ಮಾಡು. ಮಗದೊಂದು ಮನೆಗೆ ತೆಂಗಿನ ಗರಿ. ಧೋ ಎಂದು ಸುರಿವ ಮಳೆಗೆ ಸುಮಾರು 90 ಚದರ ಅಡಿಯ ಮನೆಯಲ್ಲಿ ಚಕ್ರ ಮುರಿದ ಸಣ್ಣ ಮಕ್ಕಳಾಟಿಕೆಯ ಸೈಕಲನ್ನು ತಳ್ಳುವ ಎರಡು ವರ್ಷದ ಮಗು. ಏಳಲಾಗದೇ, ನಡೆಯಲಾಗದೇ ಒದ್ದಾಡುತ್ತಿದ್ದ 65 ಕಳೆದ ಕೃಶ ದೇಹದ ಕ್ಷೀಣ ಧ್ವನಿಯ ವಯೋವೃದ್ಧೆ. ನೀರು ಮೊದಲೋ, ಬೆಳಕು ಮೊದಲೋ ಎಂದು ಪೈಪೋಟಿ ಯಲ್ಲಿ ಒಳಬಿಡುತ್ತಿದ್ದ ಮಾಡಿಗೆ ಅಲ್ಲಲ್ಲಿ ಸೀರೆಯ ಚೂರು ತುರುಕಿ ಮಾಡಿದ ತೇಪೆ.
ಇಂತಿಪ್ಪ ಪರಿಸರದಲ್ಲಿ ಈಗಲೂ ವಾಸಿಸುತ್ತಿರುವುದು ಕೊರಗ, ಮಲೆಕುಡಿಯ, ಮೊಗೇರ ಜನಾಂಗದವರ ಮನೆಗಳು.
ಉಜಿರೆ ಧರ್ಮಸ್ಥಳ ರಸ್ತೆ ಅಥವಾ ಉಜಿರೆ ಚಾರ್ಮಾಡಿ ರಸ್ತೆಯಿಂದ ಸಮದಂಡಿಯಾಗಿ 3 ಕಿ.ಮೀ. ದೂರದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಸರಹದ್ದಿನ ಪಜಿರಡ್ಕದ ಸರಕಾರಿ ಕಾಡಿನಲ್ಲಿ ಸೂರಿನ ಆಸರೆಯ ನಿರೀಕ್ಷೆಯಲ್ಲಿ ಕೊರಗುತ್ತಿವೆ ಈ ಕುಟುಂಬಗಳು. ಇವರಿಗೆ ಸರಕಾರದ ಮನೆ, ನಿವೇಶನ, ಶೌಚಾಲಯ, ಪಡಿತರ ಚೀಟಿ, ಚುನಾವಣಾ ಗುರುತುಪತ್ರ ಸಿಕ್ಕಿಲ್ಲ. ಆಧಾರ್ ಕಾರ್ಡು ಬಿಟ್ಟರೆ ಬೇರೇನೂ ಇಲ್ಲ.
ಯಾರೆಲ್ಲ ?
ಸುಶೀಲಾ, ದೇವಕಿ, ಥಾಮಸ್, ಲಕ್ಷ್ಮೀ ಮಲೆಕುಡಿಯ, ಕಮಲ ಮೊಗೇರ ಅವರ ಮನೆ ಗಳಿವೆ. ಸುಶೀಲಾ ಮನೆಯಲ್ಲಿ ವೃದ್ಧ ತಾಯಿ ಲಕ್ಷ್ಮೀ ಹಾಗೂ ಮಕ್ಕಳಿದ್ದಾರೆ. ಲಕ್ಷ್ಮೀಗೆ ವಿಟ್ಲದ ಮಿತ್ತನಡ್ಕ ಕರಿಯಪ್ಪರ ಜತೆಗೆ ವಿವಾಹವಾಗಿತ್ತು. ಕೂಲಿ ನಾಲಿ ಮಾಡಿ ಸಂಸಾರ ಸಾಗಿಸುತ್ತಿದ್ದ ಅವರು ಸರಕಾರದ ಮಾಸಾಶನಕ್ಕೆ ಪೇಟೆಗೆ ಹೋದವರು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಮೃತಪಟ್ಟಿದ್ದರು. ಪತಿಗಿದ್ದ ಕುಟುಂಬದ ಸಣ್ಣ ಆಸ್ತಿ ಸಹೋ ದರ ರೊಳಗಿನ ಕಲಹದಿಂದಾಗಿ ಲಕ್ಷ್ಮೀ ಪಾಲಿ ಗೇನೂ ಗಿಟ್ಟಿಲ್ಲ. ಅಲ್ಲಿಂದ ಹೊರಬಿದ್ದು ತಮ್ಮ ಮೂವರು ಹೆಣ್ಣುಮಕ್ಕಳ ಪೈಕಿ ಒಬ್ಬರಾದ ಅನಿತಾ ಅವರ ಕಾಶಿಬೆಟ್ಟಿನ ಮನೆಯಲ್ಲಿದ್ದರು. ಅನಾರೋಗ್ಯದಿಂದಾಗಿ ನಡೆದಾಡಲೂ ಕಷ್ಟ ಪಡು ವಂತಾಗಿ ಮಗಳು ಸುಶೀಲಾರ ಮನೆಯಲ್ಲಿದ್ದಾರೆ. ಸುಶೀಲಾರ ಸಹೋದರಿ ಅವಿವಾಹಿತೆ ಹರ್ಷಿತಾ ಕೂಡ ತಾಯಿಯ ಉಪಚಾರಕ್ಕಾಗಿ ಇದೇ ಗೂಡಿನಂತಹ ಪುಟ್ಟ ಮನೆಯಲ್ಲಿದ್ದಾರೆ. ಸುಶೀಲಾ ಅವರ ಪುತ್ರ ಕಾರ್ತಿಕ್ ಧರ್ಮಸ್ಥಳದ ಆಶ್ರಮ ಶಾಲೆಯಲ್ಲಿ, ಮಗಳು ಶ್ವೇತಾ ಕನ್ಯಾಡಿ ಸರಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ನಿತ್ಯ ಈ ಪುಟ್ಟ ಮನೆಗೆ ಬಂದು ಸೇರುತ್ತಾಳೆ. ಮತ್ತೂಬ್ಬ ಕೌಶಿಕ್ (2 ವರ್ಷ). ಇಷ್ಟು ಜನರನ್ನು ನೋಡಿ ಕೊಳ್ಳ ಬೇಕಾದ್ದು; ಅನಿ ವಾರ್ಯ ವಾಗಿ 5ನೇ ಕ್ಲಾಸಿಗೆ ಶಾಲೆಗೆ ಬೆನ್ನು ಹಾಕಿದ ಸುಶೀಲಾ ಅವರ ಅನಾನಸು ಪ್ಲಾಂಟೇಶನ್‌ನ ಕೂಲಿ ಕೆಲಸದ ಸಂಬಳ. ಕುಟುಂಬಕ್ಕೆ ಪಡಿತರವೂ ಇಲ್ಲ. ಮಾಸಾ ಶನವೂ ಇಲ್ಲ. ಇತರ ಆದಾಯವೂ ಇಲ್ಲ.
ಉಜಿರೆಯಿಂದ ಬಂದರು
ಸುಶೀಲಾ ಮೊದಲು ಉಜಿರೆ ಬಾಡಿಗೆ ಮನೆಯಲ್ಲಿದ್ದರು. ಪತಿ ರವಿ ಜೆಸಿಬಿ ಯಲ್ಲಿ ಕೆಲಸ ಮಾಡುತ್ತಿದ್ದು ಈಗ ಸಂಪರ್ಕ ದಲ್ಲಿಲ್ಲ. ಹಾಗಾಗಿ ಈ ಕುಟುಂಬ 3 ವರ್ಷಗಳಿಂದ ಕಾಡಿನಲ್ಲಿದೆ.
ದೇವಕಿ ಕೊರಗ (65) ಅವರದ್ದು ಮರದಿಂದ ಬಿದ್ದು ಮೃತರಾದ ಪತಿ ತನಿಯಪ್ಪರನ್ನು ಕಳೆದು ಕೊಂಡ ಒಂಟಿ ಜೀವನ. ಇಂದಿಗೂ ಜೀವನ ನಿರ್ವಹಣೆಗೆ ಕೂಲಿ ಕೆಲಸ ಅನಿವಾರ್ಯ. ಲಕ್ಷ್ಮೀ ಮಲೆಕುಡಿಯ ಮನೆಯಲ್ಲಿ ಇಬ್ಬರು; ಕಮಲ ಮೊಗೇರ ಮನೆಯಲ್ಲಿ ಐವರು; ಥಾಮಸ್ ಕೊರಗ ಮನೆಯಲ್ಲಿ ಮೂವರು ವಾಸ್ತವ್ಯದಲ್ಲಿದ್ದಾರೆ.
ಏನೂ ಸಿಕ್ಕಿಲ್ಲ
ಇವರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿಯಿದೆ. ತಹಶೀಲ್ದಾರ್ ಅಧ್ಯಕ್ಷತೆಯ ಸಭೆಯಲ್ಲಿ ಈ ಬಗ್ಗೆ ಅನೇಕ ಬಾರಿ ವಿವರಿಸಲಾಗಿದೆ. ಹಾಗಿದ್ದರೂ ಸ್ಥಳೀಯಾಡಳಿತ ವಾಗಲೀ, ತಾಲೂಕು ಆಡಳಿತವಾಗಲೀ, ಜಿಲ್ಲಾ ಇಲಾಖೆಗಳಾಗಲೀ ಸ್ಪಂದಿಸಿಲ್ಲ.
ಎಲ್ಲಿ ಕಲ್ಮಂಜ ಗ್ರಾಮದ ಪಜಿರಡ್ಕ ದಟ್ಟ ಕಾಡಲ್ಲಿ
ಯಾರೆಲ್ಲ 3 ಕೊರಗ, 1 ಮಲೆಕುಡಿಯ,1 ಮೊಗೇರ ಕುಟುಂಬ
ಹೇಗೆ 3 ವರ್ಷಗಳಿಂದ ಕಚ್ಚಾ ಟೆಂಟ್‌ನಲ್ಲಿ ವಾಸ
ಏನಿಲ್ಲ ನಿವೇಶನ, ಮನೆ, ಶೌಚಾಲಯ, ನೀರು
ತತ್‌ಕ್ಷಣ ಈ ಕುಟುಂಬಗಳಿಗೆ ಮನೆ ಹಾಗೂ ಇತರ ಸೌಲಭ್ಯ ಕೊಡಬೇಕು. ಐಟಿಡಿಪಿ ಇಲಾಖೆಯವರು ಸ್ಪಂದಿಸಬೇಕು. ಸರಕಾರದ ಯೋಜನೆಗಳು ತಳಮಟ್ಟದಲ್ಲಿ ಪಾಲನೆಯಾಗುತ್ತಿಲ್ಲ. ಸ್ವತ್ಛ ಭಾರತ್ ಹೆಸರಿನಲ್ಲಿ ಕರ ಸಂಗ್ರಹಿಸಿದರೂ ಅರ್ಹರಿಗೆ ದೊರೆಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ವಹಿಸಬೇಕು.
– ಶೇಖರ್ ಎಲ್., ದಲಿತ ಹಕ್ಕುಗಳ ಹೋರಾಟಗಾರರು
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.