ಗಂವ್ಹಾರದಿಂದ ಅಬ್ಬೆ ತುಮಕೂರು ಶ್ರೀ ಪಾದಯಾತ್ರೆ

Team Udayavani, Jul 22, 2017, 11:27 AM IST

22-GUB-1.jpg

ಜೇವರ್ಗಿ: ಲೋಕಕಲ್ಯಾಣ ಮತ್ತು ಮಾನವ ಸಮೃದ್ಧಿಗಾಗಿ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ಧಸಂಸ್ಥಾನ
ಮಠದ ಡಾ| ಗಂಗಾಧರ ಮಹಾಸ್ವಾಮೀಜಿ ವಿಶ್ವಾರಾಧ್ಯರ ಜನ್ಮ ಸ್ಥಳ, ತಾಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಶುಕ್ರವಾರ ಸಾವಿರಾರು ಭಕ್ತರ ಜೊತೆ ಪಾದಯಾತ್ರೆ ಪ್ರಾರಂಭಿಸಿದರು.

ಶುಕ್ರವಾರ ಬೆಳಗ್ಗೆ ಗಂವ್ಹಾರದ ಬನ್ನಿ ಬಸವೇಶ್ವರ ಕತೃì ಗದ್ದುಗೆಗೆ ಗೋಟಾರ ರುದ್ರಾ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ,
ಪೂಜಾ ಕೈಂಕರ್ಯ ಮುಗಿಸಿದ ನಂತರ ಮಧ್ಯಾಹ್ನ 1:00 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಿ ಗ್ರಾಮದ ಸೀಮಾಂತರ
ಪ್ರದೇಶದಲ್ಲಿ ಭಕ್ತರಾದ ಚನ್ನಪ್ಪಗೌಡ ಬಿರಾದಾರ, ಬಸವಂತರಾಯ ಗೋಳಾ ಅವರ ಪಾದಗಟ್ಟೆಯಲ್ಲಿ ವಿಶ್ರಾಂತಿ ಪಡೆದು, ನಂತರ
ಅಣಬಿ ಗ್ರಾಮಕ್ಕೆ ತೆರಳಿತು. 

ಪಾದಯಾತ್ರೆ ಸಂದರ್ಭದಲ್ಲಿ ಪುರವಂತರ ಸೇವೆ, ಕೋಲಾಟ, ಭಜನಾ ತಂಡಗಳು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕಲಾತಂಡಗಳು ಎಲ್ಲರ ಗಮನ ಸೆಳೆಯಿತು. ಕಳೆದ 24 ವರ್ಷಗಳಿಂದ ಡಾ| ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಪಾದಯಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ 15ರಿಂದ 20 ಸಾವಿರ ಭಕ್ತರು ಆಗಮಿಸಿದ್ದರು. ಮೂರು ದಿನಗಳ ವರೆಗೆ ನಡೆಯುವ ಯಾತ್ರೆಯ ದಾರಿಯುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರೆಯಲ್ಲಿ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ
ನರಿಬೋಳ, ಮುಖಂಡರಾದ ಮಲ್ಲಿನಾಥಗೌಡ ಯಲಗೋಡ, ರಮೇಶಬಾಬು ವಕೀಲ, ಸಿದ್ದಣ್ಣಗೌಡ ಪಾಟೀಲ ಮಳಗ, ರಾಮಶೆಟ್ಟೆಪ್ಪ
ಸಾಹು ಹುಗ್ಗಿ, ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ತಾಪಂ ಸದಸ್ಯ ಗುರುಬಸಪ್ಪ ದೊಡ್ಮನಿ ಹಾಗೂ ಸಾವಿರಾರು ಭಕ್ತರು 
ಪಾಲ್ಗೊಂಡಿದ್ದರು.

ಪಾದಯಾತ್ರೆ ಹೊರಡುವ ಮಾರ್ಗ
ಪಾದಯಾತ್ರೆ ಸಂಜೆ ಅಣಬಿ ಗ್ರಾಮದಿಂದ ಸಿರವಾಳ ಸೀಮೆಯ ಸೋಮೇಶ್ವರ ಸನ್ನಿಧಾನಕ್ಕೆ ತಲುಪಿತು. ಅಲ್ಲಿಂದ ಭೀಮಾನದಿ ದಾಟಿ ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ. ಸನ್ನತಿಯಿಂದ ಜು.22 ರಂದು ಬೆಳಗ್ಗೆ ಪಾದಯಾತ್ರೆ ಹೊರಟು ಕಗನಳ್ಳಿ, ಉಳುವಂಡಗೇರಾ, ಬನ್ನಟ್ಟಿ ಗ್ರಾಮವಾಗಿ ಹಾಗೂ ಹೆಡಗಿಮುದ್ರಿಯಲ್ಲಿ ತಂಗುವುದು. ಜು.23ರಂದು ಅಮಾವಾಸ್ಯೆ
ದಿನದಂದು ಬೆಳಗ್ಗೆ ಶಾಂತ ಶಿವಯೋಗಿ ಮಠದಿಂದ ಸಂಜೆ ವಿಶ್ವರಾಧ್ಯರ ಮುಕ್ತಿತಾಣವಾದ ಅಬ್ಬೆತೂಮಕೂರಿಗೆ ಪಾದಯಾತ್ರೆ ತಲುಪಲಿದೆ.

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

Sedam-yathre

Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್‌ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.