ತಾಲೂಕಿನ ಹಾಡಿ ರಸ್ತೆಗಳ ಅಭಿವೃದಿಗೆ ಕ್ರಮ: ಮಂಜುನಾಥ್
Team Udayavani, Jul 22, 2017, 11:41 AM IST
ಹುಣಸೂರು: ತಾಲೂಕಿನ ಶಂಕರಪುರ ಹಾಡಿಗೆ ನಮ್ಮಗ್ರಾಮ-ನಮ್ಮರಸ್ತೆ ಯೋಜನೆಯಡಿ 71 ಲಕ್ಷ ರೂ ವೆಚ್ಚದ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ನಡೆದ ಸಭೆಯಲ್ಲಿ ಮಾತನಾಡಿ, ಹನಗೋಡು ಹೋಬಳಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.
ಕಪ್ಪು ಮಣ್ಣಿನಿಂದ ಕೂಡಿರುವುದರಿಂದ ಈ ಸಂಪರ್ಕ ರಸ್ತೆಯು ತುಂಬಾ ಗುಂಡಿ ಬಿದ್ದಿದ್ದು, ಸಂಚರಿಸಲಾದ ಸ್ಥಿತಿಯ ಬಗ್ಗೆ ಹಾಡಿ ಹಾಗೂ ಇತರೆ ರೈತರು ರಸ್ತೆ ದುರಸ್ತಿ ಬಗ್ಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಈ ರಸ್ತೆ ಸೇರಿದಂತೆ ಬಹುತೇಕ ಹಾಡಿಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸುಗುಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಭೂ ಒಡೆತನ ಕಲ್ಪಿಸಿ: ಶಂಕರಪುರ ಹಾಡಿಯಲ್ಲಿ ಹಕ್ಕಿ-ಪಿಕ್ಕಿ ಜನಾಂಗ ಹಾಗೂ ಡೊಂಗ್ರಿಗೆರಾಸಿಯಾ ಜನಾಂಗದ 60 ಕುಟುಂಬಗಳು ಕಳೆದ 20 ವರ್ಷಗಳ ಹಿಂದೆ ಕಲ್ಲೂರಪ್ಪನ ಬೆಟ್ಟದ ಸಮೀಪವಿದ್ದ ಅರಣ್ಯ ಪ್ರದೇಶವನ್ನು ಹಸನು ಮಾಡಿ ವ್ಯವಸಾಯದಲ್ಲಿ ತೊಡಗಿದ್ದೇವೆ.
ಇವರೆಗೂ ಯಾವ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ, ನಮ್ಮ ಭೂಮಿಗೆ ಹಕ್ಕುಪತ್ರ ನೀಡಿ ಎಂದು ಗ್ರಾಪಂ ಸದಸ್ಯರಾದ ಮಮ್ಮು ಹಾಗೂ ಇಂದು ಶಾಸಕರಿಗೆ ಮನವಿ ಸಲ್ಲಿಸಿದರು. ಅಕ್ರಮ-ಸಕ್ರಮದಡಿ ಅರ್ಜಿ ನಮೂನೆ 50-51ರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದೆಂದು ಶಾಸಕರು ಭರವಸೆ ನೀಡಿದರು.
ಕಿರಂಗೂರು ಗ್ರಾಪಂ ಅಧ್ಯಕ್ಷ ಚೆಲುವರಾಜ್, ಸದಸ್ಯರಾದ ಹೊಂಬೆಗೌಡ, ಲೊಕೇಶ್, ತಾಪಂ ಅಧ್ಯಕ್ಷೆ ಪದ್ಮಮ್ಮ, ಮಾಜಿ ಸದಸ್ಯ ಸೋಮಶೇಖರ್, ಜಿಪಂ ಮಾಜಿಸದಸ್ಯ ಸಿ.ಟಿ.ರಾಜಣ್ಣ, ತಾ. ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು, ಬಸವರಾಜೇಗೌಡ, ಜಿಲ್ಲಾ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಮುಖಂಡರಾದ ರವಿಗೌಡ, ಶಿವಕುಮಾರ್, ಸಾವರ್ ಸೇರಿದಂತೆ ಹಾಡಿ ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.