ಮಲ್ಲಕಂಬದಿಂದ ಹಿಂದಿ-ಚೀನಿ ಭಾಯಿ ಭಾಯಿ..!


Team Udayavani, Jul 22, 2017, 12:02 PM IST

hub5.jpg

ಧಾರವಾಡ: ಸಂಗೀತ, ಸಾಹಿತ್ಯ, ಸಿನಿಮಾ, ಕಲೆ ಮತ್ತು ಸಾಹಸ ಕ್ರೀಡೆಗಳಿಗೆ ಯಾವುದೇ ದೇಶ, ಭಾಷೆ, ಗಡಿಯ ಹಂಗಿಲ್ಲ. ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ಕಳೆದ ಎರಡು ತಿಂಗಳಿಂದ ಯುದ್ಧಕ್ಕೆ ಸಿದ್ಧವಾಗುತ್ತಿವೆ. ಆದರೆ ಇದೇ ಅವಧಿಯಲ್ಲಿ ಧಾರವಾಡ ಜಿಲ್ಲೆಯ 8 ಜನ ಕಾಲೇಜು ವಿದ್ಯಾರ್ಥಿಗಳು ಚೀನಾದಲ್ಲಿ ಮಲ್ಲಕಂಬ ಪ್ರದರ್ಶನ ನೀಡುತ್ತಿದ್ದು, ಈ ಪ್ರದರ್ಶನ ನೋಡಿದ ಚೀನೀಯರು ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಿದ್ದಾರೆ. 

ಹೌದು. ಧಾರವಾಡ ಜಿಲ್ಲೆಯ ಕಮಡೊಳ್ಳಿಯ ಜಯ ಕರ್ನಾಟಕ ಮಲ್ಲಕಂಭ ಅಕಾಡೆಮಿಯ ಎಂಟು ಜನ ವಿದ್ಯಾರ್ಥಿಗಳು ಚೀನಾದ ದಕ್ಷಿಣ ಪ್ರಾಂತ್ಯದ ಫೆಸಿಪಿಕ್‌ ಮಹಾಸಾಗರಕ್ಕೆ ಅಂಟಿಕೊಂಡಿರುವ ಕ್ಷೆಯ್‌ನೇನ್‌ ದ್ವೀಪದಲ್ಲಿ ಮಲ್ಲಕಂಬ ಪ್ರದರ್ಶನ ಮಾಡುತ್ತಿದ್ದಾರೆ. ಚೀನಾ ಮಾತ್ರವಲ್ಲ ವಿಶ್ವದ ನಾನಾ ಭಾಗಗಳಿಂದ ಬರುವ ಸಾವಿರಾರು ಪ್ರವಾಸಿಗರ ಎದುರು ಪ್ರತಿದಿನ ಮಲ್ಲಕಂಬ ಪ್ರದರ್ಶನ ಮಾಡುತ್ತ ನಾಡಿನ ಸಾಹಸ ಕ್ರೀಡೆಯೊಂದನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. 

ಚೀನಾದ ಈ ಭಾಗದಲ್ಲಿ ಜೂನ್‌ ತಿಂಗಳಿಂದ ಸೆಪ್ಟೆಂಬರ್‌ವರೆಗೂ ವಿಶ್ವದ ಎಲ್ಲಾ ಭಾಗಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ಅವಧಿಯಲ್ಲೇ  ಫೇಂಟಾ ವಾಟರ್‌ವರ್ಲ್ಡ್ ಎಂಬ ದೈತ್ಯ ಪ್ರವಾಸೋದ್ಯಮ ಸಂಸ್ಥೆ ಪ್ರವಾಸಿಗರ ಎದುರು ವಿಶ್ವದ ಮಹಾನ್‌ ಕಲೆ, ಸಾಹಸ ಕ್ರೀಡೆಗಳು ಮತ್ತು ಮನೋರಂಜನಾ ತಂಡಗಳನ್ನು ಕರೆಯಿಸಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತದೆ. ಅಲ್ಲಿ ಭಾರತದಿಂದ ಈ ವರ್ಷ ಮಲ್ಲಕಂಬಕ್ಕೆ ಆಹ್ವಾನ ಸಿಕ್ಕಿದೆ. 

ಮಲ್ಲಕಂಬಕ್ಕೆ ಫಿದಾ: ಚೀನಾದ ಅತ್ಯಂತ ದೊಡ್ಡ ಫೆಂಟಾಸಿ ಪಾರ್ಕ್‌ಗಳಲ್ಲಿ ಒಂದಾಗಿರುವ ಕ್ಷೆ$çಯ್‌ನೇನ್‌ ದ್ವೀಪದ ಫೇಂಟಾ ವಾಟರ್‌ ವರ್ಲ್ಡ್ನಲ್ಲಿ ವಿಶ್ವದ ಏಳು ರಾಷ್ಟ್ರಗಳಾದ ಉತ್ತರ ಅಮೆರಿಕ, ಕಾಂಬೋಡಿಯಾ, ಉಕ್ರೇನ್‌, ವೆಸ್ಟ್‌ ಇಂಡೀಸ್‌, ಕೋಲಂಬಿಯಾ, ಉಗಾಂಡಾ ಮತ್ತು ಭಾರತದ ವಿವಿಧ ಸಾಹಸ ಕಲಾ ತಂಡಗಳು ತಮ್ಮ ಪ್ರದರ್ಶನ ನೀಡುತ್ತಿವೆ. 

ಭಾರತದಿಂದ ಕರ್ನಾಟಕದ ಅದರಲ್ಲೂ ಧಾರವಾಡ ಜಿಲ್ಲೆಯ ಗಂಡು ಕಲೆ ಎಂದೇ ಕರೆಯಿಸಿಕೊಳ್ಳುವ ಮಲ್ಲಕಂಬ ಪ್ರದರ್ಶನಕ್ಕೆ ಈ ವರ್ಷ ಅವಕಾಶ ನೀಡಲಾಗಿದೆ. ಜೂನ್‌ 27 ರಿಂದ ಸೆಪ್ಟೆಂಬರ್‌ 5 ರವರೆಗೂ ಧಾರವಾಡದ ಎಂಟು ಜನ ವಿದ್ಯಾರ್ಥಿಗಳಾದ ಮೈಲಾರಿ ಕಾಲವಾಡ, ರಫಿàಕ್‌ ಅಹ್ಮದ್‌, ಮಾರುತಿ ಮರಿಯಪ್ಪನವರ, ದಶರಥ ಚೌಹಾಣ್‌, ಹಸನಸಾಬ ಕುಂದಗೋಳ, ಕರಿಯಪ್ಪ ಕಳ್ಳಿಮನಿ, ಭೀಮಸಿ ಹಡಪದ ಮತ್ತು ಹನುಮಂತಪ್ಪ ಇಲ್ಲಿ ಮಲ್ಲಕಂಬ ಪ್ರದರ್ಶನ ನೀಡುತ್ತಿದ್ದಾರೆ.

ಮಲ್ಲಕಂಬಕ್ಕೆ ವಿದೇಶಿಗರ ಪೈಕಿ ಚೀನಿಯರೇ ಹೆಚ್ಚು ಒಲವು ತೋರುತ್ತಿದ್ದು, ಈ ತಂಡವನ್ನು ಕಾಯಂ ಆಗಿ ಅಲ್ಲಿಯೇ ಇರಿಸಿಕೊಳ್ಳುವುದಕ್ಕೂ ಸಂಸ್ಥೆ ಒಲವು ತೋರಿದೆ ಎಂದು ಮಲ್ಲಕಂಬ ತಂಡದ ಸದಸ್ಯ ರಫೀಕ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

* ಬಸವರಾಜ ಹೊಂಗಲ್‌  

ಟಾಪ್ ನ್ಯೂಸ್

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.