ತಾಲಿಬಾನ್ ನಾಯಕನ ಮಗ ತಾನೇ ನಡೆಸಿದ ಆತ್ಮಾಹುತಿ ದಾಳಿಗೆ ಬಲಿ
Team Udayavani, Jul 22, 2017, 4:08 PM IST
ಪೇಶಾವರ : ದಕ್ಷಿಣ ಅಫ್ಘಾನಿಸ್ಥಾನದ ಹೆಲ್‌ಮಂಡ್ ಪ್ರಾಂತ್ಯದಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸುವ ವೇಳೆ ತಾಲಿಬಾನ್ ನಾಯಕ ಮುಲ್ಲಾ ಹೈಬತುಲ್ಲಾ ಅಖುಂದ್‌ಝಾದಾ ನ ಮಗ ಹತನಾಗಿರುವುದಾಗಿ ತಾಲಿಬಾನ್ ಮುಖ್ಯ ವಕ್ತಾರ ತಿಳಿಸಿದ್ದಾನೆ.
ಮೃತ ತಾಲಿಬಾನ್ ನಾಯಕನ ಮಗನನ್ನು 23ರ ಹರೆಯದ ಅಬ್ದುರ್ ರೆಹಮಾನ್ ಎಂದು ಗುರುತಿಸಲಾಗಿದೆ. ಹಾಫೀಜ್ ಖಾಲಿದ್ ಎಂದೂ ತಿಳಿಯಲ್ಪಟ್ಟಿರುವ ಉಗ್ರ ಅಬ್ದುರ್ ರೆಹಮಾನ್, ಹೆಲ್ ಮಂಡ್ ಪ್ರಾಂತ್ಯದ ಗೆರೆಶ್ಕ್ ಪಟ್ಟಣದಲ್ಲಿ ಅಫ್ಘಾನ್ ಸೇನಾ ನೆಲೆಯ ಮೇಲೆ ಸ್ಫೋಟಕ ತುಂಬಿದ ವಾಹನವನ್ನು ಅಪ್ಪಳಿಸುವ ಯತ್ನದಲ್ಲಿ ತಾನೇ ಸ್ಫೋಟಕ್ಕೆ ಬಲಿಯಾದನೆಂದು ತಿಳಿದು ಬಂದಿದೆ.
ಅಬ್ದುರ್ ರೆಹಮಾನ್ ಮದ್ರಸ ವಿದ್ಯಾರ್ಥಿಯಾಗಿದ್ದ. ಆದರೆ ಆತ್ಮಾಹುತಿ ದಾಳಿ ನಡೆಸುವ ಉತ್ಕಟ ಹಂಬಲ ಹೊಂದಿದ್ದ. ಮೊನ್ನೆ ಗುರುವಾರ ಆತ ಆತ್ಮಾಹುತಿ ದಾಳಿಯನ್ನು ಸಂಘಟಿಸುವಲ್ಲಿ ಯಶಸ್ವಿಯಾದರೂ ಸ್ವತಃ ತಾನೇ ಸ್ಫೋಟಕ್ಕೆ ಬಲಿಯಾದ ಎಂದು ವಕ್ತಾರ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.