ಅಮಲು ಪದಾರ್ಥ ಮಾರಕವೆಂಬ ಅರಿವಿರಲಿ: ಕೈಯ್ಯೂರು
Team Udayavani, Jul 23, 2017, 7:50 AM IST
ಬಂಟ್ವಾಳ: ಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನಂತಹ ಹೊಸ ಆಕರ್ಷಣೆಯ ಜತೆಗೆ ಮಾದಕ ದ್ರವ್ಯಗಳ ಚಟಕ್ಕೂ ಬಲಿಯಾಗುತ್ತಿದ್ದಾರೆ. ಆರಂಭದಲ್ಲಿ ಮೋಜು ಮಸ್ತಿಗಾಗಿ ತೆಗೆದುಕೊಳ್ಳುವ ಇಂತಹ ಅಮಲು ಪದಾರ್ಥಗಳು ಭವಿಷ್ಯದಲ್ಲಿ ವಿದ್ಯಾರ್ಥಿ ಜೀವನವನ್ನು ಹಾಳು ಮಾಡುತ್ತದೆ ಎಂಬ ಅರಿವು ಸದಾ ಇರಬೇಕು ಎಂದು ಹಿರಿಯ ಸಾಮಾಜಿಕ ಸೇವಾಕರ್ತ ಕೈಯ್ಯೂರು ನಾರಾಯಣ ಭಟ್ ಹೇಳಿದರು.
ಅವರು ಧ.ಗ್ರಾ.ಯೋಜನೆ ಬಂಟ್ವಾಳ ವಲಯ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಜಂಟಿ ಆಶ್ರಯದಲ್ಲಿ ಲೊರೆಟ್ಟೊ ಕ್ರಿಸ್ತ ಜ್ಯೋತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಾಮಾಜಿಕ ಸ್ವಾಸ್ಥ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಕ್ಕೆ ಬೀಳಬಾರದು. ಒಮ್ಮೆ ಕೆಟ್ಟ ಚಟ ಆರಂಭವಾದರೆ ಅದರಿಂದ ನಿಮ್ಮ ವರ್ಚಸ್ಸು ಕಡಿಮೆಯಾಗಿ ಮನೆಮಂದಿಯಿಂದ ನೀವು ದೂರವಾಗುವಿರಿ. ನೀವು ಸಮಾಜಕ್ಕೆ ಬೇಡವಾದ ವ್ಯಕ್ತಿಯಾಗುವಿರಿ ಎಂದು ಹೇಳಿದರು.
ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಕಡೆಗೆ ಗಮನ ನೀಡುವ ಮೂಲಕ ಉತ್ತಮ ಅಂಕ ಪಡೆಯಲು ಪ್ರಯತ್ನಿಸಿ ನಿಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಿ ಎಂದರು.
ಮಾದಕ ದ್ರವ್ಯಗಳ ಸೇವನೆ ಪರಿಣಾಮ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಬಂಟ್ವಾಳ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ, ಖಜಾಂಚಿ ಪ್ರಕಾಶ ಬಾಳಿಗ, ಶಾಲಾ ಮುಖ್ಯಶಿಕ್ಷಕ ಫೆಲಿಕ್ಸ್ ಡಿ’ಸೋಜಾ, ಯೋಜನೆಯ ಮೇಲ್ವಿಚಾರಕ ಶಶಿಧರ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.