ರಸ್ತೆ ಬದಿಯಲ್ಲೇ ಒಣಗಿ ನಿಂತಿವೆ ಸಾಲು-ಸಾಲು ಮರಗಳು..!
Team Udayavani, Jul 23, 2017, 9:00 AM IST
ಕೆಯ್ಯೂರು : ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕೈಕಂಬದಿಂದ ಕೆಯ್ಯೂರು ಶಾಲೆ ತನಕ ಸಂಚರಿಸುವುದೆಂದರೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಪ್ರಾಣ ಭೀತಿ ಕಾಡದೇ ಇರದು. ಕಾರಣ ರಸ್ತೆಯ ಒಂದು ಬದಿಯಲ್ಲಿ ಆಳೆತ್ತರದ ಅಕೇಶಿಯಾ ಮರಗಳು ಒಣಗಿ ರಸ್ತೆಗೆ ಬಾಗಿ ನಿಂತಿವೆ..!
ಇಂತಹ ಅಪಾಯ ಆಹ್ವಾನಿಸುತ್ತಿರುವುದು ಪುತ್ತೂರು ತಾ.ಪಂ. ಹಾಲಿ ಅಧ್ಯಕ್ಷರ ಸ್ವ ಕ್ಷೇತ್ರ ಹಾಗೂ ಊರಿನಲ್ಲೇ ಹಾದು ಹೋದ ರಸ್ತೆಯ ಇಕ್ಕಲೆಯಲ್ಲಿ ಅನ್ನುವುದು ಅಚ್ಚರಿಯ ಸಂಗತಿ. ಇನ್ನೂ ಸ್ಥಳೀಯ ಗ್ರಾ.ಪಂ.ಸಾಮಾನ್ಯ ಸಭೆಯ ನಿರ್ಣಯ ಮೇರೆಗೆ ಸ್ಥಳಕ್ಕೆ ಬಂದ ಇಲಾಖೆಯ ಸಿಬಂದಿಗಳು, ಎರಡು ಮರ ಕಡಿದು ತೆರಳಿದ್ದು, ಉಳಿದ ಮರಗಳನ್ನು ಮುಟ್ಟಿಲ್ಲ..!
ಒಣಗಿ ನಿಂತ ಮರಗಳು
ಪುತ್ತೂರು-ಕುಂಬ್ರ-ಕೆಯ್ಯೂರು- ಬೆಳ್ಳಾರೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಲು ಅವಕಾಶ ಇರುವುದರಿಂದ ಇಲ್ಲಿ ವಾಹನ ಓಡಾಟವೂ ಅಧಿಕ. ಕೆಎಸ್‌ಆರ್‌ಟಿಸಿ ಬಸ್‌ಗಳು, ಟೂರಿಸ್ಟ್ ಕಾರುಗಳು ದಿನಂಪ್ರತಿ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತವೆ. ದೇರ್ಲ, ಅರಿಕ್ಕಿಲ, ಕಣಿಯಾರು ಮೊದಲಾದ ಭಾಗದಿಂದ ನೂರಾರು ಮಕ್ಕಳು ಅಂಗನವಾಡಿ, ಪ್ರಾಥಮಿಕ, ಹೈಸ್ಕೂಲು, ಪಿಯುಸಿಗಳಿಗೆ ಈ ರಸ್ತೆ ಬದಿಯಲ್ಲೇ ನಡೆದುಕೊಂಡು ಸಂಚರಿಸುತ್ತಾರೆ.
ಬೀಸುಗಾಳಿಯ ಪರಿಣಾಮ ಒಣಗಿದ ಅಕೇಶಿಯಾ ಜಾತಿಗೆ ಸೇರಿದ ಮರಗಳು ರಸ್ತೆಯ ಅಂಚಿಗೆ ವಾಲುತ್ತಿದ್ದು, ಅರ್ಧ ಕಿ.ಮೀ ದೂರಕ್ಕೂ ಅಧಿಕ ಪ್ರದೇಶದಲ್ಲಿ ಇಂತಹ ಮರಗಳು ಇವೆ. ಹಸಿರಾಗಿ ಇರುವ ಮರಗಳು ರಸ್ತೆ ಅಂಚಿಗೆ ರೆಂಬೆ-ಕೊಂಬೆ ಹರಡಿದ್ದು, ಮುರಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಯಾರು ಹೊಣೆ
ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯೊಳಗಿನ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆ ಇಲ್ಲಿ ಅಕೇಶಿಯಾ ಜಾತಿಯ ಗಿಡಗಳನ್ನು ನೆಟ್ಟಿದೆ. ರಸ್ತೆ ಬದಿಯಿಂದ ಐದಾರು ಮೀಟರ್ ಒಳಗಿನ ತನಕ ಗಿಡ ನೆಟ್ಟು ಅನಂತರ ಕಟಾವು ಮಾಡಲಾಗುತ್ತದೆ. ಅರಿಕ್ಕಿಲ ತಿರುವಿನಿಂದ ಕೈಕಂಬ-ಕೆಯ್ಯೂರು ಪ್ರಾಥಮಿಕ ಶಾಲೆ ಮುಂಭಾಗದ ತನಕ ಅಕೇಶಿಯಾ ಮರಗಳು ಹಬ್ಬಿವೆ. ನೆಟ್ಟು ಆಳೆತ್ತರಕ್ಕೆ ಬೆಳೆದು, ಒಣಗಿ ನಿಂತರೂ ಕಡಿಯುವವರು ಇಲ್ಲ. ಹಾಗಾಗಿ ರಸ್ತೆಯಲ್ಲಿ ಸಾಗುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನುತ್ತದೆ ಇಲ್ಲಿನ ಚಿತ್ರಣ.
ಗೊಂದಲದ ಗೂಡು
ತಾಲೂಕಿನ ರಸ್ತೆ ಬದಿಗಳಲ್ಲಿ ಇರುವ ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಮಧ್ಯೆ ಗೊಂದಲ ಇದೆ. ಕಡಿಯುವುದು ನಮ್ಮ ಕರ್ತವ್ಯ ಅಲ್ಲ, ನೆಡುವುದು ಮಾತ್ರ ಎಂದು ಅರಣ್ಯ ಇಲಾಖೆ ಹೇಳಿದರೆ, ಮರ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಪಿಡಬ್ಯುÉಡಿ ಇಲಾಖೆ ರಸ್ತೆ ಬದಿಗಳಲ್ಲಿನ ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತದೆ. ಆಗ ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ಮಾತ್ರ ನಮಗೆ ತೆರವು ಮಾಡಲು ಅಧಿಕಾರ ಇರುವುದು. ಅದೇ ತರಹ ಮರ ಬಿದ್ದ ಮೇಲೆ ಅದನ್ನು ತೆರವು ಮಾಡಬೇಕಾದದ್ದು ಇಲಾಖೆಯ ಜವಾಬ್ದಾರಿ. ಅದಕ್ಕೆ ಲೋಕೋಪಯೋಗಿ ಇಲಾಖೆ ಹೊಣೆ ಅಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು. ಹಾಗಾಗಿ ಈ ಜಂಜಾಟದ ಮಧ್ಯೆ ಇಂತಹ ಅಪಾಯಕಾರಿ ಮರಗಳು ಜನರ ಪ್ರಾಣಕ್ಕೆ ಆಪತ್ತು ತರುವುದು ನಿಶ್ಚಿತ ಅನ್ನುವುದು ಸಾರ್ವಜನಿಕರ ದೂರು.
ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ತಂತಿಗಳು
ಮರದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ ನೂರಾರು ಮನೆಯ ವಿದ್ಯುತ್ ಪರಿಕರಗಳು ಹಾನಿಗೀಡಾಗುವ ಸಾಧ್ಯತೆ ಇದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕಿದ್ದರೂ, ಆ ಕೆಲಸ ಆಗಿಲ್ಲ. ಮಳೆಗಾಲದ ಅಪಾಯ ಎದುರಿಸಲು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದರೂ, ಇಲಾಖೆಗಳು ಕ್ಯಾರೆ ಅಂದಿಲ್ಲ ಅನ್ನುವುದಕ್ಕೆ ಇಲ್ಲಿನ ಚಿತ್ರಣ ಉದಾಹರಣೆ.
ಗಮನಕ್ಕೆ ತರಲಾಗಿದೆ
ಅಪಾಯಕಾರಿ ಮರ ತೆರವಿನ ಬಗ್ಗೆ ಗ್ರಾ.ಪಂ. ಸಭೆಗಳಲ್ಲಿಯೂ ಪ್ರಸ್ತಾಪವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
– ಭವಾನಿ ಚಿದಾನಂದ, ಅಧ್ಯಕ್ಷರು, ತಾ.ಪಂ. ಪುತ್ತೂರು.
ಸಭೆಯಲ್ಲಿ ನಿರ್ಣಯ
ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಎರಡು ದಿನಗಳ ಹಿಂದೆ ಬಂದು ಎರಡು ಮರ ತೆರವು ಮಾಡಿದ್ದಾರೆ. ಉಳಿದವು ಹಾಗೆಯೇ ಇವೆೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು.
– ಬಾಬು ಬಿ. ಅಧ್ಯಕ್ಷರು, ಕೆಯ್ಯೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.