ಮಂಗಳೂರು: ಕೇಂದ್ರ  ಬಸ್‌ ನಿಲ್ದಾಣ ಕೊನೆಗೂ ಪಂಪ್‌ವೆಲ್‌ನತ್ತ ?


Team Udayavani, Jul 23, 2017, 6:20 AM IST

pumpwell.jpg

ಮಂಗಳೂರು:  ಮಂಗಳೂರು ನಗರ ಸ್ಮಾರ್ಟ್‌ ಸಿಟಿಯಾಗಲು ಹೊರಟಿ ದ್ದರೂ 21 ವರ್ಷಗಳಿಂದ ತಾತ್ಕಾಲಿಕ ಬಸ್‌ ನಿಲ್ದಾಣದಲ್ಲೇ ನರಳುತ್ತಿದೆ. ಕೊನೆಗೂ ಪಂಪ್‌ವೆಲ್‌ನತ್ತ ಸ್ಥಳಾಂತರ ಗೊಳ್ಳುವ ಸೂಚನೆ ಕಂಡು ಬಂದಿದೆ. ಈ ಬಗ್ಗೆ 15 ದಿನದಲ್ಲಿ ನಿರ್ಧಾರವಾಗಲಿದೆ.

ಹಂಪನಕಟ್ಟೆಯಿಂದ ನೆಹರೂ ಮೈದಾನದ ಬಳಿ ಹಾಕಿ  ಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ  ಸರ್ವಿಸ್‌ ಬಸ್‌ನಿಲ್ದಾಣವನ್ನು 1996ರ ಅ. 6ರಂದು ಸ್ಥಳಾಂತರಿಸಲಾಯಿತು. ಸುಮಾರು 21 ವರ್ಷಗಳಷ್ಟು  ಸುದೀರ್ಘ‌ ಅವಧಿ ಯಿಂದ ತಾತ್ಕಾಲಿಕ ನೆಲೆಯಲ್ಲಿದ್ದು, ಅಭಿ ವೃದ್ಧಿ ಕಾಣದೇ ತ್ರಿಶಂಕು ಸ್ಥಿತಿಯಲ್ಲಿದೆ. ಹಾಗಾಗಿ ತೇಪೆ ಕಾಮಗಾರಿಯಲ್ಲೇ ತೃಪ್ತಿ ಪಡುವಂತಾಗಿದೆ.

ಮಂಗಳೂರು ನಗರ ಅತಿಯಾದ ವಾಹನ ದಟ್ಟಣೆ ಎದುರಿಸುತ್ತಿದೆ. 1993- 94ರಲ್ಲಿ  ಸುಮಾರು 1.2 ಲಕ್ಷ ವಾಹನಗಳಿದ್ದರೆ  ಪ್ರಸ್ತುತ  ಸುಮಾರು 4 ಲಕ್ಷ  ಮೀರಿದ್ದು 4 ಪಟ್ಟು ಹೆಚ್ಚಾಗಿದೆ.  ದಿನವೊಂದಕ್ಕೆ  ಸರಾಸರಿ ನೂರು ವಾಹನಗಳು ಹೊಸದಾಗಿ ನೋಂದಣಿ ಯಾಗುತ್ತಿವೆ. ಸಿಟಿಬಸ್‌, ಸರ್ವಿಸ್‌ಬಸ್‌, ಎಕ್ಸ್‌ಪ್ರೆಸ್‌ ಬಸ್‌ಗಳು, ಟೂರಿಸ್ಟ್‌ ಬಸ್‌ಗಳು, ಅಂತಾರಾಜ್ಯ ಪರವಾನಿಗೆಯ ಬಸ್‌ಗಳು,  ಶಾಲಾ ಕಾಲೇಜುಗಳ ಬಸ್‌ಗಳು ಸಹಿತ  ಸುಮಾರು 4 ಸಾವಿರಕ್ಕೂ ಹೆಚ್ಚು ಬಸ್‌ಗಳಿವೆ.  ಹೊಸದಾಗಿ ಇಲ್ಲಿಗೆ ಬಸ್‌ಗಳ ಆಗಮನಕ್ಕೆ ಪರವಾನಿಗೆ  ಸಿಗುವುದಿಲ್ಲ. 

ಯೋಜನೆಯಾಗಿಯೇ ಉಳಿದಿದೆ
ನಗರಕ್ಕೆ  ಸುಸಜ್ಜಿತ  ಬಸ್‌ ನಿಲ್ದಾಣ ಪ್ರಸ್ತಾವಕ್ಕೆ  ಮೂರು ದಶಕಗಳ ಇತಿಹಾಸ ವಿದೆ. ಬಸ್‌ ನಿಲ್ದಾಣವನ್ನು  ನೆಹರೂ ಮೈದಾನದ  ಹಾಕಿ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡುವಾಗಲೇ  ಸೂಕ್ತ ಪ್ರದೇಶದಲ್ಲಿ   ವಿಶಾಲ ಮತ್ತು ಸುಸಜ್ಜಿತ ಬಸ್‌ ನಿಲ್ದಾಣವನ್ನು  ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದು ಇಂದಿನವರೆಗೆ ಕಾರ್ಯಗತಗೊಂಡಿಲ್ಲ.

ಜಾಗ ಇದೆ; ಜಾರಿಯಾಗುತ್ತಿಲ್ಲ 
ಹಲವು ಪ್ರದೇಶಗಳು  ಪ್ರಸ್ತಾಪಕ್ಕೆ ಬಂದು  ಕಡೆಗೆ ಪಂಪ್‌ವೆಲ್‌ನಲ್ಲಿ  ಒಟ್ಟು 17.5 ಎಕ್ರೆ ಜಾಗವನ್ನು  ಅಂದಾಜಿಸ ಲಾಯಿತು. ರಾಷ್ಟ್ರೀಯ ಹೆದ್ದಾರಿ  66ಕ್ಕೆ ತಾಗಿಕೊಂಡಂತೆ  ಪ್ರಥಮ ಹಂತದಲ್ಲಿ  ಸುಮಾರು 8  ಎಕ್ರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಪ್ರಸ್ತುತ ಉಳಿದ 7.33 ಎಕ್ರೆ ಪ್ರದೇಶಕ್ಕೆ  ಮಣ್ಣು ತುಂಬಿಸುವ ಕಾರ್ಯ ಆರಂಭವಾಗಿ 3 ವರ್ಷಗಳಾಗಿವೆ. ಈ ವರ್ಷದ  ಆರಂಭದಲ್ಲಿ ಇಲ್ಲಿ  ಇಂಟರ್‌ಲಾಕ್‌ ಅಳವಡಿಸಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ  ಸರ್ವಿಸ್‌  ಬಸ್‌ ನಿಲ್ದಾಣವನ್ನು  ಸ್ಥಳಾಂತರಿಸುವ ಬಗ್ಗೆ  ಪ್ರಸ್ತಾವಿಸಲಾಗಿತ್ತು¤.  ಮುಖ್ಯಮಂತ್ರಿಯ 2ನೇ ಹಂತದ 100 ಕೋ.ರೂ. ಅನುದಾನದಲ್ಲಿ ಒಂದಷ್ಟು ಹಣವನ್ನು ಇದರ ಅಭಿವೃದ್ಧಿಗೆ  ವಿನಿಯೋಗಿಸುವ ಬಗ್ಗೆ  ತೀರ್ಮಾನವಾಗಿತ್ತು.

ಯಾವುದೂ ಕೈಗೂಡಿಲ್ಲ. 
ಪ್ರಸ್ತುತ ಲಭ್ಯವಿರುವ 7.33 ಎಕ್ರೆ ಜಾಗದಲ್ಲಿ ಯಾವ ರೀತಿ ಸುಸಜಿcತ ಬಸ್‌ನಿಲ್ದಾಣ ನಿರ್ಮಿಸಬಹುದು ಎಂಬ ಬಗ್ಗೆ ಸಾಧ್ಯತಾ ವರದಿ ಹಾಗೂ ನಕ್ಷೆ ಸಿದ್ಧಗೊಂಡಿದೆ. ಸರಕಾರಿ- ಖಾಸಗಿ ನೆಲೆಯಲ್ಲಿ ಇದನ್ನು  ನಿರ್ಮಿಸಲು ಉದ್ದೇಶಿಸಲಾಗಿದ್ದು, ಖಾಸಗಿ ಬಿಡ್‌ದಾರರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಲ್ಲಿ  ಈ ಬಗ್ಗೆ  ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಪಂಪ್‌ವೆಲ್‌ನಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಚಿಂತನೆ
ಪಂಪ್‌ವೆಲ್‌ನಲ್ಲಿ  ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ ಕುರಿತಂತೆ ಪ್ರಕ್ರಿಯೆಗಳು ಜಾರಿಯಲ್ಲಿದೆ.  ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣವಾಗುವವರೆಗೆ ತಾತ್ಕಾಲಿಕ ನೆಲೆಯಲ್ಲಿ ಬಸ್‌ನಿಲ್ದಾಣ ವ್ಯವಸ್ಥೆ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆದಿದೆ. ಮುಂದಿನ 15 ದಿನಗಳಲ್ಲಿ  ಈ ಬಗ್ಗೆ ನಿರ್ಧಾರವಾಗಬಹುದು.  ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ಬಸ್‌ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಇದ್ದು, ಈ ಬಗ್ಗೆ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಸಭೆ ಜರಗಿದ್ದು ಆಸಕ್ತರು ಭಾಗವಹಿಸಿದ್ದಾರೆ.  ಮಂಗಳೂರಿನಲ್ಲಿ  ವಾಹನದಟ್ಟಣೆ ನಿಭಾಯಿಸಲು ಬಸ್‌ನಿಲ್ದಾಣವನ್ನು  ಪಂಪ್‌ವೆಲ್‌ಗೆ ಸ್ಥಳಾಂತರಿಸುವುದು ಅನಿವಾರ್ಯ.
– ಜೆ .ಆರ್‌.ಲೋಬೋ, ಶಾಸಕರು

ಹೆದ್ದಾರಿ ಅಡಚಣೆ ನೆವ
ನಂತೂರು ವೃತ್ತದಿಂದ ತಲಪಾಡಿವರೆಗೆ ರಾ.ಹೆ. 66ನ್ನು ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ನಿರ್ಮಾಣವಾಗುತ್ತಿದೆ. ಈ ಹಂತದಲ್ಲಿ ಇಲ್ಲಿ  ಬಸ್‌ನಿಲ್ದಾಣ ನಿರ್ಮಾಣವಾದರೆ ಸಂಚಾರ ವ್ಯವಸ್ಥೆ ಬಾಧಿತವಾಗಲಿದೆ. ತಾಂತ್ರಿಕ ಸಮಸ್ಯೆಗಳು ಉದ್ಭವವಾಗಲಿದೆ. ನಿಲ್ದಾಣಕ್ಕೆ  ಬಸ್‌ಗಳ ಆಗಮನ ನಿರ್ಗಮನಕ್ಕೆ ಸಮಸ್ಯೆಯಾಗಲಿದೆ ಎಂಬ ವಾದವನ್ನು  ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಿಡುತ್ತಿದೆ.

ಟಾಪ್ ನ್ಯೂಸ್

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.